Summer Vacation: ಬೇಸಿಗೆ ಕಾಲದಲ್ಲಿಯೂ ಈ ಸ್ಥಳಗಳು ಸಖತ್​ ಕೋಲ್ಡ್​, ಕರ್ನಾಟಕದಲ್ಲೇ ಇದೆ ಸ್ವರ್ಗ!

ಬೇಸಿಗೆ ಕಾಲ ಬಂತು ಅಂದ್ರೆ ಒಂದಷ್ಟು ಜನ ಟ್ಯಾನಿಂಗ್​ ಅಂತ ಬ್ಯೂಟಿ ಕೇರ್​ ಮಾಡಿಕೊಂಡ್ರೆ, ಕೆಲವರು ಟ್ರಿಪ್​ ಹೋಗಬೇಕು ಅಂತ ಪ್ಲ್ಯಾನ್​ ಮಾಡ್ತಾರೆ. ನಿಮಗಾಗಿ ಒಂದು ಗುಡ್​ ನ್ಯೂಸ್​.

First published:

  • 17

    Summer Vacation: ಬೇಸಿಗೆ ಕಾಲದಲ್ಲಿಯೂ ಈ ಸ್ಥಳಗಳು ಸಖತ್​ ಕೋಲ್ಡ್​, ಕರ್ನಾಟಕದಲ್ಲೇ ಇದೆ ಸ್ವರ್ಗ!

    ಬೇಸಿಗೆ ಕಾಲ ಬಂದೇ ಬಿಡ್ತು. ಇನ್ನೇನು ಜನರು ಟ್ರಿಪ್​, ಟ್ರಕ್ಕಿಂಗ್​ ಹೋಗೋ ಜನರು ಕಾಣಿಸಿಕೊಳ್ಳುತ್ತಾರೆ. ತುಂಬಾ ಬಿಸಿಲು, ಎಲ್ಲಿಗೆ ಟ್ರಿಪ್​ ಹೋಗೋದು ಅಂತ ಯೋಚನೆ ಮಾಡ್ತಾ ಇದ್ರೆ ಈ ಸುದ್ಧಿಯನ್ನು ಓದಿ.

    MORE
    GALLERIES

  • 27

    Summer Vacation: ಬೇಸಿಗೆ ಕಾಲದಲ್ಲಿಯೂ ಈ ಸ್ಥಳಗಳು ಸಖತ್​ ಕೋಲ್ಡ್​, ಕರ್ನಾಟಕದಲ್ಲೇ ಇದೆ ಸ್ವರ್ಗ!

    ಕೂರ್ಗ್​: ಕೂರ್ಗ್ ಅಂತ ಹೇಳಿದ ಕೂಡಲೇ ನಮಗೆ ತಂಪು ಸ್ಥಳವೇ ನೆನಪಾಗುತ್ತೆ. ಈ ಗಿರಿಧಾಮಕ್ಕೆ ಬೇಸಿಗೆ ರಜೆಯಲ್ಲಿ ಟ್ರಿಪ್​ ಹೋಗಲು ಸೂಪರ್​ ಪ್ಲೇಸ್​. ಎತ್ತ ನೋಡಿದರು ಹಚ್ಚ ಹಸಿರಿನ ಸಿರಿ. ಈ ಕಾರಣದಿಂದಲೇ ಕೂರ್ಗ್‌ ಅನ್ನು 'ಭಾರತದ ಸ್ಕಾಟ್ಲೆಂಡ್' ಎಂದು ಕರೆಯುತ್ತಾರೆ.

    MORE
    GALLERIES

  • 37

    Summer Vacation: ಬೇಸಿಗೆ ಕಾಲದಲ್ಲಿಯೂ ಈ ಸ್ಥಳಗಳು ಸಖತ್​ ಕೋಲ್ಡ್​, ಕರ್ನಾಟಕದಲ್ಲೇ ಇದೆ ಸ್ವರ್ಗ!

    ನಾಗರಹೊಳೆ ರಾಷ್ಟ್ರೀಯ ಉದ್ಯಾನವನ: ಈ ಉದ್ಯಾನವನ ಭಾರತದ ಅತ್ಯಂತ ಜನಪ್ರಿಯ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದು ಅಂತಲೇ ಹೇಳಬಹುದು. ತಾಜಾ ಹೊಳೆಗಳು ಹಾಗು ಸರೋವರಗಳನ್ನು ಇಲ್ಲಿ ಕಾಣಬಹುದು. ಜೊತೆಗೆ ಇಲ್ಲಿ ಅನೇಕ ವೈವಿಧ್ಯಮಯ ಪ್ರಾಣಿಗಳನ್ನು ಹತ್ತಿರದಿಂದ ನೋಡಬಹುದು. ಇಲ್ಲಿ ಜೀಪ್‌ ಸಫಾರಿ, ಟ್ರೆಕ್ಕಿಂಗ್‌, ದೋಣಿ ವಿಹಾರಗಳನ್ನು ಮಾಡಬಹುದು. ಸಮ್ಮರ್​ ಸೀಸನ್​ನಲ್ಲಿ ತಂಪಾಗಿರುವ ಕರ್ನಾಟಕದ ಸ್ಥಳಗಳಲ್ಲಿ ಈ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕೂಡ ಒಂದು.

