Hidden places: ರಾಜರು ಅಡಗಿ ಕೂರ್ತಾ ಇದ್ದ ಸ್ಥಳಗಳು ಇವೇ ನೋಡಿ!
ಕಣ್ಣುಮುಚ್ಚಾಲೆ ಆಟ ಅಂದ್ರೆ ಎಲ್ರಿಗೂ ಗೊತ್ತೇ ಇದೆ. ನಮ್ಮ ಬಾಲ್ಯ ಜೀವನದಲ್ಲಿ ಆಡಿದ ಅದೇಷ್ಟೋ ಆಟಗಳಲ್ಲಿ ಇದು ಕೂಡ ಒಂದು. ಅದೇ ರೀತಿಯಾಗಿ ಶತ್ರುಗಳಿಂದ ಪಾರಾಗಲು ರಾಜರು ಒಂದಷ್ಟು ಸ್ಥಳಗಳಲ್ಲಿ ಅಡಗಿ ಕೂರ್ತಾ ಇದ್ರು. ಆ ಸ್ಥಳಗಳು ಇಂದಿಗೂ ಜೀವಂತ ಇದೆ. ನೋಡೋಣ ಬನ್ನಿ.
ಅದೇ ರೀತಿಯಾಗಿ ಆಗಿನ ಕಾಲದ ರಾಜರು ಕೂಡ ತಮ್ಮ ವೈರಿಗಳಿಂದ ತಪ್ಪಿಸಿಕೊಳ್ಳಲು ಹೀಗೆ ಅಡಗಿ ಕೂರ್ತ ಇದ್ರು. ಅವರಿಗೂ ಕೂಡ ಸೀಕ್ರೇಟ್ ಪ್ಲೇಸ್ಗಳು ಅಂತ ಇರ್ತಾ ಇತ್ತು. ಹಾಗಾದ್ರೆ ಇನ್ನೂ ಕೂಡ ಆ ಅಡಗು ತಾಣಗಳು ಭಾರತದಲ್ಲಿ ಇದ್ಯಾ? ಎಲ್ಲೆಲ್ಲಿ ಇದೆ? ತಿಳಿಯೋಣ ಬನ್ನಿ!
2/ 7
ಲೈತ್ಮಾವ್ಸಿಯಾಂಗ್, ಮೆಘಾಲಯ: ಹೌದು, ಪೂರ್ವ ಖಾಸಿ ಹಿಲ್ಸ್ನ ಖತರ್ಶ್ನಾಂಗ್ ಲೈತ್ಕ್ರೋಹ್ ಬ್ಲಾಕ್ನಲ್ಲಿರುವ ಈ ಸಣ್ಣ ಹಳ್ಳಿಯು ಹಚ್ಚಹಸುರಿನ ನಡುವೆ ಪ್ರತ್ಯೇಕವಾಗಿರುವ ಅಡಗು ತಾಣವಾಗಿದೆ.
3/ 7
ಆರ್ಚ್ ಸೇತುವೆ, ಕೇರಳ: ಕೇರಳದ 13 ಕಮಾನಿನ ಸೇತುವೆಯು ಕೊಲ್ಲಂ ಜಿಲ್ಲೆಯ ಕಝತುರುತಿಯಲ್ಲಿದೆ. ಇಲ್ಲಿ ಮುಖ್ಯವಾಗಿ ವಾಸ್ತುಶಿಲ್ಪವು ಫೇಮಸ್ ಅಂತ ಹೇಳಬಹುದು. ಕೇವಲ ಬಂಡೆಗಳಿಂದ ಶತಮಾನದ ಹಿಂದೆ ನಿರ್ಮಿಸಲಾದ 13 ಕಮಾನು ವಾಸ್ತುಶಿಲ್ಪದ ಅದ್ಭುತವಾಗಿದೆ. ನೀವು ಇಲ್ಲಿಗೆ ಭೇಟಿ ನೀಡಲೇಬೇಕು.
4/ 7
ತಡ ಫಾಲ್ಸ್: ಈ ಜಲಪಾತ ಆಂಧ್ರಪ್ರದೇಶದಲ್ಲಿಇದೆ. ಹಚ್ಚ ಹಸುರಿನ ನಡುವೆ ಇರುವ ಈ ಫಾಲ್ಸ್ ಅಷ್ಟೇನು ಫೇಮಸ್ ಇಲ್ಲ. ಆದರೆ ಅಡುಗಿ ತಾಣವಾಗಿ ಇತ್ತು ಈ ಜಾಗ.
5/ 7
ಅರ್ವಾಲೆಮ್ ಗುಹೆಗಳು, ಗೋವಾ: ಈ ಗುಹೆ ನೋಡುವಾಗಳೆ ಗೊತ್ತಾಗುತ್ತದೆ ಎಂತಹ ರಹಸ್ಯವಾದ ಸ್ಥಳಗಳು ಇವು ಎಂದು. ರಾಕ್ ಕಟ್ ಗುಹೆಗಳು ಗೋವಾದಲ್ಲಿನ ಇತಿಹಾಸಪೂರ್ವದ ಸ್ಮಾರಕಗಳು ಆಗಿದೆ. ಪಾಂಡವರ ಮತ್ತು ಕೌರವರ ಕಾಲದ ಗುಹೆ ಇದಾಗಿದೆ.
6/ 7
ಜಟಿಂಗ್ರಿ, ಹಿಮಾಚಲ ಪ್ರದೇಶ: ಹಿಮಾಚಲವು ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಆದರೆ, ಈ ಚಿಕ್ಕ ವಾಸಸ್ಥಾನವು ಬರೋಟ್ಗೆ ಹೋಗುವ ಮಾರ್ಗದಲ್ಲಿ ಘಟಸ್ನಿಯಿಂದ 5 ಕಿಮೀ ದೂರದಲ್ಲಿದೆ.