ಉಗಾಂಡಾದಲ್ಲಿ ಬಹು ಪತ್ನಿತ್ವ ಜಾರಿ ಇರುವ ಕಾರಣ ಇವರು 12 ಮದುವೆ ಆಗಿದ್ದಾರೆ. ಈಗ ಮನೆಯಲ್ಲಿ ಮಕ್ಕಳು, ಹೆಂಡತಿ, ಮೊಮ್ಮಕ್ಕಳನ್ನು ನೋಡಿಕೊಳ್ಳಲು ಹಣದ ಸಮಸ್ಯೆ ಎದುರಾಗಿದೆ.ಮೂಸಾ ಅವರು ಆರ್ಥಿಕ ಸಮಸ್ಯೆಗೆ ಪರಿಹಾರ ಹುಡುಕಿದ್ದಾರೆ. ಇನ್ಮುಂದೆ ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ. ತಮ್ಮ ಪತ್ನಿಯರಿಗೆ ಗರ್ಭ ನಿರೋಧಕ ಮಾತ್ರೆಗಳನ್ನು ಕೊಡಿಸಿದ್ದಾರಂತೆ.