Weird Professions: ಕಾಲುಗಳ ಫೋಟೋ ಮಾರಾಟ ಮಾಡಿ ಹಣ ಸಂಪಾದಿಸುವ ಮಹಿಳೆ: ಹೀಗೂ ಒಂದು ಕೆಲಸ ಉಂಟು!
Weird Professions in the World : ಇತ್ತೀಚಿನ ದಿನಗಳಲ್ಲಿ ಜನರು ವಿಚಿತ್ರವಾದ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡು ಆದಾಯವನ್ನು ಗಳಿಸುತ್ತಿದ್ದಾರೆ. ಕೆಲವು ನಿರ್ದಿಷ್ಟ ಸೈಟ್ ಗಳಲ್ಲಿ ತಮ್ಮ ಫೋಟೋಗಳನ್ನು ಹರಾಜು ಹಾಕಿ ಹಣ ಪಡೆಯುತ್ತಾರೆ. ಡೆವಿನ್ ಮೆಕ್ ಕ್ಲೌಡ್ ಎಂಬವರು ತಮ್ಮ ಮುಖ ಮಾತ್ರವಲ್ಲದೇ ಪಾದಗಳ ಚಿತ್ರಗಳನ್ನು (Foot Model Sells Feet's Pictures) ಮಾರಾಟ ಮಾಡಿ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಈ ಬಗ್ಗೆ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಡೆವಿನ್ ಮೆಕ್ ಕ್ಲೌಡ್ ಎಂಬ ಮಾಡೆಲ್ ಟಿಕ್ ಟಾಕ್ನಲ್ಲಿ ತನ್ನ ಕಾಲುಗಳ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಹೇಗೆ ಹೆಚ್ಚು ಹಣವನ್ನು ಗಳಿಸುತ್ತಾಳೆ ಎಂಬುದನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ 9 ರಿಂದ 5 ಗಂಟೆಯ ಮಾಡುವ ಕೆಲಸಕ್ಕಿಂತ ತನ್ನ ಕೆಲಸವನ್ನು ಉತ್ತಮ ಎಂದು ಹೇಳಿಕೊಂಡಿದ್ದಾರೆ.
2/ 8
ಡೆವಿನ್ ಮೆಕ್ಕ್ಲೌಡ್ ಮಾಡೆಲ್ ಜೊತೆ ಓರ್ವ ಡ್ಯಾನ್ಸರ್ ಸಹ ಆಗಿದ್ದಾರೆ. ತಮ್ಮ ಪಾದಗಳ ಫೋಟೋಗಳ ಮೂಲಕವೇ ಹೆಚ್ಚು ಹಣ ಗಳಿಸುತ್ತಿದ್ದಾರೆ. ಈ ಕೆಲಸ ವಿಚಿತ್ರವಾದ್ರೂ ತಮಗೆ ತೃಪ್ತಿ ಸಿಕ್ಕಿದೆ ಎಂದು ಡೆವಿನ್ ಹೇಳ್ತಾರೆ.
3/ 8
ಡೈಲಿ ಸ್ಟಾರ್ ವರದಿ ಪ್ರಕಾರ, ಪಾದಗಳ ಚಿತ್ರಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ತಾನು ಹೇಗೆ ಯಶಸ್ವಿಯಾಗಿದ್ದೇನೆ ಮತ್ತು ಇತರರು ಈ ಕೆಲಸವನ್ನು ಹೇಗೆ ಮಾಡಬಹುದು ಎಂಬುದನ್ನು ಟಿಕ್ ಟಾಕ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
4/ 8
ಡೆವಿನ್ ಅವರ ಈ ಟಿಕ್ಟಾಕ್ ಕ್ಲಿಪ್ 1.3 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಫುಟ್ ಮಾಡೆಲ್ ಬ್ಯುಸಿನೆಸ್ ನಿಂದ ಹೇಗೆ ಹಣ ಗಳಿಸಬಹುದು ಎಂಬುದನ್ನು ಟಿಕ್ ಟಾಕ್ ಮೂಲಕ ಹೇಳಿದ್ದಾರೆ.
5/ 8
ಇನ್ ಸ್ಟಾಗ್ರಾಮ್ ನಲ್ಲಿ ಒಬ್ಬರ ಪಾದದ ಚಿತ್ರಕ್ಕಾಗಿ ಮಾತ್ರ ಒಂದು ಪುಟವನ್ನು ತೆರೆಯಬಹುದು ಎಂದು ಡೆವಿನ್ ಹೇಳುತ್ತಾರೆ.
6/ 8
ಪಾದಗಳಿಗೆ ಸುಂದರವಾದ ಆಂಕ್ಲೆಟ್ ಗಳನ್ನು ಧರಿಸುವುದು ಮತ್ತು ಹೆಬ್ಬೆರಳು ಮತ್ತು ಬೆರಳುಗಳನ್ನು ಸ್ವಚ್ಛವಾಗಿರಿಸುವುದು ಎಲ್ಲರಿಗೂ ಇಷ್ಟವಾಗುತ್ತದೆ. ಡೆವಿನ್ ಅಂತಹ ವೆಬ್ ಸೈಟ್ಗಳನ್ನು ಹೆಸರಿಸುತ್ತಾರೆ. ಇಲ್ಲಿ ಪಾದಗಳ ಚಿತ್ರಗಳನ್ನು ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸಬಹುದು.
7/ 8
ಈ ವೃತ್ತಿಯಲ್ಲಿ ನೀವೇ ಓನರ್ ಆಗಿರುತ್ತಿರಿ. ಹಾಗಾಗಿ ನಿಮ್ಮ ಪಾದಗಳನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿರಿಸಿಕೊಳ್ಳಬೇಕು. ನಾನು ನನ್ನ ಕನಸಿನ ಕೆಲಸವನ್ನು ಪಡೆದುಕೊಂಡಿದ್ದೇನೆ ಎಂದು ಡೇವಿನ್ ಹೇಳುತ್ತಾರೆ.
8/ 8
ಟಿಕ್ ಟಾಕ್ನಲ್ಲಿ ಡೆವಿನ್ ಅವರ ಖಾತೆಯನ್ನು 45 ಸಾವಿರಕ್ಕೂ ಅಧಿಕ ಜನ ಫಾಲೋ ಮಾಡುತ್ತಾರೆ. ಅಭಿಮಾನಿಗಳು ಇವರ ಪಾದದ ಬಗ್ಗೆ ವರ್ಣನೆ ಮಾಡುತ್ತಿರುತ್ತಾರೆ.