ಆ ಹಳ್ಳಿಯ ಮಹಿಳೆಯರ ಪಾದ ಐಫೋನ್ಗಿಂತಲೂ ಚಿಕ್ಕದು; ಇದು ಸಾವಿರ ವರ್ಷಗಳ ಹಿಂದೆಯಿದ್ದ ಸಂಸ್ಕೃತಿಯೊಂದರ ಪರಿಣಾಮ!
Foot Binding: ಈ ಸಂಸ್ಕೃತಿಗೆ ಸಾವಿರ ವರ್ಷಗಳ ಇತಿಹಾಸವಿದೆ. ಪ್ರಾರಂಭದಲ್ಲಿ ವೇಶ್ಯೆಯರು ಪಾದಗಳನ್ನು ಸಣ್ಣ ಆಕಾರ ತರಿಸುತ್ತಿದ್ದರು. ಅದಾದ ನಂತರ ಅಧಿಕಾರಕ್ಕೆ ಬಂದ ಟ್ಯಾಂಗ್ ರಾಜವಂಶದ ಚಕ್ರವರ್ತಿಯು ಸೌಂದರ್ಯ ಮತ್ತು ಸಂಪತ್ತಿನ ಸಂಕೇತವಾಗಿ ಸಣ್ಣ ಪಾದಗಳನ್ನು ಹೊಂದಿರುವ ಮಹಿಳೆಯರಿಂದ ತನ್ನ ಆಸ್ಥಾನದಲ್ಲಿ ನೃತ್ಯ ಮಾಡಿಸುತ್ತಿದ್ದನು.
ಪ್ರತಿಯೊಂದು ದೇಶದಲ್ಲಿ ಚಿತ್ರ-ವಿಚಿತ್ರ ಸಂಗತಿಗಳು ಬೆಳಕಿಗೆ ಬರುತ್ತಿರುತ್ತವೆ. ಅದರಲ್ಲಿ ಕೆಲವು ಸಂಗತಿಗಳು ಅಲ್ಲಿನ ಆಚರಣೆ, ಸಂಪ್ರದಾಯವನ್ನು ಒಳಗೊಂಡಿರುತ್ತದೆ.
2/ 13
ಅದರಂತೆ ಚೀನಾ ದೇಶದಲ್ಲಿನ ಸಂಪ್ರದಾಯವೊಂದು ಅಚ್ಚರಿಗೆ ಕಾರಣವಾಗಿದೆ. ಹೌದು. ಚೀನಾದ ಹಳ್ಳಿಯೊಂದರ ಮಹಿಳೆಯರು ಸಂಪ್ರದಾಯಕ್ಕೆ ಒಗ್ಗಿಕೊಂಡು ತಮ್ಮ ಪಾದಗಳ ಬೆರಳುಗಳನ್ನು ಕತ್ತರಿಸಿ ಚಿಕ್ಕಗಾತ್ರವನ್ನಾಗಿಸಿಕೊಂಡಿದ್ದಾರೆ.
3/ 13
ಹೌದು. ಅಲ್ಲಿನ ಮಹಿಳೆಯರ ಕಾಲುಗಳು ಐಫೋನ್ಗಿಂತಲೂ ಚಿಕ್ಕದು ಎಂದರೆ ನಂಬುತ್ತೀರಾ?. ಹಾಗಿದ್ದರೆ, ಯಾಕಾಗಿ ಅಲ್ಲಿನ ಮಹಿಳೆಯರು ತಮ್ಮ ಪಾದವನ್ನು ಚಿಕ್ಕದಾಗಿಸಿಕೊಂಡಿದ್ದರು ? ಏನದು ಚೀನಾದ ವಿಶಿಷ್ಟ ಸಂಪ್ರದಾಯ ?. ಈ ಬಗ್ಗೆ ಮಾಹಿತಿ ಇಲ್ಲಿದೆ.
4/ 13
ಈ ಸಂಸ್ಕೃತಿಗೆ ಸಾವಿರ ವರ್ಷಗಳ ಇತಿಹಾಸವಿದೆ. ಪ್ರಾರಂಭದಲ್ಲಿ ವೇಶ್ಯೆಯರು ಪಾದಗಳನ್ನು ಸಣ್ಣ ಆಕಾರ ತರಿಸುತ್ತಿದ್ದರು. ಅದಾದ ನಂತರ ಅಧಿಕಾರಕ್ಕೆ ಬಂದ ಟ್ಯಾಂಗ್ ರಾಜವಂಶದ ಚಕ್ರವರ್ತಿಯು ಸೌಂದರ್ಯ ಮತ್ತು ಸಂಪತ್ತಿನ ಸಂಕೇತವಾಗಿ ಸಣ್ಣ ಪಾದಗಳನ್ನು ಹೊಂದಿರುವ ಮಹಿಳೆಯರಿಂದ ತನ್ನ ಆಸ್ಥಾನದಲ್ಲಿ ನೃತ್ಯ ಮಾಡಿಸುತ್ತಿದ್ದನು.
