ಕಳೆದ ಒಂದೂವರೆ ವರ್ಷದಿಂದ ಕೋವಿಡ್-19 ವೈರಸ್ ಹಾವಳಿಯಿಂದಾಗಿ ಎಲ್ಲಾ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದ್ದು, ಇದೀಗ ಹಂತ ಹಂತವಾಗಿ ಶಾಲೆಯ ಬಾಗಿಲನ್ನು ತೆರೆಯುತ್ತಿದ್ದು, ತರಗತಿಗಳನ್ನು ಶುರು ಮಾಡುತ್ತಿದ್ದಾರೆ. ಆದರೆ ಎಷ್ಟೋ ಮಕ್ಕಳಿಗೆ ಶಾಲೆಯ ಬಗ್ಗೆ ಮರೆತೇ ಹೋದಂತಿದೆ ಎಂದರೆ ತಪ್ಪಾಗಲಾರದು.ಇಷ್ಟು ದಿನಗಳ ನಂತರ ಮತ್ತೆ ಶಾಲೆಗೆ ಹೋಗಲು ಕೆಲವು ಮಕ್ಕಳು ಹಿಂದೇಟು ಹಾಕುವುದು ಸಹಜ. ಬಹುತೇಕರು ಶಾಲೆಗೆ ಹೋದರೂ ಅವರಿಗಿರುವಂತಹ ಭಯ, ಆತಂಕ ಹೋಗಲಾಡಿಸುವುದು ಹೇಗೆ..?ಈಗಾಗಲೇ ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ಶುರು ಮಾಡಿದ್ದು, ಇನ್ನು ಕೆಲವು ರಾಜ್ಯಗಳಲ್ಲಿ ಇನ್ನೂ ಶುರುವಾಗಬೇಕಿದೆ. ಆದರೆ ಕೆಲ ಮಕ್ಕಳು ಶಾಲೆಗೆ ಹಿಂತಿರುಗುವ ಬಗ್ಗೆ ಆತಂಕ ಗೊಂಡಿದ್ದಾರೆ. ಅವರ ಈ ಆತಂಕವನ್ನು ಹೇಗೆ ನಿವಾರಿಸುವುದು ಮತ್ತು ಅವರನ್ನು ಮೊದಲಿನಂತೆ ಶಾಲೆಗೆ ಹೋಗಲು ಹೇಗೆ ಪ್ರೇರೇಪಿಸುವುದು ಎಂದು ನೀವು ತಲೆ ಕೆಡಿಸಿಕೊಂಡಿದ್ದರೆ, ಇಲ್ಲಿವೆ ಕೆಲವು ಯೋಗಾಸನಗಳು, ಇವುಗಳನ್ನು ನಿಮ್ಮ ಮಕ್ಕಳಿಗೆ ಪ್ರತಿದಿನ ಅಭ್ಯಾಸ ಮಾಡಿಸಿ.
ಅದೋಮುಖಿಸ್ವನಾಸನ :ನಿಮ್ಮ ಅಂಗೈ ಮತ್ತು ಮೊಣಕಾಲುಗಳ ಮೇಲೆ ಇದನ್ನು ಪ್ರಾರಂಭಿಸಿ. ಭುಜಗಳ ಕೆಳಗೆ ಅಂಗೈಗಳನ್ನು ಮತ್ತು ಸೊಂಟದ ಕೆಳಗೆ ಮೊಣಕಾಲುಗಳನ್ನು ಹೊಂದಿಸಿ. ಸೊಂಟವನ್ನು ಮೇಲಕ್ಕೆ ಎತ್ತುವ ಮೂಲಕ ನಿಮ್ಮ ಮೊಣಕಾಲುಗಳನ್ನು ನೇರಗೊಳಿಸಿ. ತಲೆಕೆಳಗಾದ 'ವಿ' ಆಕಾರ ರೂಪಿಸಲು ನಿಮ್ಮ ಪಾದಗಳನ್ನು ಹೊಂದಿಸಿ. ನಿಮ್ಮ ಕೈಯ ಭುಜದ ಅಗಲವನ್ನು ಪ್ರತ್ಯೇಕವಾಗಿರಿಸಿ. ನಿಮ್ಮ ಹಿಮ್ಮಡಿಗಳನ್ನು ನೆಲವನ್ನು ಸ್ಪರ್ಶಿಸುವಂತೆ ಇರಲಿ ಕೆಲವು ಸೆಕೆಂಡುಗಳ ಕಾಲ ಇದೇ ಭಂಗಿಯಲ್ಲಿರಿ.
ಪಾದ ಹಸ್ತಾಸನ ನೀವು ಉಸಿರನ್ನು ಹೊರಬಿಡುತ್ತಾ ನಿಮ್ಮ ದೇಹದ ಅರ್ಧ ಭಾಗವನ್ನು ಮುಂದಕ್ಕೆ ಬಾಗಿಸಿ. ನಿಮ್ಮ ತಲೆಯನ್ನು ಕೆಳಗೆ ತೆಗೆದುಕೊಂಡು ಬನ್ನಿ ಮತ್ತು ನಿಮ್ಮ ಭುಜಗಳು ಮತ್ತು ಕುತ್ತಿಗೆಯನ್ನು ಆರಾಮವಾಗಿರಿಸಿ. ನೀವು ಆರಂಭಿಕರಾಗಿದ್ದರೆ ನಿಮ್ಮ ಮೊಣಕಾಲುಗಳನ್ನು ಸ್ವಲ್ಪ ಬಾಗಿಸಿ. ನಿಮ್ಮ ಪಾದಗಳ ಪಕ್ಕದಲ್ಲಿ ಅಂಗೈಗಳನ್ನು ಇರಿಸಿ. ಈ ಅಸನವನ್ನು ಸ್ವಲ್ಪ ಕಾಲದ ನಂತರ ಬಿಡಿ.