25 ವರ್ಷದ ನಲಾ ರೇ ಎಂಬಾಕೆ ತಾನು ಆನ್‌ಲೈನ್‌ನಲ್ಲಿ ಡೇಟ್ ಮಾಡುವವರಿಗಾಗಿ ನಾನು ನೋಡೋಕೆ ಸಖತ್ ಇದ್ದೀನಿ, ನನ್ನ ಲವ್ ಮಾಡಿ ಬನ್ನಿ ಎಂದು ಹೇಳಿಕೊಂಡಿದ್ದಾಳೆ. 'ಪ್ರತಿದಿನ ಬೆಳಗ್ಗೆ ನಾನು ನನ್ನ ಗೆಳೆಯರಿಗೆ ಲವಲವಿಕೆಯಿಂದ ಏನನ್ನಾದರೂ ಸಂದೇಶವನ್ನು ಕಳುಹಿಸುತ್ತೇನೆ. ಆ ನಂತರ ಅವರಲ್ಲಿ ಕೆಲವರು ಉತ್ತರಿಸುತ್ತಾರೆ ಮತ್ತು ನಾವು ಸ್ವಲ್ಪ ಚಾಟ್ ಮಾಡ್ತೀವಿ, ಅವರ ಜೀವನ, ಅವರ ದಿನ ಹೇಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೇನೆ. ನಾನು ಈ ನನ್ನ ಕಮ್ಯುನಿಕೇಶನ್ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ' ಎಂದು ಈಕೆ ತಿಳಿಸಿದ್ದಾಳೆ.
ಪ್ರತಿಯೊಬ್ಬರ ಮನಸ್ಸನ್ನು ಬೇಗ ಅರ್ಥ ಮಾಡಿಕೊಳ್ಳುತ್ತೇನೆ ಮತ್ತು ನನ್ನೊಟ್ಟಿಗೆ ಡೇಟಿಂಗ್ ಮಾಡಲು ಹಲವಾರು ಜನರು ಕಾಯುತ್ತಾ ಇರ್ತಾರೆ, ಹೀಗಾಗಿಯೇ ನನಗೆ ಹೆಚ್ಚು ಜನರು ಬಾಯ್‌ಫ್ರೆಂಡ್ಸ್ ಇದ್ದಾರೆ. ಈ ಹಿಂದೆ ನನಗೆ ಇನ್ನೂ ಹಲವಾರು ಜನ boyfriends ಇದ್ದರು, ಆದರೆ ಅವರೆಲ್ಲರಿಗೂ ಹೊಟ್ಟೆಕಿಚ್ಚು, ಹಾಗಾಗಿ ನಾನು ಅವರ ಜೊತೆ breakup ಮಾಡಿಕೊಂಡೆ, ಈಗ ಕೇವಲ ಏಳು ಸಾವಿರ ಮಂದಿ ಉಳಿದುಕೊಂಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ. ಆದರೆ ನನಗೆ ನನ್ನ ಸೌಂದರ್ಯ ಅಥವಾ ಹಣವನ್ನು ನೋಡದೆ ಮದುವೆಯಾಗುವವರು ಬೇಕಾಗಿದ್ದಾರೆ. ಅಂಥವರನ್ನು ಹುಡುಕಲು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾಳೆ.