ಕ್ರಿಸ್ಮಸ್ ಹಬ್ಬ ಬಂದೇ ಬಿಡ್ತು. ಮನೆಮನೆಗಳಲ್ಲಿ ಸಂಭ್ರಮಾಚರಣೆ, ಸಂತೋಷ ಮತ್ತು ಒಂದಷ್ಟು ತಿಂಡಿ ತಿನುಸುಗಳು, ಕೇಕ್ಗಳು ಮಾಡಿರುತ್ತಾರೆ. ಮಕ್ಕಳಿಗಂತು ಖುಷಿಯ ಪಾರವೇ ಇರೋಲ್ಲ ಬಿಡಿ.
2/ 8
ಈ ಸಮಯದಲ್ಲಿ ಚರ್ಚ್ನಲ್ಲಿ ವಿಶೇಷವಾಗಿ ಪೂಜೆಗಳು, ಪ್ರಾರ್ಥನೆಗಳು ನಡೆಯುತ್ತದೆ. ಜಗಮಗಿಸುವ ಲೈಟ್ಗಳನ್ನು ಚರ್ಚ್ಗಳಲ್ಲಿ ಹಾಕಿರುತ್ತಾರೆ. ಸೀಕ್ರೆಟ್ ಸಂತನ ಗಿಫ್ಟ್, ಡೆಕೋರೇಷನ್ಸ್ಗಳು ಮಾಡಲಾಗುತ್ತದೆ. ಒಟ್ಟಿನಲ್ಲಿ ವರ್ಷದ ಕೊನೆಯಲ್ಲಿ ಬರುವ ಈ ಹಬ್ಬದ ವೈಬ್ ವಿಭಿನ್ನ!
3/ 8
ಹಾಗಾದರೆ ಈ ಹಬ್ಬಕ್ಕೆ ಹ್ಯಾಪಿ ಕ್ರಿಸ್ಮಸ್ ಅಥವಾ ಮೆರಿ ಕ್ರಿಸ್ಮಸ್ ಅಂತ ಹೇಳೋದು ಯಾಕೆ ಗೊತ್ತಾ? ಅದೆಷ್ಟೋ ಜನರು ವಿಷ್ ಮಾಡ್ತಾರೆ ಆದ್ರೆ ರೀಸನ್ ಗೊತ್ತಿರೋಲ್ಲ. ಇದರ ಕುರಿತಾದ ಒಂದಷ್ಟು ಮಾಹಿತಿಗಳನ್ನು ತಿಳಿಯೋಣ ಬನ್ನಿ.
4/ 8
ಇಂಗ್ಲೆಂಡ್ನ ರಾಣಿ ಎಲಿಜಬೆತ್ II ಕ್ರಿಸ್ಮಸ್ ದಿನದಂದು ಯುನೈಟೆಡ್ ಕಿಂಗ್ಡಂನ ಜನರನ್ನು 'ಹ್ಯಾಪಿ ಕ್ರಿಸ್ಮಸ್' ಎಂದು ವಿಷ್ ಮಾಡ್ತಾ ಇದ್ರಂತೆ. ವದಂತಿಯ ಪ್ರಕಾರ ಅವರು 'ಮೆರ್ರಿ' ಗಿಂತ 'ಹ್ಯಾಪಿ'ಎನ್ನುವುದಕ್ಕೆ ಆದ್ಯತೆ ನೀಡುತ್ತಾರೆ. ಏಕೆಂದರೆ 'ಮೆರ್ರಿ' ಎಂಬ ಪದವು ಗದ್ದಲ ಮತ್ತು ಮಾದಕತೆಯ ಅರ್ಥದೊಂದಿಗೆ ಸಂಬಂಧಿಸುತ್ತದೆ ಅಂತೆ.
5/ 8
ಇದಲ್ಲದೆ, ಗ್ರೇಟ್ ಬ್ರಿಟನ್ನಲ್ಲಿ ಹಿಂದಿನ ಚರ್ಚ್ ನಾಯಕರು ಕ್ರಿಶ್ಚಿಯನ್ ಅನುಯಾಯಿಗಳನ್ನು 'ಮೆರ್ರಿ' ಬದಲಿಗೆ 'ಹ್ಯಾಪಿ ಎಂದು ಹೇಳಲು ಅಲ್ಲಿನ ಜನರು ಉತ್ಸಾಹಿಸಿದರು ಎಂದು ಇತಿಹಾಸಕಾರರು ನಂಬುತ್ತಾರೆ. ಏಕೆಂದರೆ, 'ಹ್ಯಾಪಿ' ಎಂಬುವುದು ಒಂದು ಭಾವನೆಯಾಗಿದೆ, ಆದರೆ 'ಮೆರಿ' ಒಂದು ಜನರ ಜಡವಳಿಕೆ ಅಂತೆ.
6/ 8
ಆದರೆ, ಬಿಷಪ್ ಜಾನ್ ಫಿಶರ್ ಅವರು ಹೆನ್ರಿ VIII ರ ಮುಖ್ಯಮಂತ್ರಿ ಥಾಮಸ್ ಕ್ರೋಮ್ವೆಲ್ ಅವರಿಗೆ ಬರೆದ ಪತ್ರದಲ್ಲಿ "ಮೆರ್ರಿ ಕ್ರಿಸ್ಮಸ್" ಎಂದು ಬರೆಯಲಾಗಿತ್ತು. ಪತ್ರವು ಲಂಡನ್ನ 1534 ರ ಹಿಂದಿನದು. ಇಲ್ಲಿ ಮೆರ್ರಿ ಅಂತ ಬಳಸಲಾಗುತ್ತದೆ.
7/ 8
16 ನೇ ಶತಮಾನದಲ್ಲಿ, 1843 ರಲ್ಲಿ ಚಾರ್ಲ್ಸ್ ಡಿಕನ್ಸ್ ಕಾದಂಬರಿಯಾದ 'ಎ ಕ್ರಿಸ್ಮಸ್ ಕರೋಲ್' ನಲ್ಲಿ 'ವಿ ವಿಶ್ ಯು ಎ ಮೆರ್ರಿ ಕ್ರಿಸ್ಮಸ್' ಎಂಬ ಪದವನ್ನು ಉಲ್ಲೇಖಿಸಲಾಗಿದೆ, ಇದು ಅಂದಿನಿಂದ ಅದರ ಜನಪ್ರಿಯತೆಗೆ ದೊಡ್ಡ ಕಾರಣವಾಗಿದೆ.
8/ 8
ಅದೇ ವರ್ಷದಲ್ಲಿ, ಈ ನುಡಿಗಟ್ಟು ವಾಣಿಜ್ಯ ಕ್ರಿಸ್ಮಸ್ ಕಾರ್ಡ್ಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ವಿಕ್ಟೋರಿಯನ್ ಕ್ರಿಸ್ಮಸ್ ಕ್ರಿಸ್ಮಸ್ನ ಅನೇಕ ಸಂಪ್ರದಾಯಗಳನ್ನು ವ್ಯಾಖ್ಯಾನಿಸಿದೆ ಮತ್ತು ಇದು ಅವುಗಳಲ್ಲಿ ಒಂದಾಗಿದೆ.