ಪ್ರಾಣಿಗಳಿಗೂ ಒಂದು ಭಾಷೆಯಿದೆ. ಅವುಗಳು ಶಬ್ಧದ ಮೂಲಕ ಪರಿಸ್ಥಿತಿಯನ್ನು ಹೇಳುತ್ತದೆ. ಅದರಲ್ಲೂ ಶ್ವಾನಕ್ಕೆ ಕಳ್ಳರು ಮನೆ ಬಂದಿರುವುದು ಗೊತ್ತಾದರೆ ಸಾಕು ಬೊಗಳುವ ಮೂಲಕ ಮನೆಯ ಮಾಲೀಕನಿಗೆ ಎಚ್ಚರಿಕೆ ಸಂದೇಶ ರವಾನಿಸುತ್ತದೆ. ಆದರೆ ಪ್ರಾಣಿ ಭಾಷೆಯನ್ನು ಕೆಲವರು ಮಾತ್ರ ಅರ್ಥ ಮಾಡಬಲ್ಲರು. ಅದರಲ್ಲೂ ಎಲ್ಲರಿಂದ ಪ್ರಾಣಿ ಭಾಷೆಯನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪ್ರಾಣಿಗಳನ್ನು ಯಾರು ಹೆಚ್ಚಾಗಿ ಪ್ರೀತಿಸುತ್ತಾರೋ ಅಂತವರಿಗೆ ಪ್ರಾಣಿಯ ಚಲನವಲದಿಂದ ಹಿಡಿದು ಎಲ್ಲವೂ ಅರ್ಥವಾಗುತ್ತೆ.
ಅಂದಹಾಗೆಯೇ ಮಹಿಳೆಯೊಬ್ಬರು ಶ್ವಾನದ ಭಾಷೆಯನ್ನು ಅರಿತುಕೊಂಡು ಪುಸ್ತಕ ಬರೆದಿದ್ದಾರೆ. ವಾಸ್ತವವಾಗಿ, ಪ್ರಾಣಿಗಳ ಭಾಷೆ ಅರ್ಥವಾಗುವುದಿಲ್ಲ, ಆದರೆ ಪ್ರಾಣಿಗಳ ಸನ್ನೆಗಳು ಮತ್ತು ದೇಹ ಭಾಷೆಯಿಂದ ಅವರ ಅಗತ್ಯತೆಗಳು ಮತ್ತು ಮನಸ್ಥಿತಿಗಳನ್ನು ಊಹಿಸಬಹುದಾಗಿದೆ. ಆದರೆ ಉತ್ತರ ವೇಲ್ಸ್ನಲ್ಲಿ ವಾಸಿಸುವ ಮಹಿಳೆಯೊಬ್ಬಳು ಮನುಷ್ಯರು ಪ್ರಾಣಿಗಳ ಭಾಷೆಯಲ್ಲಿಯೇ ಪ್ರಾಣಿಗಳೊಂದಿಗೆ ಸಂವಹನ ನಡೆಸಬಹುದೆಂದು ಹೇಳಿಕೊಂಡಿದ್ದಾಳೆ. ಅಷ್ಟು ಮಾತ್ರವಲ್ಲ ಶ್ವಾನ ಭಾಷೆ ಅರ್ಥೈಸಿಕೊಂಡು ಪುಸ್ತಕ ಬರೆದಿದ್ದಾರೆ.