Marriage: ಗಂಡನನ್ನಷ್ಟೇ ಅಲ್ಲ ಅವನ ಸಹೋದರರನ್ನೂ ಮದ್ವೆಯಾಗ್ಬೇಕು ವಧು! ಇಲ್ಲಿ ಮಹಿಳೆಗೆ ದ್ರೌಪದಿಯಂತೆ ಬಹು ಪತಿಯರು!

ಆಧುನಿಕ ಕಾಲದಲ್ಲಿ ಬಹುಪತ್ನಿತ್ವ ಅಥವಾ ಬಹುಪತಿತ್ವ ಕಾನೂನು ಬಾಹಿರವೆಂದು ಪರಿಗಣಿಸಲಾಗಿದ್ದರೂ, ಕೆಲವು ದೇಶಗಳಲ್ಲಿ ಇದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಇನ್ನು ಬಹುಪತಿತ್ವವು ಮಹಿಳೆಯರ ಗರಿಷ್ಠ ಶೋಷಣೆ ಮತ್ತು ಗಂಡು ಮಕ್ಕಳಲ್ಲಿ ಹೆಚ್ಚು ಸಂಘರ್ಷದಂತಹ ಕೆಲವು ನಕಾರಾತ್ಮಕ ಪರಿಣಾಮಗಳನ್ನು ಸಹ ಉಂಟುಮಾಡುವ ಸಾಧ್ಯತೆ ಇರುತ್ತದೆ.

First published:

  • 18

    Marriage: ಗಂಡನನ್ನಷ್ಟೇ ಅಲ್ಲ ಅವನ ಸಹೋದರರನ್ನೂ ಮದ್ವೆಯಾಗ್ಬೇಕು ವಧು! ಇಲ್ಲಿ ಮಹಿಳೆಗೆ ದ್ರೌಪದಿಯಂತೆ ಬಹು ಪತಿಯರು!

    ಪ್ರಪಂಚದಾದ್ಯಂತ ಅನೇಕ ಜಾತಿ ಮತ್ತು ಧರ್ಮಗಳ ಜನರು ವಾಸಿಸುತ್ತಿದ್ದಾರೆ. ಹಾಗಾಗಿ ಪ್ರತಿಯೊಂದು ಧರ್ಮ, ಜಾತಿ ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ನಮ್ಮ ಅರಿವಿಗೆ ಬಾರದ ಕಾರಣ, ಆ ಸಂಸ್ಕೃತಿ ನಮಗೆ ವಿಚಿತ್ರ, ವಿಲಕ್ಷಣ ಎನಿಸಬಹುದು.

    MORE
    GALLERIES

  • 28

    Marriage: ಗಂಡನನ್ನಷ್ಟೇ ಅಲ್ಲ ಅವನ ಸಹೋದರರನ್ನೂ ಮದ್ವೆಯಾಗ್ಬೇಕು ವಧು! ಇಲ್ಲಿ ಮಹಿಳೆಗೆ ದ್ರೌಪದಿಯಂತೆ ಬಹು ಪತಿಯರು!

    ಕೆಲವೊಮ್ಮೆ ನಾವು ಸಂಪ್ರದಾಯ ಅಥವಾ ಪದ್ಧತಿಯ ಬಗ್ಗೆ ತಿಳಿದಾಗ ಅನೇಕ ಜನರು ನಂಬುವುದೂ ಇಲ್ಲ. ಮಹಿಳೆಯರಿಗೆ ಸಂಬಂಧಿಸಿದಂತೆ ಇದೇ ರೀತಿಯ ವಿಚಿತ್ರ ಸಂಪ್ರದಾಯವೊಂದು ಸದ್ದು ಮಾಡುತ್ತಿದೆ. ಅದನ್ನು ಕೇಳಿದರೆ ನೀವು ಖಂಡಿತವಾಗಿ ಆಶ್ಚರ್ಯಪಡುತ್ತೀರಿ. ಈ ಕಾರಣಕ್ಕಾಗಿಯೇ ಈ ಪದ್ಧತಿ ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ.

    MORE
    GALLERIES

  • 38

    Marriage: ಗಂಡನನ್ನಷ್ಟೇ ಅಲ್ಲ ಅವನ ಸಹೋದರರನ್ನೂ ಮದ್ವೆಯಾಗ್ಬೇಕು ವಧು! ಇಲ್ಲಿ ಮಹಿಳೆಗೆ ದ್ರೌಪದಿಯಂತೆ ಬಹು ಪತಿಯರು!

    ಆಧುನಿಕ ಕಾಲದಲ್ಲಿ ಬಹುಪತ್ನಿತ್ವ ಅಥವಾ ಬಹುಪತಿತ್ವ ಕಾನೂನು ಬಾಹಿರವೆಂದು ಪರಿಗಣಿಸಲಾಗಿದ್ದರೂ, ಕೆಲವು ದೇಶಗಳಲ್ಲಿ ಇದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಇನ್ನು ಬಹುಪತಿತ್ವವು ಮಹಿಳೆಯರ ಗರಿಷ್ಠ ಶೋಷಣೆ ಮತ್ತು ಗಂಡು ಮಕ್ಕಳಲ್ಲಿ ಹೆಚ್ಚು ಸಂಘರ್ಷದಂತಹ ಕೆಲವು ನಕಾರಾತ್ಮಕ ಪರಿಣಾಮಗಳನ್ನು ಸಹ ಉಂಟುಮಾಡುವ ಸಾಧ್ಯತೆ ಇರುತ್ತದೆ.

    MORE
    GALLERIES

  • 48

    Marriage: ಗಂಡನನ್ನಷ್ಟೇ ಅಲ್ಲ ಅವನ ಸಹೋದರರನ್ನೂ ಮದ್ವೆಯಾಗ್ಬೇಕು ವಧು! ಇಲ್ಲಿ ಮಹಿಳೆಗೆ ದ್ರೌಪದಿಯಂತೆ ಬಹು ಪತಿಯರು!

    ಆದಾಗ್ಯೂ, ಒಂದು ಪ್ರದೇಶದಲ್ಲಿ ಬಹುಪತಿತ್ವ ಇನ್ನೂ ಅಸ್ತಿತ್ವದಲ್ಲಿದೆ. ಇಲ್ಲಿ ಮಹಿಳೆ ಒಬ್ಬರಿಗಿಂತ ಹೆಚ್ಚು ಗಂಡಸರನ್ನು ಮದುವೆಯಾಗುತ್ತಾರೆ. ಈ ಸಂಪ್ರದಾಯ ಭಾರತದಲ್ಲಿಯೂ ಇದೆ, ಹಿಮಾಚಲ ಮತ್ತು ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಬಹುಪತಿತ್ವ ಆಚರಣೆಯಲ್ಲಿದೆ.

    MORE
    GALLERIES

  • 58

    Marriage: ಗಂಡನನ್ನಷ್ಟೇ ಅಲ್ಲ ಅವನ ಸಹೋದರರನ್ನೂ ಮದ್ವೆಯಾಗ್ಬೇಕು ವಧು! ಇಲ್ಲಿ ಮಹಿಳೆಗೆ ದ್ರೌಪದಿಯಂತೆ ಬಹು ಪತಿಯರು!

    ಹಿಮಾಚಲದ ಕಿನ್ನೌರ್ ಜಿಲ್ಲೆಯ ಕೆಲವು ಕಡೆ ಬಹುಪತಿತ್ವ ಹೆಚ್ಚು ಪ್ರಚಲಿತವಾಗಿತ್ತು. ಕಳೆದ ಹತ್ತು ವರ್ಷಗಳಿಂದ ಬಹುಪತಿತ್ವದ ಸುದ್ದಿಗಳು ಕಡಿಮೆಯಾಗುತ್ತಿವೆ. ಆದರೆ ಟಿಬೆಟ್​ನಲ್ಲಿ ಈ ಪದ್ಧತಿ ಇನ್ನೂ ಕೇಳಿಬರುತ್ತಿದೆ. ಈ ರೀತಿ ಮದುವೆಯಾದರೆ ಅಣ್ಣ ಮೊದಲು ತನ್ನ ಹೆಂಡತಿಯೊಂದಿಗೆ ಸಮಯ ಕಳೆಯುತ್ತಾನೆ. ಅದರ ನಂತರ ಎಲ್ಲಾ ಸಹೋದರರು ತಮ್ಮ ವಯಸ್ಸಿಗೆ ಅನುಗುಣವಾಗಿ ಮಹಿಳೆಯೊಂದಿಗೆ ಸಮಯ ಕಳೆಯುತ್ತಾರೆ.

