ರೈಲಿನಲ್ಲಿ ನೀಲಿ, ಕೆಂಪು ಮತ್ತು ಹಸಿರು ಕೋಚ್‌ಗಳು ಯಾಕಿರುತ್ತೆ? ಇದರ ಹಿಂದಿನ ಕಾರಣವೇನು ಎಂಬುದು ಗೊತ್ತಾ? ಭಾರತೀಯ ರೈಲ್ವೇಯು ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಮತ್ತು ವಿಶ್ವದಲ್ಲಿ ನಾಲ್ಕನೇ ಅತಿ ದೊಡ್ಡ ರೈಲು ಜಾಲವಾಗಿದೆ. ಆರ್ಥಿಕತೆ ಮತ್ತು ಸಾರಿಗೆಯ ವಿಷಯದಲ್ಲಿ ರೈಲ್ವೆಗಳು ಮಾರುಕಟ್ಟೆಗಳನ್ನು ಏಕೀಕರಿಸುವಲ್ಲಿ ಮತ್ತು ವ್ಯಾಪಾರವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.
ಬಹುಪಾಲು ರೈಲ್ವೇ ಕೋಚ್‌ಗಳು ನೀಲಿ ಬಣ್ಣದ್ದಾಗಿದ್ದು, ಅವು ಐಸಿಎಫ್ ಅಥವಾ ಇಂಟಿಗ್ರೇಟೆಡ್ ಕೋಚ್‌ಗಳಾಗಿದ್ದು, ಗಂಟೆಗೆ 70 ರಿಂದ 140 ಕಿಲೋಮೀಟರ್‌ಗಳ ವೇಗವನ್ನು ಹೊಂದಿರುತ್ತದೆ. ಈ ರೈಲುಗಳ ಮೇಲೆ ಎಕ್ಸ್‌ಪ್ರೆಸ್ ಅಥವಾ ಸೂಪರ್‌ಫಾಸ್ಟ್ ರೈಲುಗಳು ಎಂದು ಬರೆದಿರುವುದನ್ನು ಕಾಣಬಹುದು. ಇವುಗಳನ್ನು ಕಬ್ಬಿಣದಿಂದ ತಯಾರಿಸಲಾಗುತ್ತದೆ ಮತ್ತು ಏರ್ ಬ್ರೇಕ್ಗಳನ್ನು ಅಳವಡಿಸಲಾಗಿರುತ್ತದೆ.
2000 ಇಸವಿಯಲ್ಲಿ, ಈ ಕೋಚ್‌ಗಳನ್ನು ಜರ್ಮನಿಯಿಂದ ತರಿಸಲಾಯಿತು.ಈ ಕೋಚ್‌ಗಳು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಇತರ ಕೋಚ್‌ಗಳಿಗಿಂತ ಕಡಿಮೆ ತೂಕ ಹೊಂದಿರುತ್ತದೆ. ಈ ರೈಲುಗಳು ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಹೀಗಾಗಿ ಕೆಂಪು ಕೋಚ್‌ಗಳನ್ನು ಮುಖ್ಯವಾಗಿ ಬಳಸಲಾಗುತ್ತದೆ. ಕೆಂಪು ಕೋಚ್‌ಗಳನ್ನು ಮುಖ್ಯವಾಗಿ ಭಾರತೀಯ ರೈಲ್ವೇ ರೈಲುಗಳಾದ ರಾಜಧಾನಿ ಮತ್ತು ಶತಾಬ್ದಿಗಳಲ್ಲಿ ವೇಗವಾಗಿ ಓಡಿಸಲು ಬಳಸಲಾಗುತ್ತದೆ.