ಕಾಲ ಬದಲಾಗಿದೆ. ಅಂಗಡಿಗೆ ತೆರಳಿ ಖರೀದಿಸುವ ಬದಲು ಬಹುತೇಕರು ಆನ್ಲೈನ್ ಮೂಲಕವೇ ಶಾಪಿಂಗ್ ನಡೆಸುತ್ತಾರೆ. ಅದೇ ರೀತಿ ಸಾಕಷ್ಟು ಆನ್ಲೈನ್ ಶಾಪಿಂಗ್ ತಾಣಗಳು ಹುಟ್ಟಿಕೊಂಡಿವೆ.
2/ 8
ಆನ್ಲೈನ್ಲ್ಲಿ ಕೇವಲ ಬಟ್ಟೆ, ಮೊಬೈಲ್ಗಳು ಮಾತ್ರವಲ್ಲ ತಲೆಬುರುಡೆಗಳನ್ನೂ ನೀವು ಖರೀದಿಸಬಹುದು! ಇದು ಅಚ್ಚರಿ ಎನಿಸಿದರೂ ಸತ್ಯ!
3/ 8
ಹೌದು, ನಾನಾ ವಿಧಧ ಮಾನವನ ತಲೆಬುರುಡೆಗಳನ್ನು ಇನ್ಸ್ಟಾಗ್ರಾಂನ ಕೆಲ ಖಾತೆಗಳು ಮಾರಾಟ ಮಾಡುತ್ತಿವೆ. ನಾನಾ ಮಾದರಿಯ ಡಿಸೈನ್ಗಳನ್ನು ಈ ತಲೆಬುರುಡೆ ಮೇಲೆ ಚಿತ್ರಿಸಾಲಾಗಿದೆ.
4/ 8
ಇಂಗ್ಲೆಂಡ್ನಲ್ಲಿ ಮಾತ್ರ ಈ ರೀತಿ ತಲೆಬುರುಡೆಗಳು ಲಭ್ಯವಿದೆ. ವೈಜ್ಞಾನಿಕ ಪರೀಕ್ಷೆ, ವೈದ್ಯಕೀಯ ಅಧ್ಯಯನಗಳಿಗಾಗಿ ಬ್ರಿಟನ್ನಲ್ಲಿ ಮಾನವ ತಲೆಬುರುಡೆ ಮತ್ತು ಮೂಳೆಗಳ ಮಾರಾಟಕ್ಕೆ ಯಾವುದೇ ನಿಷೇಧವಿಲ್ಲ.
5/ 8
ಈ ಮೊದಲು ‘ಈಬೇ’ ಸೈಟ್ನಲ್ಲಿ ಈ ತಲೆಬುರುಡೆಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ತಾಣ ಮುಚ್ಚಿದ ನಂತರದಲ್ಲಿ ಇನ್ಸ್ಟಾಗ್ರಾಂನ ಕೆಲ ಖಾತೆಗಳು ಇದನ್ನು ಮಾರಾಟ ಮಾಡುತ್ತಿವೆ.
6/ 8
ಈ ತಲೆಬುರುಡೆಗಳು ದೊಡ್ಡ ಬೆಲೆಗೆ ಮಾರಾಟವಾಗುತ್ತಿದೆಯಂತೆ.
7/ 8
ಕಳೆದ ಎರಡು ವರ್ಷಗಳಲ್ಲಿ 70 ಲಕ್ಷ ರೂ. ವ್ಯವಹಾರ ನಡೆದಿದೆ.
8/ 8
ಕೆಲವರು ಈ ತಲೆಬುರುಡೆಗಳನ್ನು ಮನೆಯ ಅಲಂಕಾರಕ್ಕೆ ಬಳಸುತ್ತಿದ್ದಾರಂತೆ. ಇದನ್ನು ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.