ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಉನ್ ಅವರ ಮಗಳಿಗೆ ಒಂದು ಮುದ್ದಾಗಿ “ಜು-ಎ” ಎಂದು ಹೆಸರಿಟ್ಟಿದ್ದಾರೆ. ಆ ಹೆಸರು ಯಾವುದೇ ಕಾರಣಕ್ಕೂ ದೇಶದಲ್ಲಿ ವಾಸಿಸುವ ಸಾರ್ವಜನಿಕರು ಇಟ್ಟು ಕೊಳ್ಳುವಂತಿಲ್ಲ. ಹಾಗೇನಾದರೂ ಆ ಹೆಸರು ಇಟ್ಟುಕೊಂಡಿದ್ದರೆ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕು ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾರೆ. ಒಂದು ವೇಳೆ ನಿಯಮ ಮೀರಿದರೆ ಜೈಲು ಪಾಲಾಗುವ ಸ್ಥಿತಿ ಬರಬಹುದು. ಈ ಹಿಂದೆ ಯಾರಾದ್ರೂ ಈ ಹೆಸರನ್ನು ಇಟ್ಟುಕೊಂಡಿದ್ರೆ ಬದಲಾಯಿಸಿಕೊಳ್ಳಲೇಬೇಕಂತೆ.
ಪುರುಷರು ಹಾಗು ಮಹಿಳೆಯರಿಗೆ ಕೂದಲು ಕತ್ತರಿಸುವುದರ ಬಗ್ಗೆ ಉತ್ತರ ಕೊರಿಯಾ 2013 ರಲ್ಲಿ ನಿಯಮಗಳನ್ನು ತಂದಿದೆ. ಅದರ ಪ್ರಕಾರ, ಪುರುಷರು ಮತ್ತು ಮಹಿಳೆಯರಿಗೆ ಹೇರ್ ಕಟ್ ಪಟ್ಟಿಯನ್ನು ಒಟ್ಟುಗೂಡಿಸಿದ್ದಾರೆ. ಮಹಿಳೆಯರು 18 ವಿಧಗಳಲ್ಲಿ ಮತ್ತು ಪುರುಷರು 10 ರೀತಿಯಲ್ಲಿ ತಮ್ಮ ಕೂದಲನ್ನು ಕತ್ತರಿಸಬಹುದು. ಒಂದು ವೇಳೆ ವಿಭಿನ್ನವಾದ ಹೇರ್ ಕಟ್‌ಗಳನ್ನು ಇಲ್ಲಿ ಮಾಡಿಕೊಂಡರೆ ಶಿಕ್ಷೆಯಂತು ಪಕ್ಕಾ ಬಿಡಿ.