Japan Mermaid: 300 ವರ್ಷಗಳ ಹಿಂದಿನ ಮತ್ಸ್ಯಕನ್ಯೆ ಜಪಾನ್​ನಲ್ಲಿ ಪತ್ತೆ, ಇದರ ಹಿಂದಿದೆ ಬಿಗ್​ ಸಸ್ಪೆನ್ಸ್!

ಇದು ಸಾಮಾನ್ಯ ಮತ್ಸ್ಯಕನ್ಯೆ ಅಲ್ಲ. ಇದು ಸಾವನ್ನು ಕೂಡ ಜಯಿಸುತ್ತದೆ ಎಂದು ನಂಬಲಾಗಿದೆ. ಅದನ್ನು ಪೂಜಿಸುತ್ತಿದ್ದರು. ಇದು 300 ವರ್ಷಗಳಿಂದ ಸಸ್ಪೆನ್ಸ್‌ನಲ್ಲಿದೆ. ಆ ಸಾಗರದ ಕನ್ಯೆಯ ಮರ್ಮವೇನು?

First published:

  • 17

    Japan Mermaid: 300 ವರ್ಷಗಳ ಹಿಂದಿನ ಮತ್ಸ್ಯಕನ್ಯೆ ಜಪಾನ್​ನಲ್ಲಿ ಪತ್ತೆ, ಇದರ ಹಿಂದಿದೆ ಬಿಗ್​ ಸಸ್ಪೆನ್ಸ್!

    ಪ್ರಪಂಚದಲ್ಲಿ ಒಂದಲ್ಲಾ ಒಂದು ವಿಸ್ಮಯ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಇವುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್​ ಆಗ್ತಾ ಇರುತ್ತೆ. ಇದಕ್ಕೆ ಉದಾಹರಣೆ ಎಂಬಂತೆ  ಇದೀಗ ಒಂದು ವಿಷ್ಯ ವೈರಲ್​ ಆಗ್ತಾ ಇದೆ.

    MORE
    GALLERIES

  • 27

    Japan Mermaid: 300 ವರ್ಷಗಳ ಹಿಂದಿನ ಮತ್ಸ್ಯಕನ್ಯೆ ಜಪಾನ್​ನಲ್ಲಿ ಪತ್ತೆ, ಇದರ ಹಿಂದಿದೆ ಬಿಗ್​ ಸಸ್ಪೆನ್ಸ್!

    ಜಪಾನ್‌ನಲ್ಲಿ ಮಮ್ಮಿಯಾಗಿ ಪರಿವರ್ತನೆಗೊಂಡ ಮತ್ಸ್ಯಕನ್ಯೆ ಇದೆ. ಅದು ಎಲ್ಲಿಂದ ಬಂತು ಅಥವಾ ಅದು ಹೇಗೆ ಮಮ್ಮಿ ಆಯಿತು ಎಂಬುದು ಯಾರಿಗೂ ತಿಳಿದಿಲ್ಲ. ಸಮುದ್ರಗಳಲ್ಲಿ ಮತ್ಸ್ಯಕನ್ಯೆಯರು ಇದ್ದಾರೆ ಎಂಬುದಕ್ಕೆ ಆ ಮಮ್ಮಿ ಇಷ್ಟು ವರ್ಷ ಸಾಕ್ಷಿ ಆಯ್ತು. 300 ವರ್ಷಗಳಿಂದ ಇದು ಎಲ್ಲರನ್ನೂ ಆಕರ್ಷಿಸುತ್ತಿದೆ. ಇದು 1736, 1741 ರಲ್ಲಿ ಜಪಾನ್‌ನ ಶಿಕೋಕು ದ್ವೀಪದಲ್ಲಿ ಹಿಂದೂ ಮಹಾಸಾಗರದಲ್ಲಿ ಕಂಡುಬಂದಿದೆ ಎಂದು ಹಲವರು ಹೇಳುತ್ತಾರೆ. ಅದಕ್ಕೆ ಸ್ಪಷ್ಟ ಪುರಾವೆಗಳಿಲ್ಲ. (ಚಿತ್ರ ಕ್ರೆಡಿಟ್ - ಟ್ವಿಟರ್ - @MetroUK)

    MORE
    GALLERIES

  • 37

    Japan Mermaid: 300 ವರ್ಷಗಳ ಹಿಂದಿನ ಮತ್ಸ್ಯಕನ್ಯೆ ಜಪಾನ್​ನಲ್ಲಿ ಪತ್ತೆ, ಇದರ ಹಿಂದಿದೆ ಬಿಗ್​ ಸಸ್ಪೆನ್ಸ್!

