ಈ ಜಗತ್ತಿನ ಶ್ರೇಷ್ಠ ವಿಜ್ಞಾನಿ ಯಾರು ಎಂಬ ಪ್ರಶ್ನೆ ಕೇಳಿದರೆ ಮುಖ್ಯವಾಗಿ ಇಬ್ಬರ ಹೆಸರು ನೆನಪಿಗೆ ಬರುತ್ತೆ. ಒಬ್ಬರು ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಇನ್ನೊಬ್ಬರು ಸರ್ ಐಸಾಕ್ ನ್ಯೂಟನ್. ಐನ್ಸ್ಟೈನ್ ಸಂಪೂರ್ಣವಾಗಿ ವಿಜ್ಞಾನಕ್ಕೆ ಸೀಮಿತವಾದಾಗ, ನ್ಯೂಟನ್ ಧಾರ್ಮಿಕ ವಿಷಯಗಳ ಬಗ್ಗೆಯೂ ಗಮನ ಹರಿಸಿದರು. ಅಲ್ಲಿ ನ್ಯೂಟನ್ನನ ಹಾದಿಯೇ ಬೇರೆಯಾಗಿತ್ತು. ಅದಕ್ಕಾಗಿಯೇ ಕೆಲವರು ಐನ್‌ಸ್ಟೈನ್ ಅನ್ನು ಅತ್ಯುತ್ತಮ ಎಂದು ಕರೆಯುತ್ತಾರೆ. ಆದರೆ ನ್ಯೂಟನ್ನ ಸಿದ್ಧಾಂತಗಳು, ಅವರ ವಿಚಾರಗಳು ಎಂದೆಂದಿಗೂ ಅನನ್ಯ. ಆ ಸೇಬಿನ ಕಥೆಯನ್ನು ನಾವು ಎಂದಿಗೂ ಮರೆಯುವುದಿಲ್ಲ.
ನ್ಯೂಟನ್ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಾ ಇದ್ದರು. ಅವರ ಮನೆಯಲ್ಲಿಯೇ ತಮ್ಮದೇ ಆದ ಗ್ರಂಥಾಲಯವನ್ನು ಹೊಂದಿದ್ದರು. ಇದರಲ್ಲಿ 1500ಕ್ಕೂ ಹೆಚ್ಚು ಪುಸ್ತಕಗಳಿವೆ. ಚಿತ್ರವೆಂದರೆ ಅವುಗಳಲ್ಲಿ ಹೆಚ್ಚಿನ ಪುಸ್ತಕಗಳು ಮೂಢನಂಬಿಕೆಗಳಿಗೆ ಸಂಬಂಧಿಸಿವೆ. ಇದರರ್ಥ ರಹಸ್ಯಗಳು, ಅಸ್ಪಷ್ಟ ವಿಷಯಗಳು, ನಿಗೂಢ ಬೋಧನೆಗಳಿಗೆ ಸಂಬಂಧ ಪಟ್ಟ ಪುಸ್ತಕಗಳಿದ್ದವು. ನ್ಯೂಟನ್ಗೆ ಕೆಲವೇ ಕೆಲವು ಗೆಳೆಯರಿದ್ದರು. ಹೆಚ್ಚಾಗಿ ಯಾರೊಂದಿಗೂ ಬೆರೆಯಲು ಆತ ಇಚ್ಛಿಸುತ್ತಾ ಇರಲಿಲ್ಲ. ಒಂಟಿ ಜೀವನವನ್ನು ಹೆಚ್ಚಾಗಿ ಇಷ್ಟ ಪಡುತ್ತಾ ಇದ್ದರು.