    MORE
    GALLERIES

  • 47

    Summer Vacation: ಬೇಸಿಗೆ ಕಾಲದಲ್ಲಿಯೂ ಈ ಸ್ಥಳಗಳು ಸಖತ್​ ಕೋಲ್ಡ್​, ಕರ್ನಾಟಕದಲ್ಲೇ ಇದೆ ಸ್ವರ್ಗ!

    ಬೆಳಗಾವಿ: ಅರೇ! ಇದೇನಿದು ಈ ಸ್ಥಳ ಸಖತ್​ ಬಿಸಿ ಅಲ್ವಾ ಅಂತ ನೀವು ಯೋಚನೆ ಮಾಡಿರಬಹುದು. ಆದರೆ, ಬೇಸಿಗೆಯಲ್ಲಿ ಕುಟುಂಬದ ಜೊತೆ ಪ್ರವಾಸ ಯೋಜಿಸಲು ಪರ್ಫೆಕ್ಟ್‌ ಆಗಿದೆ. ಈ ಸುಂದರವಾದ ನಗರವು ಸಮುದ್ರ ಮಟ್ಟದಿಂದ ಸುಮಾರು 760 ಮೀಟರ್ ಎತ್ತರದಲ್ಲಿದೆ. ನಿಬ್ಬೆರಗಾಗುವ ಐತಿಹಾಸಿಕ ಸ್ಮಾರಕಗಳು, ನೈಸರ್ಗಿಕ ದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಕೋಟೆ, ಭೀಮಗಡ್ ವನ್ಯಜೀವಿ ಅಭಯಾರಣ್ಯ, ಕಮಲ ಬಸ್ತಿ ಕೋಟೆ, ಜೈನ ದೇವಾಲಯಗಳಿಗೆ ತಪ್ಪದೇ ಹೋಗಿ.

    MORE
    GALLERIES

  • 57

    Summer Vacation: ಬೇಸಿಗೆ ಕಾಲದಲ್ಲಿಯೂ ಈ ಸ್ಥಳಗಳು ಸಖತ್​ ಕೋಲ್ಡ್​, ಕರ್ನಾಟಕದಲ್ಲೇ ಇದೆ ಸ್ವರ್ಗ!

    ಮಲೆನಾಡು: ಈ ಸ್ಥಳದಲ್ಲಿ ಅದೆಷ್ಟೋ ಸಿನಿಮಾ ಶೂಟಿಂಗ್​ಗಳು ನಡೆಯುತ್ತವೆ. ಮಲೆನಾಡನ್ನು ‘ಕಾಫಿ ನಾಡು’ ಎಂದೇ ಕರೆಯುತ್ತಾರೆ. ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾದ, ಮುಳ್ಳಯ್ಯನಗಿರಿ ಶಿಖರದಲ್ಲಿ ನೀವು ಟ್ರೆಕ್ಕಿಂಗ್‌ ಯೋಜಿಸಬಹುದು. ಇದು 1930 ಮೀಟರ್ ಎತ್ತರದಲ್ಲಿದ್ದು, ರಾಜ್ಯದ ಅತಿ ಎತ್ತರದ ಶಿಖರ ಎಂದೆನಿಸಿಕೊಂಡಿದೆ.

    MORE
    GALLERIES

  • 67

    Summer Vacation: ಬೇಸಿಗೆ ಕಾಲದಲ್ಲಿಯೂ ಈ ಸ್ಥಳಗಳು ಸಖತ್​ ಕೋಲ್ಡ್​, ಕರ್ನಾಟಕದಲ್ಲೇ ಇದೆ ಸ್ವರ್ಗ!

    ಕುದುರೆಮುಖ: ಇದಂತು ಟ್ರಕ್ಕಿಂಗ್​ ಮಾಡಲು ಸೂಪರ್​ ಪ್ಲೇಸ್​ ಅಂತಲೇ ಹೇಳಬಹುದು. ಕಳಸದಿಂದ ಕೇವಲ 30 ಕಿ. ಮೀ ಅಂತರದಲ್ಲಿ ಈ ಕುದುರೆಮುಖ ಸಿಗುತ್ತದೆ. ಇದರ ಹತ್ತಿರದಲ್ಲೇ ಹಲವಾರು ಟೀ, ಕಾಫಿ ತೋಟಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

    MORE
    GALLERIES

  • 77

    Summer Vacation: ಬೇಸಿಗೆ ಕಾಲದಲ್ಲಿಯೂ ಈ ಸ್ಥಳಗಳು ಸಖತ್​ ಕೋಲ್ಡ್​, ಕರ್ನಾಟಕದಲ್ಲೇ ಇದೆ ಸ್ವರ್ಗ!

    ಒಟ್ಟಿನಲ್ಲಿ ನೀವು ಬೇಸಿಗೆ ಕಾಲದಲ್ಲಿ ತಂಪನೆಯ ಅನುಭವವನ್ನು ಪಡೆಯಬೇಕು ಅಂತ ಅನಿಸಿದರೆ ಈ ಮೇಲಿನ ಪ್ಲೇಸ್​ಗಳಿಗೆ ನೀಡಬಹುದು.

    MORE
    GALLERIES