Udupi: ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ! ಭರ್ಜರಿ ಆದಾಯ ಗಳಿಸಿ

ಗ್ರಾಮೀಣ ಭಾಗದ ಯುವಕ ಯುವತಿಯರ ಜೀವನವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಸೋಲಾರ್ ಚಕ್ಕುಲಿ ಮೇಕರ್ ತಯಾರಿಸಲಾಗಿದೆ. ಈ ಯಂತ್ರ ಹಳ್ಳಿಗಳಲ್ಲಿ ಹೊಸ ವ್ಯವಹಾರಕ್ಕೆ ಕೈಹಾಕುವ ಉತ್ಸಾಹಿಗಳಿಗೆ ನೆರವಾಗಲಿದೆ.

First published:

  • 17

    Udupi: ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ! ಭರ್ಜರಿ ಆದಾಯ ಗಳಿಸಿ

    ಸೂರ್ಯನ ಬೆಳಕಿನಿಂದ ಈಗ ಚಕ್ಕುಲಿಯನ್ನೂ ತಯಾರಿಸಬಹುದು ಕಣ್ರೀ! ಹೌದು, ಸೂರ್ಯನ ಬೆಳಕಿನಿಂದ ಚಕ್ಕುಲಿ ತಯಾರಿಸುವ ವಿಶೇಷ ಸಾಧನವೊಂದನ್ನು ಆವಿಷ್ಕಾರ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Udupi: ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ! ಭರ್ಜರಿ ಆದಾಯ ಗಳಿಸಿ

    ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡುತ್ತಿರುವ ಸೆಲ್ಕೋ ಸಂಸ್ಥೆ ಸೋಲಾರ್ ಚಕ್ಕುಲಿ ಮೇಕರ್ ಸಾಧನವನ್ನು ಕಂಡುಹಿಡಿದೆ. ಈ ಚಕ್ಕುಲಿ ಮೇಕರ್​ನ್ನು ಇತ್ತೀಚಿಗೆ ಉಡುಪಿಯಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರದರ್ಶನ ಮಾಡಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Udupi: ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ! ಭರ್ಜರಿ ಆದಾಯ ಗಳಿಸಿ

    ಈ ಸೋಲಾರ್ ಚಕ್ಕುಲಿ ಮೇಕರ್ ಬಳಸಿ ಒಂದೇ ಗಂಟೆಯಲ್ಲಿ 10 ಕೆಜಿ ಚಕ್ಕುಲಿಯನ್ನು ತಯಾರಿಸಬಹುದಾಗಿದೆ. ಚಕ್ಕುಲಿಯೊಂದೇ ಅಲ್ಲದೇ, ಕೋಡುಬಳೆ ಮತ್ತಿತರ ತಿಂಡಿಗಳನ್ನು ಸಹ ಈ ಸಾಧನ ಬಳಸಿ ತಯಾರಿಸಬಹುದಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Udupi: ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ! ಭರ್ಜರಿ ಆದಾಯ ಗಳಿಸಿ

    ಈ ಸೋಲಾರ್ ಚಕ್ಕುಲಿ ಮೇಕರ್ ಸಾಧನವನ್ನು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆದರೂ ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಸಂಶೋಧನೆ ಮತ್ತು ಅಭಿವೃದ್ಧಿಯ ಅಂತಿಮ ಹಂತದಲ್ಲಿದ್ದೇವೆ ಎಂದು ಸೆಲ್ಕೋ ಸಂಸ್ಥೆ ತಿಳಿಸಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Udupi: ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ! ಭರ್ಜರಿ ಆದಾಯ ಗಳಿಸಿ

    [caption id="attachment_1000479" align="alignnone" width="1600"] ಸೋಲಾರ್ ಚಕ್ಕುಲಿ ಮೇಕರ್ ಯಂತ್ರವನ್ನು ಬ್ಲೂಟೂತ್ ಮೂಲಕ ಮೊಬೈಲ್ ಫೋನ್​ಗೆ ಸಂಪರ್ಕಿಸಬಹುದು. ಚಕ್ಕುಲಿ ತಯಾರಿಸುವಾಗ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಚಕ್ಕುಲಿ ಹಿಟ್ಟಿನ ಪ್ರಮಾಣ, ಗಾತ್ರ ಮತ್ತು ದಪ್ಪ ಮುಂತಾದವುಗಳನ್ನು ನಿರ್ಧರಿಸಬಹುದು ಎಂದು ಸೆಲ್ಕೋ ಪ್ರತಿನಿಧಿ ತಿಳಿಸಿದ್ದಾರೆ.  (ಸಾಂದರ್ಭಿಕ ಚಿತ್ರ)

    [/caption]

    MORE
    GALLERIES

  • 67

    Udupi: ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ! ಭರ್ಜರಿ ಆದಾಯ ಗಳಿಸಿ

    ಗ್ರಾಮೀಣ ಭಾಗದ ಯುವಕ ಯುವತಿಯರ ಜೀವನವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಸೋಲಾರ್ ಚಕ್ಕುಲಿ ಮೇಕರ್ ತಯಾರಿಸಲಾಗಿದೆ. ಈ ಯಂತ್ರ ಹಳ್ಳಿಗಳಲ್ಲಿ ಹೊಸ ವ್ಯವಹಾರಕ್ಕೆ ಕೈಹಾಕುವ ಉತ್ಸಾಹಿಗಳಿಗೆ ನೆರವಾಗಲಿದೆ ಎನ್ನಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Udupi: ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ! ಭರ್ಜರಿ ಆದಾಯ ಗಳಿಸಿ

    ಅಂದಾಜು 2.5 ಲಕ್ಷ ರೂ. ಬೆಲೆಯ ಈ ಚಕ್ಕುಲಿ ಮೇಕರ್ ಯಂತ್ರಕ್ಕೆ ಸೆಲ್ಕೋ ಶೇ.25ರಷ್ಟು ಸಬ್ಸಿಡಿ ನೀಡುವುದಾಗಿ ತಿಳಿಸಿದೆ. ಒಟ್ಟಾರೆ ಈ ಯಂತ್ರದ ಮೂಲಕ ಗ್ರಾಮೀಣ ಭಾಗದ ಉತ್ಸಾಹಿಗಳಿಗೆ ಈ ಸೋಲಾರ್ ಯಂತ್ರ ಹೊಸ ಬ್ಯುಸಿನೆಸ್ ಆರಂಬಿಸಲು ದಾರಿಯಾಗುವ ಲಕ್ಷಣವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES