ನಿಮಗೆ ವಿಶ್ವ ಪರ್ಯಟನೆ ಮಾಡುವ ಹವ್ಯಾಸವಿದ್ದರೆ ಅಥವಾ ವಿದೇಶಕ್ಕೆ ಪ್ರವಾಸಕ್ಕೆ ಹೋಗಬೇಕೆಂದು ಬಯಸಿದರೆ ವಿಯೆಟ್ನಾಂ ದೇಶಕ್ಕೆ ಭೇಟಿ ಕೊಡುವುದು ಉತ್ತಮ. ನೈಸರ್ಗಿಕ ಸೌಂದರ್ಯದ ಪ್ರವಾಸಿ ತಾಣಗಳನ್ನು ಹೊಂದಿರುವ ವಿಯೆಟ್ನಾಂ ಪ್ರವಾಸಿಗರ ನೆಚ್ಚಿನ ತಾಣ ಕೂಡ ಹೌದು. ಇವುಗಳ ನಡುವೆ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿರುವುದು ಆ ದೇಶದಲ್ಲಿರುವ ವಿಶೇಷ ವಿನ್ಯಾಸದ ಸೇತುವೆಯಾಗಿದೆ.
ಸಮುದ್ರ ಮಟ್ಟದಿಂದ ಸುಮಾರು 1400 ಮೀಟರ್ ಎತ್ತರದಲ್ಲಿರುವ ಈ ಸೇತುವೆಯ ಉದ್ದ 150 ಮೀಟರ್. ಪರ್ವತ ಮತ್ತು ಕಾಡುಗಳನ್ನು ಸಂಪರ್ಕಿಸುವ ಈ ಸೇತುವೆಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿರುವ ಈ ಸೇತುವೆಯ ವೀಕ್ಷಣೆಗೆಂದೇ ಪ್ರವಾಸಿಗಳು ಆಗಮಿಸುತ್ತಿದ್ದಾರೆ. ಇದು ಸದ್ಯ ವಿಯೆಟ್ನಾಂನ ಕುತೂಹಲಕಾರಿ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ದೇಶದ ಪ್ರವಾಸಿ ತಾಣ ಎಂಬ ಖ್ಯಾತಿ ಪಡೆದಿದೆ.