ನಾವೆಲ್ಲರೂ ಗ್ರೆಗೋರಿಯನ್ ಕ್ಯಾಲೆಂಡರ್ ಬಳಸುತ್ತೇವೆ. ಗ್ರೆಗೋರಿಯನ್ ಕ್ಯಾಲೆಂಡರ್ಗೂ ಮೊದಲು ಜೂಲಿಯನ್ ಕ್ಯಾಲೆಂಡರ್ ಬಳಸಲಾಗುತ್ತಿತ್ತು. ಇದನ್ನ 1927ರ ಮೊದಲು ಟರ್ಕಿಯಲ್ಲಿಯೂ ಬಳಸಲಾಗುತ್ತಿತ್ತು. ಈ ಮೊದಲು ರೋಮನ್ ಕ್ಯಾಲೆಂಡರ್ ಬಳಕೆಯಲ್ಲಿತ್ತು. ಆದ್ರೆ, ಆರಂಭದಲ್ಲಿ ವರ್ಷವನ್ನು ಚಂದ್ರನ ಚಕ್ರದ ಆಧಾರದ ಮೇಲೆ ಮಾರ್ಚ್’ನಿಂದ ಡಿಸೆಂಬರ್’ವರೆಗೆ 29 ಅಥವಾ 31 ದಿನಗಳ 10 ತಿಂಗಳುಗಳಾಗಿ ವಿಭಾಗ ಮಾಡಲಾಗಿತ್ತು.
ಜೂಲಿಯಸ್ ಆಳ್ವಿಕೆಯಲ್ಲಿ ರೋಮನ್ ಕ್ಯಾಲೆಂಡರ್ ಪರಿಷ್ಕರಿಸಿದ್ದು, ಹೊಸ ಕ್ಯಾಲೆಂಡರ್ ಪರಿಚಯಿಸಿದರು. ರೋಮನ್ ಕ್ಯಾಲೆಂಡರ್ನಲ್ಲಿ, ದಿನಗಳು ಜನವರಿ 30, ಫೆಬ್ರವರಿ 29, ಮಾರ್ಚ್ 30, ಏಪ್ರಿಲ್ 29, ಮೇ 30, ಜೂನ್ 29, ಜುಲೈ 30, ಆಗಸ್ಟ್ 29, ಸೆಪ್ಟೆಂಬರ್ 30, ಅಕ್ಟೋಬರ್ 29, ನವೆಂಬರ್ 30 ಮತ್ತು ಡಿಸೆಂಬರ್ 29. ಅಂದರೆ ರೋಮನ್ ಕ್ಯಾಲೆಂಡರ್ ಪ್ರಕಾರ, ನಮಗೆ ವರ್ಷದಲ್ಲಿ 354 ದಿನಗಳಿವೆ. ಆದ್ರೆ, ಜೂಲಿಯಸ್ ಸೀಸರ್ ಅದನ್ನ ಬದಲಾಯಿಸಿ, ವರ್ಷಕ್ಕೆ 11 ದಿನಗಳನ್ನ ಅಂದರೆ ಪ್ರತಿ ತಿಂಗಳಿಗೆ ಒಂದು ದಿನವನ್ನ ಸೇರಿಸಿದರು.
ಜೂಲಿಯಸ್ ಸೀಸರ್ ನಂತರ ಅಗಸ್ಟಸ್ ರೋಮನ್ ಆಡಳಿತಕ್ಕೆ ಬಂದ್ರು ಅಂತ ನಮಗೆಲ್ಲಾ ತಿಳಿದಿದೆ. ಈ ರಾಜನ ಆಳ್ವಿಕೆಯಲ್ಲಿ ಮತ್ತೆ ಜೂಲಿಯನ್ ಕ್ಯಾಲೆಂಡರ್ನಲ್ಲಿ ಬದಲಾವಣೆಗಳು ಸಂಭವಿಸಿದವು. ಜೂಲಿಯಸ್ ಹೆಸರಿನ ಜುಲೈ ತಿಂಗಳಿಗೆ 31 ದಿನಗಳು ಇರುವುದನ್ನ ಅಗಸ್ಟಸ್ ಇಷ್ಟಪಡುತ್ತಾ ಇರಲಿಲ್ಲ. ಯಾಕಂದ್ರೆ, ತನ್ನ ಹೆಸರಿನ ಆಗಸ್ಟ್ ತಿಂಗಳಿಗೆ ಕೇವಲ 30 ದಿನಗಳು ಮಾತ್ರ ಇದ್ದವು. ಹೀಗಾಗಿ ಅಗಸ್ಟಸ್ ಫೆಬ್ರವರಿಯಲ್ಲಿ 29 ದಿನಗಳಿಂದ ಒಂದು ದಿನವನ್ನ ತೆಗೆದು ಆಗಸ್ಟ್ಗೆ ಸೇರಿಸಿದ.