ಜಗತ್ತಿನಲ್ಲಿ ನಾವು ಯೋಚಿಸಿರದ ಹಲವು ವಿಭಿನ್ನ ಮತ್ತು ವಿಚಿತ್ರ ಸಂಗತಿಗಳಿವೆ. ಕೆಲವರು ಕೇಳಿರುವ ಅನೇಕ ಅದ್ಭುತ ಸ್ಥಳಗಳು, ನಿಯಮಗಳು, ಸಂಪ್ರದಾಯಗಳು ಇವೆ. ಇಂದು ನಾವು ವಿಭಿನ್ನ ರೆಸ್ಟೋರೆಂಟ್ ಬಗ್ಗೆ ಹೇಳಲಿದ್ದೇವೆ, ಅಲ್ಲಿ ನೀವು ಪ್ರವೇಶಿಸಲು ನಿಮ್ಮ ಬಟ್ಟೆಗಳನ್ನು ತೆಗೆಯಬೇಕು. ಅಷ್ಟೇ ಅಲ್ಲ, ದಪ್ಪಗಿರುವವರೂ ಈ ರೆಸ್ಟೋರೆಂಟ್‌ಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಹಾಗಿದ್ರೆ ಈ ರೆಸ್ಟೋರೆಂಟ್ ಎಲ್ಲಿದೆ, ಇದರ ವಿಶೇಷತೆ ಏನು ಎಂಬುದನ್ನು ಈ ಲೇಖನದಲ್ಲಿದೆ ಓದಿ.
ಟೋಕಿಯೋದಲ್ಲಿರುವ ಈ ರೆಸ್ಟೋರೆಂಟ್‌ನ ಹೆಸರು 'ದಿ ಅಮೃತ್'. ಪ್ರವಾಸಿಗರು ಈ ರೆಸ್ಟೋರೆಂಟ್‌ಗೆ ಹೋಗುವ ಮೊದಲು ತಮ್ಮನ್ನು ತೂಗಬೇಕು. ಅವರು ಅಧಿಕ ತೂಕವನ್ನು ಹೊಂದಿದ್ದರೆ, ಅವರಿಗೆ ರೆಸ್ಟೋರೆಂಟ್‌ಗೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೇ ದೇಹದ ಮೇಲೆ ಟ್ಯಾಟೂ ಇದ್ದರೆ ಸಹ ಒಳಹೋಗಲು ಬಿಡುವುದಿಲ್ಲ. ರೆಸ್ಟೋರೆಂಟ್‌ನ ವೆಬ್‌ಸೈಟ್‌ನಲ್ಲಿ ನೀವು ನಿಯಮಗಳ ಪಟ್ಟಿಯನ್ನು ಸಹ ಕಾಣಬಹುದು.