Weird Places: ಈ ಸ್ಥಳಗಳಲ್ಲಿ ಮಹಿಳೆಯರಿಗೆ ನೋ ಎಂಟ್ರೀ, ಕಾರಣ ಮಾತ್ರ ನಿಜಕ್ಕೂ ವಿಚಿತ್ರ!

ಈ ಸ್ಥಳಗಳಿಗೆ ಈಗಲೂ ಕೂಡ ಮಹಿಳೆಯರಿಗೆ ಪ್ರವೇಶ ಇಲ್ವಂತೆ. ಅದು ಎಲ್ಲಿ ಮತ್ತು ಯಾಕೆ ಅಂತ ತಿಳಿಯೋಣ ಬನ್ನಿ.

First published:

  • 17

    Weird Places: ಈ ಸ್ಥಳಗಳಲ್ಲಿ ಮಹಿಳೆಯರಿಗೆ ನೋ ಎಂಟ್ರೀ, ಕಾರಣ ಮಾತ್ರ ನಿಜಕ್ಕೂ ವಿಚಿತ್ರ!

    ಒಂದು ಕಾಲದಲ್ಲಿ ಮಹಿಳೆ ಕೇವಲ ನಾಲ್ಕು ಗೋಡೆಗಳ ಮಧ್ಯೆಯೇ ಇರಬೇಕು ಅಂತ ನಿಯಮಗಳಿತ್ತು. ಆದರೆ, ಕಾಲ ಬದಲಾದಂತೆಯೇ ಜನರ ಮೈಂಡ್​ ಸೆಟ್​ ಕೂಡ ಬದಲಾಗುತ್ತಾ, ಬೆಳೆಯುತ್ತಾ ಬಂತು, ಮಹಿಳೆಯರು ಕೂಡ ನಾವೇನು ಕಮ್ಮಿ ಇಲ್ಲ ಎಂದು ದುಡಿಯಲು ಮುಂದಾದರು. ಆದರೆ ಈಗಲೂ ಕೂಡ ಅದೆಷ್ಟೋ ಸ್ಥಳಗಳಲ್ಲಿ ಹೆಣ್ಣು ಮಕ್ಕಳಿಗೆ ಈಗಲೂ ಪ್ರವೇಶ ಇಲ್ವಂತೆ. ಅದು ಎಲ್ಲೆಲ್ಲಿ ಅಂತ ತಿಳಿಯೋಣ ಬನ್ನಿ.

    MORE
    GALLERIES

  • 27

    Weird Places: ಈ ಸ್ಥಳಗಳಲ್ಲಿ ಮಹಿಳೆಯರಿಗೆ ನೋ ಎಂಟ್ರೀ, ಕಾರಣ ಮಾತ್ರ ನಿಜಕ್ಕೂ ವಿಚಿತ್ರ!

    ಕಾರ್ತಿಕೇಯ ದೇವಸ್ಥಾನ: ರಾಜಸ್ಥಾನ ರಾಜ್ಯದಲ್ಲಿರುವ ಕಾರ್ತಿಕೇಯ ದೇವಾಲಯವು ಅತ್ಯಂತ ವಿಶೇಷವಾದ ದೇವಸ್ಥಾನವಾಗಿದೆ. ಇಲ್ಲಿ ನೆಲೆಸಿರುವ ಕಾರ್ತಿಕೇಯ, ಬ್ರಹ್ಮಚರ್ಯದ ರೂಪವನ್ನು ಇಲ್ಲಿ ಚಿತ್ರಿಸಲಾಗಿದೆ. ದಂತಕಥೆಯ ಪ್ರಕಾರ, ಮಹಿಳೆ ಪ್ರವೇಶಿಸಿದರೆ ದೇವರ ಶಾಪಕ್ಕೆ ಗುರಿಯಾಗುತ್ತಾಳಂತೆ ಹೀಗಾಗಿ ಇಲ್ಲಿಗೆ ಮಹಿಳೆಯರ ಪ್ರವೇಶ ಇಲ್ಲ.

    MORE
    GALLERIES

  • 37

    Weird Places: ಈ ಸ್ಥಳಗಳಲ್ಲಿ ಮಹಿಳೆಯರಿಗೆ ನೋ ಎಂಟ್ರೀ, ಕಾರಣ ಮಾತ್ರ ನಿಜಕ್ಕೂ ವಿಚಿತ್ರ!

    ಓಕಿನೋಶಿಮಾ ದ್ವೀಪ: ಜಪಾನ್‌ ದೇಶದದಲ್ಲಿರು ಈ ದ್ವೀಪ ಅತ್ಯಂತ ಪವಿತ್ರವಾದುದು. ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಈ ದ್ವೀಪವು ಸೇರ್ಪಡೆಗೊಂಡಿದೆ. ಶಿಂಟೋ ಸಂಪ್ರದಾಯದ ಕಾರಣ ಇಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ವಾಸ್ತವವಾಗಿ, ಈ ಶಿಂಟೋ ಸಂಪ್ರದಾಯವು ಬೌದ್ಧಧರ್ಮ, ಟಾವೊ ತತ್ತ್ವ ಮತ್ತು ಚೀನಾದ ಮಿಶ್ರಣವಾಗಿದೆ. ಈ ಕಾರಣದಿಂದಲೇ ಮಹಿಳೆಯರು ಈ ಪವಿತ್ರವಾದ ದ್ವೀಪಕ್ಕೆ ಹೋಗುವಂತಿಲ್ಲ.

    MORE
    GALLERIES

  • 47

    Weird Places: ಈ ಸ್ಥಳಗಳಲ್ಲಿ ಮಹಿಳೆಯರಿಗೆ ನೋ ಎಂಟ್ರೀ, ಕಾರಣ ಮಾತ್ರ ನಿಜಕ್ಕೂ ವಿಚಿತ್ರ!

    ಇರಾನಿ ಸ್ಪೋರ್ಟ್ಸ್ ಸ್ಟೇಡಿಯಂ: ಇದೊಂದು ಕ್ರೀಡಾಂಗಣ. ಇಲ್ಲಿಗೆ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಪ್ರವೇಶ ಇಲ್ಲ. 1979 ರಲ್ಲಿ ನಡೆದ ಕ್ರಾಂತಿಯ ತರುವಾಯ ಇಲ್ಲಿ ಮಹಿಳೆಯರ ಪ್ರವೇಶವನ್ನು ಸರ್ಕಾರ ನಿಷೇಧಿಸಿದೆ. ಆಟದ ಸಮಯದಲ್ಲಿ ಪುರುಷರು ಅನೇಕ ಅಸಭ್ಯ ಭಾಷೆಯನ್ನು ಬಳಸುತ್ತಾರೆ. ಅಲ್ಲದೆ, ಕೆಟ್ಟ ಕೆಟ್ಟ ಕೈ ಸನ್ನೆಗಳನ್ನು ತೋರಿಸುತ್ತಾರೆ. ಇಂತ ಹ ಸಮಯದಲ್ಲಿ ಮಹಿಳೆಯರು ಇರೋದು ಸೂಕ್ತವಲ್ಲ ಎಂಬ ಕಾರಣಕ್ಕಾಗಿ ಅಲ್ಲಿನ ಸರ್ಕಾರವು ಈ ನಿಯಮವನ್ನು ತಂದಿದೆ.

    MORE
    GALLERIES

  • 57

    Weird Places: ಈ ಸ್ಥಳಗಳಲ್ಲಿ ಮಹಿಳೆಯರಿಗೆ ನೋ ಎಂಟ್ರೀ, ಕಾರಣ ಮಾತ್ರ ನಿಜಕ್ಕೂ ವಿಚಿತ್ರ!

