Vascular Necrosis: ಕೋವಿಡ್ ಸೋಂಕಿನ ನಂತರ ಜನರನ್ನು ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಪ್ರಮುಖವಾದ ಸಮಸ್ಯೆ ಇದು. ಮೂಳೆಗಳಿಗೆ ರಕ್ತಸಂಚಾರವೇ ನಿಂತು ಹೋಗುವಂಥಾ ಭಯಾನಕ ಪರಿಸ್ಥಿತಿ ಇದು. ದೇಹದೊಳಗೆ ಮೂಳೆಗಳನ್ನು ಸಣ್ಣ ತುಂಡುಗಳಾಗಿ ಮಾಡಿಬಿಡುತ್ತದೆ ಈ ಖಾಯಿಲೆ. ಈ ಖಾಯಿಲೆಯನ್ನು ಆರಂಭದಲ್ಲೇ ತಿಳಿಯುವ ಲಕ್ಷಣಗಳಿಲ್ಲ, ಆದರೆ ಇಡೀ ಇನ ವಿಪರೀತ ಗಂಟುಗಳ ನೋವು ಇರುವುದು ಇದರ ಪ್ರಮುಖ ಲಕ್ಷಣವಾಗಿದೆ.
Multisystem Inflammatory Syndrome: ಕೋವಿಡ್ ಮಕ್ಕಳನ್ನು ಹೆಚ್ಚು ಬಾಧಿಸಿಲ್ಲ. ಅವರಲ್ಲಿ ಸೋಂಕು ಕಂಡರೂ ಅದು ಬಹಳ ಸೌಮ್ಯ ಸ್ವಭಾವದ್ದಾಗಿತ್ತು. ಆದರೆ ಕೋವಿಡ್ ಗುಣವಾದ ನಂತರವೂ ಮಕ್ಕಳಲ್ಲಿ ಎಂಐಎಸ್ ಸಮಸ್ಯೆ ಕಾಣಿಸಿಕೊಂಡಿದೆ. ಅಂಥಾ ಮಕ್ಕಳಲ್ಲಿ ಹೃದಯ, ಮೂತ್ರಪಿಂಡ, ಲಿವರ್, ಕಣ್ಣು ಹೀಗೆ ನಾನಾ ಅಂಗಗಳು ಊದಿಕೊಂಡಿರುವುದು ಕಂಡುಬಂದಿದೆ. ಇದರಿಂದಾಗಿ ಸಾವು ಕೂಡಾ ಸಂಭವಿಸಿದೆ.
Dengue Fever: ಡೆಂಘಿ ಸಾಕಷ್ಟು ಸಮಯದಿಂದ ಇರುವುದರಿಂದ ಜನ ಇದರ ಬಗ್ಗೆ ಹೆಚ್ಚು ಚರ್ಚೆ ಮಾಡಿಲ್ಲ. ಆದರೆ ಕೋವಿಡ್ ಸೋಂಕಿನಿಂದ ಗುಣಮುಖರಾದ ನಂತರ ಬರುವ ಡೆಂಘಿ ರೋಗಿಯ ಜೀವವನ್ನೇ ಬಲಿ ಪಡೆಯುವಷ್ಟು ತೀವ್ರವಾಗಿದೆ. ಡೆಂಘಿಯ ಸೋಂಕಿನ ತೀವ್ರತೆ ಹೆಚ್ಚಿದ್ದಲ್ಲಿ ಬಾಯಿ ಮತ್ತು ಮೂಗಿನಿಂದ ರಕ್ತ ಬರುವುದು, ತೀವ್ರ ಹೊಟ್ಟೆ ನೋವು ಸೇರಿದಂತೆ ಜೀವಕ್ಕೇ ಎರವಾಗುವ ನಾನಾ ಸಮಸ್ಯೆಗಳು ತಲೆದೋರಬಹುದು.