Eötvös Loránd ವಿಶ್ವವಿದ್ಯಾನಿಲಯದ ಪೋಸ್ಟ್‌ಡಾಕ್ಟರಲ್ ಅಧ್ಯಯನಗಾರ್ತಿ ಆಂಡ್ರಿಯಾ ಸೊಮ್ಮೀಸ್ ಅವರು ನಾಯಿಗಳು ತಮ್ಮ ತಲೆಯನ್ನು ಏಕೆ ಒಂದು ಬದಿಗೆ ಕೊಂಡೊಯ್ಯುತ್ತವೆ ಎಂದು ಅಧ್ಯಯನ ನಡೆಸಿದರು. ಈ ಸಂಶೋಧನೆಯಲ್ಲಿ Science.org ಪ್ರಕಾರ, ಬಹು ಆಟಿಕೆ ಹೆಸರುಗಳನ್ನು ತ್ವರಿತವಾಗಿ ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ‘ಪ್ರತಿಭಾನ್ವಿತ ನಾಯಿಗಳ’ ಗುಂಪಿನ ಮೇಲೆ ಅಧ್ಯಯನವನ್ನು ಮಾಡಲಾಗಿದೆ.
ಇನ್ನು ತಲೆಯನ್ನು ಒಂದು ಬದಿಗೆ ಬಗ್ಗಿಸಿದ ನಾಯಿಗಳಲ್ಲಿ ಹೆಚ್ಚಿನ ಗಮನ ಅಥವಾ ಏಕಾಗ್ರತೆಯ ಕಾರಣ ಇರಬಹುದು ಎಂದು ಸಂಶೋಧಕರ ತಂಡವು ತೀರ್ಮಾನಿಸಿದೆ. ಇನ್ನು ಈ ಬಗ್ಗೆ ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಮಾನವ-ಪ್ರಾಣಿ ಸಂವಾದದ ಸಂಶೋಧಕ ಮೊನಿಕ್ ಉಡೆಲ್ ಅವರು ಈ ಸಂಶೋಧನೆ ಕೇವಲ ಪ್ರಾಥಮಿಕವಾಗಿವೆ ಎಂದು ಹೇಳಿದರು. ಆದರೆ ಮುಂದಿನ ಹಂತದಲ್ಲಿ ಇನ್ನಷ್ಟು ಅಧ್ಯನ ನಡೆಸಲಿದ್ದೇವೆ ಎಂದಿದ್ದಾರೆ.