ಮಕ್ಕಳಿಗಾಗಿ ತಾಯಿ ಏನು ಬೇಕಾದರೂ ಮಾಡುತ್ತಾರೆ. ಅದರಂತೆ ಇಲ್ಲೊಬ್ಬರು ತಾಯಿ ತನ್ನ ಮಗನಿಗಾಗಿ 35 ಅಡಿ ಉದ್ದದ ಸುರಂಗ ಮಾರ್ಗವನ್ನು ಕೊರೆದಿದ್ದಾರೆ. ಆದರೆ ತಾಯಿ ಯಾಕಾಗಿ ಸುರಂಗ ಮಾರ್ಗ ಕೊರೆದಿದ್ದಾರೆ ಎಂದು ಕೇಳಿದರೆ ಖಂಡಿತಾ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ.
2/ 7
ಮಗ ಎಷ್ಟೇ ಕಷ್ಟದಲ್ಲಿದ್ದರು ತಾಯಿ ಸಹಾಯ ಮಾಡದೆ ಇರಲಾರಳು. ಅದರಂತೆ ಈ ತಾಯಿ ಕೂಡ ತನ್ನ ಮಗನನ್ನು ಕರೆತರಲು ಸರಂಗ ಮಾರ್ಗವನ್ನು ಕೊರೆದಿದ್ದಾಳೆ. 3 ವಾರದಲ್ಲೇ ಒಬ್ಬಳೇ ಸುರಂಗ ಮಾರ್ಗವನ್ನು ಕೊರೆದಿದ್ದಾರೆ. ಅಷ್ಟಕ್ಕೂ ಮಗ ಎಲ್ಲಿದ್ದಾನೆ ಗೊತ್ತಾ?
3/ 7
ಆಕೆಯ ಮಗ ಒಬ್ಬ ಕೊಲೆ ಅಪರಾಧಿ. ಹಾಗಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಎಷ್ಟಾದರೂ ಕರುಳ ಸಂಕಟ ತಡೆಯಲಾಗದೆ ತಾಯಿ ಮಗನನ್ನು ಜೈಲಿನಿಂದ ಕರೆತರಲು ಸುರಂಗ ಮಾರ್ಗ ಕೊರೆದಿದ್ದಾಳೆ.
4/ 7
ಈ ಘಟನೆ ಉಕ್ರೇನ್ನ ದಕ್ಷಿನ ಜಪೋರಿಝಿಯಾದಲ್ಲಿ ನಡೆದಿದೆ. 51 ವರ್ಷದ ಮಹಿಳೆಯೊಬ್ಬಳು ಜೀವಾವಧಿ ಶಿಕ್ಷೆಗೆ ಒಳಗಾದ ಮಗನನ್ನು ಜೈಲಿನಿಂದ ಹೊರ ಕರೆತರಲು ಹೀಗೊಂದು ಉಪಾಯ ಮಾಡಿದ್ದಾಳೆ. ಅದಕ್ಕಾಗಿ ಜೈಲಿನ ಪಕ್ಕದಲ್ಲೇ ಬಾಡಿಗೆ ಮನೆಯಲ್ಲಿ ನೆಲೆಸುತ್ತಾಳೆ.
5/ 7
ಆರಂಭದಲ್ಲಿ 10 ಅಡಿ ಹಳ್ಳವನ್ನು ತೋಡಿ ನಂತರ 35 ಅಡಿ ಸುರಂಗ ಕೊರೆಯುತ್ತಾಳೆ. ಯಾರ ಗಮನಕ್ಕೂ ಬಾರದಂತೆ ಕೆಲಸ ಮಾಡುತ್ತಾಳೆ. ಯಾರಿಗೂ ಶಬ್ಧ ಬಾರದಿರಲಿ ಎಂದು ಎಲೆಕ್ಟ್ರಿಕ್ ಸ್ಕೂಟರ್ ಬಳಸಿ ರಾತ್ರಿ ವೇಳೆಯಲ್ಲಿ ಸುರಂಗ ತೋಡುತ್ತಿದ್ದಳು.
6/ 7
ಸುರಂಗ ತೋಡಿದ ಮಣ್ಣನ್ನ ಪ್ಲೈವುಡ್ ಮತ್ತು ಟ್ರಾಲಿ ಮೂಲಕ ಹೊರ ಹಾಕುತ್ತಿದ್ದಳು. ಮಹಿಳೆ ಮೂರು ವಾರಗಳ ನಂತರ ಜೈಲು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.
7/ 7
ಅಷ್ಟರಲ್ಲಾಗಲೇ 35 ಅಡಿ ಉದ್ದದ ಸುರಂಗವನ್ನು ಕೊರೆದಿದ್ದಳು, 3 ಟನ್ ಮಣ್ಣನ್ನು ಹೊರ ತೆಗೆದಿದ್ದಳು. ಸದ್ಯ ಮಹಿಳೆ ಜೈಲು ಪಾಲಾಗಿದ್ದಾಳೆ