ಅಮೆರಿಕಾದಲ್ಲಿರುವ ಐಷಾರಾಮಿ ಮತ್ತು ದುಬಾರಿ ಬಂಗಲೆ ಎಷ್ಟು ಐಷಾರಾಮಿ ಎಂದರೆ ನೀವು ಊಹೆ ಕೂಡ ಮಾಡಿಕೊಂಡಿರಲಾರಿರಿ. ಈ ಬಂಗಲೆ ಅಮೆರಿಕದ ಲಾಸ್ ಎಂಜಲೀಸ್ನಲ್ಲಿದ್ದು, ಇದನ್ನು ಮೆಗಾಮಾನ್ಷನ್ ಎನ್ನಲಾಗುತ್ತದೆ. ದಿ ಒನ್ ಬೆಲ್ ಏರ್ ಎಂದು ಕರೆಯಲ್ಪಡುವ ಈ ಬಂಗಲೆ ಅಮೆರಿಕದ ಅತೀ ದೊಡ್ಡ ಆಧುನಿಕ ಮನೆ ಎಂದೇ ಕರೆಯುತ್ತಾರೆ. ಒಟ್ಟಾರೆ ಈ ಮೆಗಾಮಾನ್ಷನ್ 1,05,000 ಚದರ ಅಡಿ ವಿಸ್ತೀರ್ಣವಿದೆ. ಈ ಐಷಾರಾಮಿ ಮನೆಯ ಒಳಭಾಗದ ಕಾಮಗಾರಿ ಪೂರ್ಣಗೊಳ್ಳಲು ಸುಮಾರು 7 ವರ್ಷಗಳನ್ನು ತೆಗೆದುಕೊಂಡಿತು. ಈ ದುಬಾರಿ ಮನೆಯ ವಿನ್ಯಾಸವನ್ನು ವಾಸ್ತುಶಿಲ್ಪಿ ಪಾಲ್ ಮೆಕ್ಲೀನ್ ಸಿದ್ಧಪಡಿಸಿದ್ದಾರೆ.
‘ದಿ ಒನ್ ಬೆಲ್ ಏರ್‘ ಎಂದು ಕರೆಯಲ್ಪಡುವ ಈ ಐಷಾರಾಮಿ ಬಂಗಲೆಯಲ್ಲಿ ಒಂದಲ್ಲ, ಎರಡಲ್ಲ 21 ಬೆಡ್ರೂಂಗಳಿವೆಯಂತೆ ಹಾಗೂ 42 ಬಾತ್ರೂಂಗಳಿವೆಯಂತೆ. ಇಷ್ಟೇ ಅಲ್ಲದೇ, 10,000 ಬಾಟಲ್ ವೈನ್ ಸೆಲ್ಲಾರ್, 50 ಕಾರ್ ಗ್ಯಾರೇಜ್, 50 ಆಸನಗಳ ಚಿತ್ರಮಂದಿರ, ನೈಟ್ ಕ್ಲಬ್, ಸಿಗಾರ್ ರೂಮ್, ಸ್ಕೈ ಡೆಕ್, ಸಲೂನ್, ಬೌಲಿಂಗ್ ಅಲ್ಲೆ ಇನ್ನೂ ಮೊದಲಾದ ಐಷಾರಾಮಿ ಸೌಲಭ್ಯಗಳಿಂದ ಈ ಮನೆ ಕೂಡಿದೆ.
ಚಲನಚಿತ್ರ ನಿರ್ಮಾಪಕರಾದ ರಿಯಲ್ ಎಸ್ಟೇಟ್ ಡೆವಲಪರ್ ನೈಲ್ ನಿಯಾಮಿ ಒಡೆತನದ ಒನ್ ಬೆಲ್ ಏರ್ ಅನ್ನು ಮೊದಲು 500 ಮಿಲಿಯನ್ ಡಾಲರ್ಗೆ ಮಾರಾಟ ಮಾಡಲು ನಿರ್ಧರಿಸಲಾಯಿತು. ಇದು ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಆದಾಗ್ಯೂ, ನಿಮಾಮಿ 100 ಮಿಲಿಯನ್ ಡಾಲರ್ ಗಿಂತ ಹೆಚ್ಚಿನ ಸಾಲ & ಲೋನ್ಗಳನ್ನು ಮರುಪಾವತಿಸಿದ ಬಳಿಕ, ಈ ಬಂಗಲೆಯು ಅದರ ಅರ್ಧದಷ್ಟು ಬೆಲೆಗೆ ಮಾರಾಟವಾಗುತ್ತಿದೆ. 225 ಮಿಲಿಯನ್ ಡಾಲರ್ ಅಂದರೆ 16,69,72,83,750 ರೂಪಾಯಿಗಳು.
ಅಮೆರಿಕದ ಅತ್ಯಂತ ದುಬಾರಿ ಮನೆಯದ ಮಾರಾಟದ ದಾಖಲೆಯನ್ನು ನೋಡಿದರೆ, ಈ ಸಾಧನೆಯು ಬಿಲಿಯನೇರ್ ಕೆನ್ ಗ್ರಿಫಿನ್ ಹೆಸರಿನಲ್ಲಿದೆ. ಅವರು ಮ್ಯಾನ್ಹಾಟ್ನಲ್ಲಿ 238 ಮಿಲಿಯನ್ ಡಾಲರ್ಗೆ ಪೆಂಟ್ ಹೌಸ್ ಖರೀದಿಸಿದ್ದರು. ಇದು ಅಮೆರಿಕದಲ್ಲಿ ಖರೀದಿಸಿದ ಅತ್ಯಂತ ದುಬಾರಿ ಮನೆಯಾಗಿದೆ. ಚೀನಾದ ಉದ್ಯಮಿಯೊಬ್ಬರು ಬ್ರಿಟನ್ನಲ್ಲಿ ಮೆಗಾ ಮ್ಯಾನ್ಷನ್ ಖರೀದಿಸಲು 275 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಸೌದಿ ರಾಜಕುಮಾರ್ 300 ಮಿಲಿಯನ್ ಡಾಲರ್ಗೆ ಫ್ರೆಂಚ್ ರೆಸಾರ್ಟ್ ಖರೀದಿಸಿದ್ದಾರೆ.