ಮಂಡ್ಯದ ಶುಗರ್ ಟೌನ್ನಲ್ಲಿ ವಿಶೇಷ ಮತಕೇಂದ್ರ ಸ್ಥಾಪನೆ ಮಾಡಲಾಗಿದ್ದು, ತಳಿರು, ತೋರಣಗಳಿಂದ ಶೃಂಗಾರ ಮಾಡಲಾಗಿದೆ. ಬಾಳೆ ಕಂಬ, ಮಾವಿನ ಸೊಪ್ಪು ಕಟ್ಟುವ ಮೂಲಕ ಹಬ್ಬದ ವಾತಾವರಣ ನಿರ್ಮಿಸಲಾಗಿದೆ. ಮತ ಕೇಂದ್ರದ ಗೋಡೆಗಳ ಮೇಲೆ ರಾಜ ಮಹಾರಾಜರ ಕಲಾಕೃತಿ ರಚಿಸಲಾಗಿದೆ. ಮತದಾರರ ಜಾಗೃತಿಗಾಗಿ ರಚಿಸಿದ ವಿಶೇಷ ಮತ ಕೇಂದ್ರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವೆಲ್ಲದರ ಜೊತೆಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಸಖಿ ಸೆಂಟರ್! ಹೌದು, ಉಡುಪಿಯಲ್ಲಿ ಸಖಿ ಮತದಾನ ಕೇಂದ್ರ ಎಲ್ಲರ ಗಮನಸೆಳೆಯುತ್ತಿದೆ. ಉಡುಪಿಯ ಸರ್ಕಾರಿ ವಳಕಾಡು ಶಾಲೆಯಲ್ಲಿರುವ ಸಖಿ ಸೆಂಟರ್ ಒಳಹೊಕ್ಕರೆ ಯಾವುದೋ ಮದುವೆಗೆ ಬಂದಂತೆ ಭಾಸವಾಗುವಂತಿದೆ. ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ 25 ಸಖಿ ಕೇಂದ್ರಗಳ ನಿರ್ಮಾಣ ಮಾಡಲಾಗಿದೆ. ಹೂವು, ಕೊಡೆ, ಬಣ್ಣ ಬಣ್ಣದ ಕರ್ಟನ್ ಹೊಂದಿರುವ ಅಲಂಕೃತ ಸಖಿ ಸೆಂಟರ್ ಎಲ್ಲರ ಆಕರ್ಷಣೆ ಕೇಂದ್ರ ಬಿಂದುವಾಗಿದೆ.