ಹಾಗೆಯೇ ರಸ್ತೆಯ ಮೇಲೆ ಬಿಳಿ ಬಣ್ಣವನ್ನು ಹಾಕಿರುತ್ತಾರೆ. ಆದರೆ ಈ ಮರಗಳಿಗೆ ಬಿಳಿ ಬಣ್ಣವನ್ನು ಯಾತಕ್ಕಾಗಿ ಹಾಕಿರುತ್ತಾರೆ ಅಂತ ಗೊತ್ತಾ? ಹೀಗೆ ಬಣ್ಣವನ್ನು ಹಾಕಿದ್ರೂ ಮರವನ್ನು (Tree) ಕಡಿಯುತ್ತಾರೆ ಅಲ್ವಾ? ಇಷ್ಟೆಲ್ಲಾ ಹೇಳುವಾಗ ನಿಮಗೆ ಇಂಟ್ರೆಸ್ಟ್ ಹೆಚ್ಚಾಗ್ತಾ ಇದ್ಯಾ? ಇದರ ಕಂಪ್ಲೀಟ್ ಡೀಟೇಲ್ಸ್ ಹೀಗಿದೆ ನೋಡಿ. ಮರವನ್ನು ಬಿಳಿ ಬಣ್ಣಕ್ಕೆ (White Colour) ಚಿತ್ರಿಸಲು ಹಲವು ಕಾರಣಗಳಿವೆ, ಅವುಗಳು ಯಾವುವು, ನಾವು ತಿಳಿಯೋಣ.
ಸೂರ್ಯನ ಬೆಳಕಿನಿಂದ ರಕ್ಷಿಸುತ್ತದೆ: ಮರವು ಒಣಗಿ ಬಿರುಕು ಬಿಡುವುದನ್ನು ನೀವು ಹೆಚ್ಚಾಗಿ ಗಮನಿಸಿರಬಹುದು. ಆದ್ದರಿಂದ ಅದರ ತೊಗಟೆ ಕಾಂಡದಿಂದ ಬೇರ್ಪಡಲು ಪ್ರಾರಂಭಿಸುತ್ತದೆ. ಸಸ್ಯಗಳಿಗೆ ಬಿಳಿ ಬಣ್ಣವನ್ನು ನೀಡುವುದರಿಂದ, ಸೂರ್ಯನ ಕಿರಣಗಳು ಅವುಗಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ, ಆದ್ದರಿಂದ ಸಸ್ಯವು ಆರೋಗ್ಯಕರವಾಗಿರುತ್ತದೆ. ಇದಕ್ಕಾಗಿಯೇ ಬಿಳಿ ಬಣ್ಣವನ್ನು ಮರಗಳಿಗೆ ಹಚ್ಚಲಾಗುತ್ತದೆ.