Breakfast ಲುಕ್ಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ ಐರಾವತ ಬೆಡಗಿ Urvashi Rautela
ಊರ್ವಶಿ ರೌಟೆಲ (Urvashi Rautela) ಸಿನಿಮಾಗಿಂತ ಹೆಚ್ಚಾಗಿ ತಮ್ಮ ಡ್ಯಾನ್ಸಿಂಗ್ ವಿಡಿಯೋ, ಫ್ಯಾಷನ್, ದುಬಾರಿ ವಿನ್ಯಾಸಿತ ಡ್ರೆಸ್, ಹಾಗೂ ಕನ್ಸರ್ಟ್ಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಈಗಲೂ ಸಹ ಊರ್ವಶಿ ಅವರು ತಮ್ಮ ಬ್ರೇಕ್ಫಾಸ್ಟ್ ಲುಕ್ನಿಂದಾಗಿ ಚರ್ಚೆಯಲ್ಲಿದ್ದಾರೆ. ಹೌದು, ಗಾಯಕನ ಜತೆ ಬೆಳಗಿನ ತಿಂಡಿಗೆ ಹೋಗಲು ತಮ್ಮ ಲುಕ್ಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ್ದಾರೆ ಈ ನಟಿ. (ಚಿತ್ರಗಳು ಕೃಪೆ: ಊರ್ವಶಿ ರೌಟೆಲ ಇನ್ಸ್ಟಾಗ್ರಾಂ ಖಾತೆ)
ಊರ್ವಶಿ ರೌಟೆಲ ಅವರು ಸದಾ ಹಾಟ್ ಹಾಗೂ ಬೋಲ್ಡ್ ಫೋಟೋಶೂಟ್ಗಳಿಗೆ ಖ್ಯಾತರಾದವರು. ಆಗಾಗ ಈಗೊಂದು ಆಗೊಂದು ಸಿನಿಮಾಗಳಲ್ಲಿ ನಟಿಸುತ್ತಾ, ಅವುಗಳ ಜತೆಗೆ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಾ ಬ್ಯುಸಿಯಾಗಿದ್ದಾರೆ ನಟಿ ಊರ್ವಶಿ ರೌಟೆಲ.
2/ 7
ಊರ್ವಶಿ ರೌಟೆಲ ಅವರು ಈಜಿಪ್ಟ್ನ ಗಾಯಕ Mohamed Ramadan ಜೊತೆ ಅಂತರಾಷ್ಟ್ರೀಯ ಮಟ್ಟದ ಕನ್ಸರ್ಟ್ನಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕಾಗಿ ಜೋರಾಗಿ ತಯಾರಿ ಸಹ ನಡೆದಿದೆ. ಈ ವೇಳೆ ಅವರ ಜೊತೆ ಊರ್ವಶಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
3/ 7
ನಟಿ ಊರ್ವಶಿ ಅವರು ಗಾಯಕ Mohamed Ramadan ಜತೆ ಬ್ರೇಕ್ಫಾಸ್ಟ್ಗೆಂದು ಹೊರಗೆ ಸ್ಟಾರ್ ಹೋಟೆಲ್ಗೆ ಹೋಗಿದ್ದಾರೆ. ಅದಕ್ಕಾಗಿ ಈ ನಟಿ ಖರ್ಷು ಮಾಡಿದ ಹಣ ಎಷ್ಟೆಂದು ಹೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ.
4/ 7
ಊರ್ವಶಿ ಈ ಗಾಯಕನ ಜೊತೆ ಬೆಳಗಿನ ತಿಂಡಿಗಾಗಿ ಹೊರಗೆ ಹೋಗಲು ಬರೋಬ್ಬರಿ 2 ಲಕ್ಷ ಖರ್ಚು ಮಾಡಿದ್ದಾರಂತೆ. ಹೌದು, ಅವರು ತೊಟ್ಟಿರುವ ಡ್ರೆಸ್ ಹಾಗೂ ಶೂಗಾಗಿ ಅವರು ಲಕ್ಷ ಲಕ್ಷ ವೆಚ್ಚ ಮಾಡಿದ್ದಾರಂತೆ.
5/ 7
ಸ್ಟಾರ್ ಹೋಟೆಲ್ನಲ್ಲಿ ಬ್ರೇಕ್ಫಾಸ್ಟ್ಗೆಂದು ಹೋಗಿದ್ದ ಊರ್ವಶಿ ತೊಟ್ಟಿದ್ದ ವಿನ್ಯಾಸಿತ ಡ್ರೆಸ್ನ ಬೆಲೆ 50 ಸಾವಿರವಂತೆ. ಅದರ ಜೊತೆಗೆ ಅವರು ತೊಟ್ಟಿದ್ದ ಶೂ 1.34 ಲಕ್ಷವಂತೆ. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
6/ 7
ಊರ್ವಶಿ ರೌಟೆಲ ಅವರು ಹಿಂದಿ ಸಿನಿಮಾಗಳ ಜತೆಗೆ ಕನ್ನಡದಲ್ಲಿ ದರ್ಶನ್ ಜೊತೆ ಐರಾವತ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಟಾಲಿವುಡ್ ಸಿನಿಮಾದಲ್ಲೂ ನಟಿಸಿದ್ದಾರೆ.
7/ 7
ಸಿನಿಮಾಗಳ ಜೊತೆಗೆ ಊರ್ವಶಿ ರೌಟೆಲ ಅವರು ಮ್ಯೂಸಿಕ್ ಆಲ್ಬಂಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಊರ್ವಶಿ ರೌಟೆಲ ಅವರ ಡ್ಯಾನ್ಸಿಂಗ್ ವಿಡಿಯೋಗಳಿಗೆ ಇನ್ಸ್ಟಾಗ್ರಾಂನಲ್ಲಿ ಕೋಟ್ಯಂತರ ಮಂದಿ ಅಭಿಮಾನಗಳಿದ್ದಾರೆ.