    ಬರ್ನಿಂಗ್ ಟ್ರೀ ಕ್ಲಬ್: ಅಮೆರಿಕಾ ದೇಶದ ಬರ್ನಿಂಗ್‌ ಟ್ರೀ ಕ್ಲಬ್‌ಗೆ ಮಹಿಳೆಯರಿಗೆ ಅಲೋ ಇಲ್ಲ. ಈ ಬರ್ನಿಂಗ್ ಟ್ರೀ ಕ್ಲಬ್ US ನಲ್ಲಿರುವ ಒಂದು ಗಾಲ್ಫ್ ಕ್ಲಬ್ ಆಗಿದೆ. ಕುಡಿತದ ಅಮಲಿನಲ್ಲಿ ತೇಲಾಡಲು ಪುರುಷರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಪುರುಷರಿಗೆ ಮಾತ್ರ ಅವಕಾಶವಿದೆ. ಇಲ್ಲಿಗೆ ದೊಡ್ಡ ದೊಡ್ಡ ವ್ಯಕ್ತಿಗಳು ಅಂದ್ರೆ ಅಧ್ಯಕ್ಷರು, ನ್ಯಾಯಾಧೀಶರು ಗಾಲ್ಫ್ ಆಡಲು ಇಲ್ಲಿಗೆ ಬರುತ್ತಾರೆ. ಹೀಗಾಗಿ ಮಹಿಳೆಯರು ಇಲ್ಲಿಗೆ ಬರುವುದನ್ನು ನಿಷೇಧಿಸಲಾಗಿದೆ.

    MORE
    GALLERIES

  • 67

    Weird Places: ಈ ಸ್ಥಳಗಳಲ್ಲಿ ಮಹಿಳೆಯರಿಗೆ ನೋ ಎಂಟ್ರೀ, ಕಾರಣ ಮಾತ್ರ ನಿಜಕ್ಕೂ ವಿಚಿತ್ರ!

    ಮೌಂಟ್ ಅಥೋಸ್: ಇದೊಂದು ಸುಂದರ ಸ್ಥಳ, ಆದರೆ ಅಷ್ಟೇ ವಿಚಿತ್ರ ಕೂಡ ಅಂತ ಹೇಳಬಹುದು. ಇಲ್ಲಿ ಮಹಿಳೆಯರ ಪ್ರವೇಶಕ್ಕೆ 1000 ವರ್ಷಕ್ಕೂ ಹೆಚ್ಚು ಕಾಲ ನಿಷೇಧವಿದ್ಯಂತೆ. ಇಲ್ಲಿ ಕೇವಲ ಮಹಿಳೆಯರು ಮಾತ್ರವಲ್ಲ, ಹೆಣ್ಣಾಗಿರುವ ಯಾವುದೇ ಜೀವಿಯು ಈ ಮೌಂಟ್‌ ಅಥೋಸ್‌ಗೆ ಪ್ರವೇಶಿಸುವಂತಿಲ್ಲ. ಇಲ್ಲಿ ವಾಸಿಸುವ ಸಾಧುಗಳ ಪ್ರಕಾರ, ಮಹಿಳೆಯರ ಆಗಮನದಿಂದ ಅವರ ಜ್ಞಾನದ ಪಥವು ನಿಧಾನಗೊಳ್ಳುತ್ತಂತೆ.

    MORE
    GALLERIES

  • 77

    Weird Places: ಈ ಸ್ಥಳಗಳಲ್ಲಿ ಮಹಿಳೆಯರಿಗೆ ನೋ ಎಂಟ್ರೀ, ಕಾರಣ ಮಾತ್ರ ನಿಜಕ್ಕೂ ವಿಚಿತ್ರ!

    ಶಬರಿಮಲೆ ಸ್ವಾಮಿ ದೇವಾಲಯ: ಕೇರಳ ರಾಜ್ಯದ ಅತ್ಯಂತ ಜನಪ್ರಿಯವಾದ ಕ್ಷೇತ್ರಗಳಲ್ಲಿ ಶಬರಿಮಲೆ ಕೂಡ ಒಂದು. ಇಲ್ಲಿ ಮುಟ್ಟಾಗುವ ಮಹಿಳೆಯರಿಗೆ ಪ್ರವೇಶವಿಲ್ಲ. ಇಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಹಲವು ಬಾರಿ ದೊಡ್ಡ ಚರ್ಚೆಯೂ ನಡೆದಿರುವುದು ನಿಮಗೆ ಗೊತ್ತಿರಬಹುದು. 10 ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲ. ಅಯ್ಯಪ್ಪ ಸ್ವಾಮಿಯು ಬ್ರಹ್ಮಚಾರಿ. ಈ ಕಾರಣದಿಂದಾಗಿ ಹೆಣ್ಣುಮಕ್ಕಳಿಗೆ ಪ್ರವೇಶವಿಲ್ಲ.

    MORE
    GALLERIES