ಹೊಗೇನಕಲ್ ಜಲಪಾತ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಈ ಜಲಪಾತವನ್ನು ಕಾಣಬಹುದು. ವರ್ಷವಿಡೀ ಉಕ್ಕಿ ಹರಿಯುವ ಈ ಜಲಧಾರೆಯು ಕೊರಾಕಲ್ ಸವಾರಿಗಳು, ಸಿಹಿನೀರಿನ ಮೀನುಗಳು ಮತ್ತು ಸ್ಥಳೀಯರಿಂದ ತೈಲ ಮಸಾಜ್ಗಳನ್ನು ಎಂಜಾಯ್ ಮಾಡಬಹುದು. ಅಷ್ಟೇ ಅಲ್ಲ, ಈ ಜಲಪಾತವನ್ನು “ಭಾರತದ ನಯಾಗರಾ ಜಲಪಾತ” ಎಂದೇ ಕರೆಯುತ್ತಾರೆ. ಸುತ್ತ ಇರುವ ಪರಿಸರದೊಂದಿಗೆ ನಿಮ್ಮ ಹಾಲಿಡೇಸ್ ನ್ನು ಎಂಜಾಯ್ ಮಾಡಬಹುದು.
ಗೋಕರ್ಣ:- ನಮ್ಮ ಕರ್ನಾಟಕದಲ್ಲಿಯೇ ಇರುವ ಪುಣ್ಯ ಕ್ಷೇತ್ರಗಳಲ್ಲಿ ಗೋಕರ್ಣ ಕೂಡ ಒಂದು. ವಿಶ್ವದ ಯಾತ್ರಾರ್ಥಿಗಳನ್ನು ಸೆಳೆಯುವ ಈ ದಿವ್ಯ ಕ್ಷೇತ್ರದಲ್ಲಿ ಪ್ರಾಚೀನವಾದ ಕಡಲತೀರಗಳಿವೆ. ಇವು ತುಂಬಾ ಹೆಸರುವಾಸಿಯು ಹೌದು. ಕುಡ್ಲೆ ಬೀಚ್ ಮತ್ತು ಓಂ ಬೀಚ್ಗಳು ಗೋಕರ್ಣದ ಆಹ್ಲಾದಕರವಾದ ಕಡಲತೀರಗಳಾಗಿವೆ. ಈ ಕಡಲತೀರಗಳಲ್ಲಿ ಸಾಕಷ್ಟು ಜಲಕ್ರೀಡೆಗಳನ್ನು ಎಂಜಾಯ್ ಮಾಡಬಹುದು. ಹಾಗೆಯೇ ಈ ಸಮುದ್ರಗಳಿಗೆ ಹಲವಾರು ವರ್ಷಗಳ ಐತಿಹ್ಯವಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ 482 ಕಿ.ಮೀ ದೂರದಲ್ಲಿದೆ.
ಭೀಮೇಶ್ವರಿ:- ಮಂಡ್ಯ ಜಿಲ್ಲೆಯಲ್ಲಿ ಇರುವ ಈ ಫಾಲ್ಸ್ ಭೀಮೇಶ್ವರಿಯಲ್ಲಿ ಮೀನುಗಾರಿಗೆ, ಟ್ರೆಕ್ಕಿಂಗ್, ತೆಪ್ಪ ಸವಾರಿಯಂತಹ ರೋಮಾಂಚಕಾರಿ ಚಟುವಟಿಕೆಗಳನ್ನು ಎಂಜಾಯ್ ಮಾಡಬಹುದು. ಕಾವೇರಿ ನದಿಯ ಸಾಮೀಪ್ಯ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳನ್ನು ನೋಡಬಹುದು. ಸಾಹಸ ಶಿಬಿರಗಳು, ಪಕ್ಷಿ ವೀಕ್ಷಕರಿಗೆ ಇದೊಂದು ಸ್ವರ್ಗ ಎಂದೇ ಹೇಳಬಹುದು. ಬೆಂಗಳೂರಿನಿಂದ ಭೀಮೇಶ್ವರಿಗೆ ಸುಮಾರು 103 ಕಿ.ಮೀ ದೂರದಲ್ಲಿದೆ.
ಶಿವನ ಸಮುದ್ರ:- ಗಗನ ಚುಕ್ಕಿ ಮತ್ತು ಭರಚುಕ್ಕಿ ಎಂದೇ ಕರೆಯಲಾಗುವ ಜಲಪಾತಗಳ ಸೌಂದರ್ಯವಿದು. ಜಲಪಾತದ ಸುರಕ್ಷಿತವಾದ ಸ್ಥಳದಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳಬಹುದು. ಇದರ ಜೊತೆಗೆ ಜಲಪಾತದ ಸಮೀಪ ಶ್ರೀ ರಂಗನಾಥಸ್ವಾಮಿ ಆಲಯವಿದೆ. ಅಲ್ಲಿಗೂ ಭೇಟಿ ನೀಡಿ. ಇನ್ನು ಕಲ್ಲಿನ ಮಂಟಪವು ಪ್ರಖ್ಯಾತಿ ಹೊಂದಿದೆ. ಬೆಂಗಳೂರಿನಿಂದ ಶಿವನಸಮುದ್ರಕ್ಕೆ ಕೇವಲ 139 ಕಿ.ಮೀ ದೂರದಲ್ಲಿದೆ.