5/ 13
ತುದಿಗಾಲಿನಲ್ಲಿ ನೃತ್ಯ ಮಾಡಲು ಆಗಿನ ಹೆಣ್ಣು ಮಕ್ಕಳು ಕಾಲು ಬೆರಳನ್ನು ಕತ್ತರಿಸಿ ರೇಷ್ಮೆ ಬಟ್ಟೆಯನ್ನು ಬಿಗಿಯಾಗಿ ಸುತ್ತಿಕೊಳ್ಳುತ್ತಿದ್ದರು. ಹೀಗೆ ಸುತ್ತಿಕೊಂಡ ಪರಿಣಾಮ ಅವರ ಪಾದಗಳ ಬೆರಳುಗಳು ಮುದ್ದೆಯಾಗಿ, ಚೂಪಾಗಿ ಕಾಣುತ್ತಿದ್ದವು. ಅನೇಕರ ಮಹಿಳೆಯರು ಈ ರೀತಿ ಮಾಡಿಕೊಂಡಿದ್ದರು.
6/ 13
ಆಗಿನ ಸಮಯದಲ್ಲಿ ಚಿಕ್ಕ ಪಾದಗಳನ್ನು ಮಾಡಿಕೊಂಡು ನೃತ್ಯ ಮಾಡುತ್ತಿದ್ದ ಮಹಿಳೆಯರ ಸೌಂದರ್ಯ ಅಳೆಯಲು ಹೀಗೆ ಮಾಡುತ್ತಿದ್ದರಂತೆ. ಸಂಪತ್ತನ್ನು ಪ್ರದರ್ಶಿಸುವ ಸಲುವಾಗಿ ಈ ತುದಿಗಾಲಿನಲ್ಲಿ ನೃತ್ಯ ಮಾಡುವುದು ಅಂದು ಜನಪ್ರಿಯವಾಗುತ್ತದೆ.
7/ 13
ಅದರಲ್ಲೂ ಶ್ರಿಮಂತ ಮಹಿಳೆಯರು ಈ ರೀತಿಯಾಗಿ ಕಾಲುಗಳಿಗೆ ಬಟ್ಟೆಯನ್ನು ಕಟ್ಟಿಕೊಂಡು ಪಾದಗಳನ್ನು ಚಿಕ್ಕ ಆಕಾರಕ್ಕೆ ತರುತ್ತಿದ್ದರು. ಹೀಗಾಗಿ ಅಂತಹ ಮಹಿಳೆಯರಿಗೆ ‘ಕಮಲದ ಕಾಲುಗಳ ಮಹಿಳೆ ‘ ಎಂಬ ಬಿರುದು ನೀಡುತ್ತಿದ್ದರು
8/ 13
ಅಚ್ಚರಿಯ ವಿಚಾರವೆಂದರೆ, 4 ಮತ್ತು 9 ವರ್ಷದ ಬಾಲಕಿಯರ ಕಾಲು ಬೆರಳುಗಳನ್ನು ಕತ್ತರಿಸಿ ನಂತರ ಬಿಗಿಯಾಗಿ ಬಟ್ಟೆ ಸುತ್ತುವ ಮೂಲಕ ಸಣ್ಣ ಪಾದದ ಆಕಾರಕ್ಕೆ ತರುತ್ತಿದ್ದರು. ಆ ಸಮಯದಲ್ಲಿ ಮೂಳೆಗಳು ಮುರಿದು ಕಾಲು ಬೆರಳುಗಳು ಪಾದದ ಕೆಳಗೆ ವಿರೂಪಗೊಳ್ಳುತ್ತಿತ್ತು.
9/ 13
ಈ ಸಂಸ್ಕೃತಿ 10ನೇ ಶತಮಾನದಿಂದ ಬಂದಿದೆ. ಆದರೆ 1911ರಲ್ಲಿ ನಿಷೇಧಗೊಳಿಸಲಾಗುತ್ತದೆ. ಇಂತಹ ಸಂಸ್ಕೃತಿಗೆ ತಲೆಬಾಗಿದ್ದ ಅನೇಕ ಮಹಿಳೆಯರು ಚೀನಾದಲ್ಲಿ ಈಗಲೂ ಇದ್ದಾರೆ.
10/ 13
1644 ರಿಂದ 1912ರವರೆಗಿನ ಕ್ವಿಂಗ್ ರಾಜವಂಶಸ್ಥರ ಆಳ್ವಿಕೆಯ ಕಾಲದಲ್ಲಿ ಹದಿ ಹರೆಯರ ಹುಡುಗಿಯರು ತಮ್ಮ ಪಾದಗಳನ್ನು ಸಣ್ಣದಾಗಿಸುತ್ತಿದ್ದರು. ಅಂತೆಯೇ ಪುರುಷರು ತಲೆಯ ಮುಂಭಾಗವನ್ನು ಭೋಲಿಸಿ ಹಿಂಭಾಗದಲ್ಲಿ ಉದ್ದನೆಯ ಕೂದಲು ಬಿಡುವ ಮೂಲಕ ಭಿನ್ನವಾಗಿ ಕಾಣುತ್ತಿದ್ದರು.