    MORE
    GALLERIES

  • 68

    Marriage: ಗಂಡನನ್ನಷ್ಟೇ ಅಲ್ಲ ಅವನ ಸಹೋದರರನ್ನೂ ಮದ್ವೆಯಾಗ್ಬೇಕು ವಧು! ಇಲ್ಲಿ ಮಹಿಳೆಗೆ ದ್ರೌಪದಿಯಂತೆ ಬಹು ಪತಿಯರು!

    ಹಿಮಾಚಲದ ಕಿನ್ನೌರ್ ಜಿಲ್ಲೆಯ ಜನರ ಪ್ರಕಾರ ಈ ಪದ್ದತಿ ಮಹಾಭಾರತದ ವನವಾಸದ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ ಎನ್ನುತ್ತಾರೆ. ಏಕೆಂದರೆ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಇಲ್ಲಿಯೇ ಕಾಲ ಕಳೆದಿದ್ದರು. ಈ ಕಾರಣದಿಂದಾಗಿ ಇಲ್ಲಿನ ಜನರು ಅವರ ಪದ್ಧತಿಗಳನ್ನು ಅನುಸರಿಸುತ್ತಾರೆ ಎನ್ನಲಾಗುತ್ತಿದೆ.

    MORE
    GALLERIES

  • 78

    Marriage: ಗಂಡನನ್ನಷ್ಟೇ ಅಲ್ಲ ಅವನ ಸಹೋದರರನ್ನೂ ಮದ್ವೆಯಾಗ್ಬೇಕು ವಧು! ಇಲ್ಲಿ ಮಹಿಳೆಗೆ ದ್ರೌಪದಿಯಂತೆ ಬಹು ಪತಿಯರು!

    ಈ ರೀತಿ ಸಹೋದರರೆಲ್ಲಾ ಒಬ್ಬ ಮಹಿಳೆಯರನ್ನು ವಿವಾಹವಾದಾಗ, ಒಬ್ಬ ಸಹೋದರ ವಧುವಿನೊಂದಿಗೆ ಕೋಣೆಯಲ್ಲಿದ್ದರೆ, ಅವನು ತನ್ನ ಟೋಪಿಯನ್ನು ಆ ಕೋಣೆಯ ಬಾಗಿಲಲ್ಲಿ ಇಡುತ್ತಾನೆ. ಉಳಿದ ಸಹೋದರರು ಈ ಸಂಪ್ರದಾಯವನ್ನು ಗೌರವಿಸುತ್ತಾರೆ. ಟೋಪಿಯನ್ನು ಬಾಗಿಲಲ್ಲಿ ಇರಿಸಿದಾಗ ಬೇರೆ ಯಾವುದೇ ಸಹೋದರ ಕೋಣೆಗೆ ಪ್ರವೇಶಿಸುವುದಿಲ್ಲ ಎನ್ನಲಾಗಿದೆ.

    MORE
    GALLERIES

  • 88

    Marriage: ಗಂಡನನ್ನಷ್ಟೇ ಅಲ್ಲ ಅವನ ಸಹೋದರರನ್ನೂ ಮದ್ವೆಯಾಗ್ಬೇಕು ವಧು! ಇಲ್ಲಿ ಮಹಿಳೆಗೆ ದ್ರೌಪದಿಯಂತೆ ಬಹು ಪತಿಯರು!

    ಇಲ್ಲಿ ಎಲ್ಲಾ ಮಕ್ಕಳು ತಮ್ಮ ಹುಟ್ಟಿಗೆ ಕಾರಣರಾದ ತಂದೆಯನ್ನು ತಂದೆ ಎಂದು ಮತ್ತು ಅವರ ಇತರ ಸಹೋದರರನ್ನು ಚಿಕ್ಕಪ್ಪ, ದೊಡ್ಡಪ್ಪ ಎಂದು ಕರೆಯುತ್ತಾರೆ. ಇದು ಕುಟುಂಬದ ಆಸ್ತಿ ವಿಭಜನೆಗೆ ಕಾರಣವಾಗುವುದಿಲ್ಲ ಎಂಬುದು ಇಲ್ಲಿನ ಜನರ ನಂಬಿಕೆ. ಇನ್ನೂ ಇಂತಹ ಕುಟುಂಬದಲ್ಲಿ ಮಹಿಳೆಯೇ ಕುಟುಂಬದ ಮುಖ್ಯಸ್ಥೆಯಾಗಿರುತ್ತಾರೆ.

    MORE
    GALLERIES