Weird Job: ಜಸ್ಟ್ ಬೆಡ್ ಮೇಲೆ ನಿದ್ರೆ ಮಾಡುವ ಉದ್ಯೋಗಕ್ಕೆ 15 ಲಕ್ಷ ರೂ. ಸಂಬಳ ಕೊಡಲಿದೆ ನಾಸಾ!
ಮಾಡಲು ಕೆಲಸ ಸುಲಭವಾಗಿರಬೇಕು, ಜಾಸ್ತಿ ಸಂಬಳ ಸಿಗಬೇಕು ಅನ್ನೋದು ಬಹುತೇಕರ ಕನಸು. ಇನ್ನು ವಿಶ್ವದಲ್ಲಿ ಚಿತ್ರ-ವಿಚಿತ್ರ ಕೆಲಸಗಳಿವೆ. ಇದಕ್ಕಾಗಿ ದೊಡ್ಡ ವೇತನವನ್ನು ನೀಡಲಾಗುತ್ತದೆ. ಅಂತಹದ್ದೇ ಒಂದು ಉದ್ಯೋಗದ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ.
ಲಕ್ಷ ಲಕ್ಷ ಸಂಬಳದ ಈ ಉದ್ಯೋಗದ ಬಗ್ಗೆ ತಿಳಿಯುತ್ತಿದ್ದಂತೆ ನೀವು ಶಾಕ್ ಆಗುತ್ತೀರಿ. ಹೌದು ಜಸ್ಟ್ ಬೆಡ್ ಮೇಲೆ ಮಲಗಿ ನಿದ್ರಿಸುವುದ್ದಕ್ಕೆ ಬರೋಬ್ಬರಿ 15 ಲಕ್ಷ ರೂ. ಸಂಬಳವಂತೆ. ಕಷ್ಟ ಆದ್ರೂ ನೀವು ಇದನ್ನು ನಂಬಲೇಬೇಕು.
2/ 7
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೇವಲ ಎರಡು ತಿಂಗಳು ನಿದ್ರಿಸಬಲ್ಲ ಜನರನ್ನು ಹುಡುಕುತ್ತಿದೆ. ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ.. ಇಂಥ 24 ಮಂದಿಗೆ ನಾಸಾ 15 ಲಕ್ಷ ರೂಪಾಯಿಗೂ ಹೆಚ್ಚು ಹಣ ಕೊಡಲು ಹೊರಟಿದೆ. (ಸಾಂಕೇತಿಕ ಚಿತ್ರ)
3/ 7
ಆಯ್ಕೆಯಾದವರು ಎರಡು ತಿಂಗಳ ಕಾಲ ಕೃತಕ ಗುರುತ್ವಾಕರ್ಷಣೆಯಲ್ಲಿ ಬದುಕಬೇಕಾಗುತ್ತದೆ. ಅಂತಹ ವಾತಾವರಣದಲ್ಲಿ ದೀರ್ಘಕಾಲ ಬದುಕಿದ ನಂತರ ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯಲು ನಾಸಾ ಈ ಸಂಶೋಧನೆಗೆ ಮುಂದಾಗಿದೆ. (ಸಾಂಕೇತಿಕ ಚಿತ್ರ)
4/ 7
ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಮತ್ತು ನಾಸಾದ ಜರ್ಮನ್ ಏರೋಸ್ಪೇಸ್ ಸೆಂಟರ್ ಜಂಟಿಯಾಗಿ ಕೃತಕ ಗುರುತ್ವಾಕರ್ಷಣೆಯ ಆಧಾರದ ಮೇಲೆ ಮಲಗುವ ಬಗ್ಗೆ ಅಧ್ಯಯನವನ್ನು ನಡೆಸುತ್ತಿವೆ. (ಸಾಂಕೇತಿಕ ಚಿತ್ರ)
5/ 7
ಅಧ್ಯಯನದಲ್ಲಿ ಭಾಗವಹಿಸುವ ಸ್ವಯಂಸೇವಕರು ಎರಡು ತಿಂಗಳ ಬೆಡ್ ರೆಸ್ಟ್ ಗೆ ಸುಮಾರು 15 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಗಗನಯಾತ್ರಿಗಳು ಮತ್ತು ವಿಜ್ಞಾನಿಗಳು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಕೆಲಸ ಮಾಡುತ್ತಾರೆ. (ಸಾಂಕೇತಿಕ ಚಿತ್ರ)
6/ 7
ನಾಸಾ ಮೊದಲ ಬಾರಿಗೆ ಕೃತಕ ಗುರುತ್ವಾಕರ್ಷಣೆಯ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದೆ. ಈ ಅಧ್ಯಯನವು 24 ರಿಂದ 55 ವರ್ಷ ವಯಸ್ಸಿನ 12 ಪುರುಷರು ಮತ್ತು 12 ಮಹಿಳೆಯರನ್ನು ಒಳಗೊಂಡಿದೆ. (ಸಾಂಕೇತಿಕ ಚಿತ್ರ)
7/ 7
ನಾಸಾ ಮೊದಲ ಬಾರಿಗೆ ಕೃತಕ ಗುರುತ್ವಾಕರ್ಷಣೆಯ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದೆ. ಈ ಅಧ್ಯಯನವು 24 ರಿಂದ 55 ವರ್ಷ ವಯಸ್ಸಿನ 12 ಪುರುಷರು ಮತ್ತು 12 ಮಹಿಳೆಯರನ್ನು ಒಳಗೊಂಡಿದೆ. (ಸಾಂಕೇತಿಕ ಚಿತ್ರ)