Shwetha in Saree: ರಾಯಲ್ ಬ್ಲೂ ಕಲರ್ ಸೀರೆಯಲ್ಲಿ ಮಿಂಚಿದ ಶ್ವೇತಾ ಚೆಂಗಪ್ಪ, ವಾವ್ ಎಂದ ಅಭಿಮಾನಿಗಳು
ಕಾದಂಬರಿ ಧಾರಾವಾಹಿ ಮೂಲಕ ಶ್ವೇತಾ ಚೆಂಗಪ್ಪ ಜನಪ್ರಿಯ ಆಗಿದ್ದರು. ಮಜಾ ಟಾಕೀಸ್ನಲ್ಲಿ ರಾಣಿಯಾಗಿ ಹೆಸರು ಮಾಡಿದ್ರು. ಕೆಲವೊಂದು ಚಿತ್ರಗಳಲ್ಲೂ ಸಹ ಶ್ವೇತಾ ಚಂಗಪ್ಪ ಅಭಿನಯಿಸಿದ್ದಾರೆ. ಈಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂಬರ್ 01 ಕಾರ್ಯಕ್ರಮದ ನಿರೂಪಕಿಯಾಗಿದ್ದಾರೆ. ಅವರು ಶೋಗಾಗಿ ಮಿಂಚಿದ್ದು ಈ ರೀತಿ ನೋಡಿ.
ಶ್ವೇತಾ ಚಂಗಪ್ಪ ಅಂದ್ರೆ ನೆನಪಾಗೋದು ಕಾದಂಬರಿ ಧಾರಾವಾಹಿ ಅದರಲ್ಲಿ ಪ್ರುಖ ಪಾತ್ರ ವಹಿಸಿದ್ದ ನಟಿ. 2006 ರಲ್ಲಿ ಬಾಲಾಜಿ ಟೆಲಿಫಿಲ್ಮ್ಸ್ ನಿರ್ಮಿಸಿದ್ದ ಧಾರಾವಾಹಿ ಕಾದಂಬರಿ. ಎಷ್ಟೋ ಜನ ಅಭಿಮಾನಿಗಳನ್ನು ಹೊಂದಿದ್ದ ಸೀರಿಯಲ್.
2/ 8
2003-2005ರ ಅವಧಿಯಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ, ಎಸ್. ನಾರಾಯಣ್ ನಿರ್ದೇಶಿಸಿದ ಸುಮತಿ ಧಾರಾವಾಹಿಯ ಮೂಲಕ ಅವರು ಶ್ವೇತಾ ಚಂಗಪ್ಪ ತಮ್ಮ ನಟನಾ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.
3/ 8
ಕಲರ್ಸ್ ಕನ್ನಡದಲ್ಲಿ ಸೃಜನ್ ಲೋಕೇಶ್ ಅವರೊಂದಿಗೆ ಮಜಾ ಟಾಕೀಸ್ನಲ್ಲಿ ರಾಣಿಯಾಗಿ ನಟಿಸುತ್ತಿದ್ದರು. ದರ್ಶನ್ ತೂಗುದೀಪ್ ಜೊತೆ ತಂಗಿಗಾಗಿ, ವಿಷ್ಣುವರ್ಧನ್ ಜೊತೆ ವರ್ಷಾ ಕನ್ನಡ ಸಿನಿಮಾಗಳಲ್ಲೂ ಶ್ವೇತಾ ನಟಿಸಿದ್ದಾರೆ.
4/ 8
ಸದ್ಯ ಜೀ ಕನ್ನಡದಲ್ಲಿ ಜೋಡಿ ನಂಬರ್ 01 ಕಾರ್ಯಕ್ರಮ ನಡೆಸುತ್ತಿದ್ದಾರೆ. ಆನೆಗುಂದಿ ಹಳ್ಳಿ ಉತ್ಸವಕ್ಕೆ ಈ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
5/ 8
ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಷಯಗಳು. ಹೆಣ್ಣಿಗೆ ಸೀರೆ ಅತ್ಯಂತ ಚೆಂದ ಅಲ್ವಾ ಎಂದು ಶಿರ್ಷಿಕೆ ಬರೆದು ಪೋಟೋ ಶೇರ್ ಮಾಡಿದ್ದಾರೆ.
6/ 8
ನನ್ನ ಇಷ್ಟು ಸುಂದರವಾಗಿ ಕಾಣುವಂತೆ ಟ್ರೆಡಿಷನಲ್ ಲುಕ್ ಕೊಟ್ಟಿದ್ದು ನನ್ನ ಟೀಂ ಎಂದು ಧನ್ಯವಾದ ಹೇಳಿದ್ದಾರೆ. ಸೀರೆಯಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ.
7/ 8
ಬಿಗ್ ಬಾಸ್ ಸೀಸನ್ 02 ರ ಸ್ಪರ್ಧಿಯಾಗಿದ್ದರು ಶ್ವೇತಾ ಚಂಗಪ್ಪ. ತುಂಬಾ ಉತ್ತಮವಾಗಿ ಆಟವಾಡಿ ಜರ ಪ್ರೀತಿ ಗಳಿಸಿದ್ದರು. ಒಂದು ಮಗುಬಿನ ತಾಯಿಯಾಗಿದ್ದರೂ ನೋಡಲು ಸುಂದರವಾಗಿ ಕಾಣುತ್ತಿದ್ದಾರೆ.
8/ 8
ಜೀ ಕನ್ನಡ ಕುಟುಂಬ ಅವಾರ್ಡ್ ನಲ್ಲಿ 2 ಬಾರಿ ಅತ್ಯುತ್ತಮ ನಿರೂಪಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅರುಂಧತಿ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ಕರ್ನಾಟಕ ಸರ್ಕಾರದಿಂದ 2013 ರ ಅತ್ಯುತ್ತಮ ನಟಿ ಎಂದು ಮಾಧ್ಯಮ ಸನ್ಮಾನ ಪ್ರಶಸ್ತಿ ನೀಡಿತ್ತು