    ಈ ಮತ್ಸ್ಯಕನ್ಯೆಯ ಒಟ್ಟು ಎತ್ತರವು 30 ಸೆಂ.ಮೀ. ಎರಡು ಕೈಗಳಿವೆ. ಅಳುವ, ಹೆದರಿದ ಮುಖದಿಂದ ಕೂಡಿದೆ. ಈ ಮತ್ಸ್ಯಕನ್ಯೆ ಇನ್ನೂ ತನ್ನ ತಲೆಯ ಮೇಲೆ ಕೂದಲನ್ನು ಹೊಂದಿದೆ. ಚೂಪಾದ ಹಲ್ಲುಗಳನ್ನು ಸಹ ಹೊಂದಿದೆ.  ಮನುಷ್ಯನ ದೇಹದಂತಿದ್ದರೆ ಬಾಲ ಮೀನಿನ ಬಾಲದಂತೆ. (ಚಿತ್ರ ಕ್ರೆಡಿಟ್ - ಟ್ವಿಟರ್ - @MetroUK)

    MORE
    GALLERIES

  • 47

    Japan Mermaid: 300 ವರ್ಷಗಳ ಹಿಂದಿನ ಮತ್ಸ್ಯಕನ್ಯೆ ಜಪಾನ್​ನಲ್ಲಿ ಪತ್ತೆ, ಇದರ ಹಿಂದಿದೆ ಬಿಗ್​ ಸಸ್ಪೆನ್ಸ್!

    ಈ ಮಮ್ಮಿಯನ್ನು ಜಪಾನ್‌ನ ಅಸಕುಚಿ ನಗರದ ಎಂಜುಯಿನ್ ದೇವಾಲಯದಲ್ಲಿ ಇರಿಸಲಾಗಿದೆ. ಇದನ್ನು 40 ವರ್ಷಗಳ ಹಿಂದೆ ಸಾರ್ವಜನಿಕರಿಗೆ ತೋರಿಸಲಾಗಿದೆ. ಅದರ ನಂತರ ಅವರು ಪ್ರದರ್ಶನವನ್ನು ನಿಲ್ಲಿಸಿದರು. "ನಾವು ಅದನ್ನು ಪೂಜಿಸುತ್ತಿದ್ದೆವು. ಇದು ಕರೋನವೈರಸ್ ಅನ್ನು ಓಡಿಸುತ್ತದೆ ಎಂದು ನಾವು ಭಾವಿಸಿದ್ದೇವೆ" ಎಂದು ದೇವಾಲಯದ ಪ್ರಧಾನ ಅರ್ಚಕ ಕೊಗೆನ್ ಕುಯಿಡಾ ಹೇಳಿದರು. (ಚಿತ್ರ ಕ್ರೆಡಿಟ್ - ಟ್ವಿಟರ್ - @MetroUK)

    MORE
    GALLERIES

  • 57

    Japan Mermaid: 300 ವರ್ಷಗಳ ಹಿಂದಿನ ಮತ್ಸ್ಯಕನ್ಯೆ ಜಪಾನ್​ನಲ್ಲಿ ಪತ್ತೆ, ಇದರ ಹಿಂದಿದೆ ಬಿಗ್​ ಸಸ್ಪೆನ್ಸ್!

    ಒಂದು ವರ್ಷದಿಂದ, ಸಂಶೋಧಕರು ಈ ಮಮ್ಮಿಯ ಮೇಲೆ ವಿವಿಧ ಪರೀಕ್ಷೆಗಳನ್ನು ಮಾಡಿದ್ದಾರೆ. ಸಿಟಿ ಸ್ಕ್ಯಾನ್ ಮಾಡಲಾಯಿತು. ಅಂತಿಮವಾಗಿ ಅವರು ತೀರ್ಮಾನಿಸಿದ್ದು ಅದು ಸಂಪೂರ್ಣವಾಗಿ ಕೃತಕವಾಗಿದೆ. ಇದನ್ನು 1800ರಲ್ಲಿ ಯಾರೋ ಮಾಡಿರಬಹುದು ಎಂದು ಹೇಳಿದರು. ಅದರ ಹೊಟ್ಟೆಯಲ್ಲಿ ಮೂಳೆಗಳಿರಲಿಲ್ಲ ಪೇಪರ್, ಬಟ್ಟೆ, ಹತ್ತಿಯಿಂದ ಮಾಡಿದ್ದು ಎಂದು ತೀರ್ಮಾನಿಸಲಾಯಿತು. (ಚಿತ್ರ ಕ್ರೆಡಿಟ್ - ಟ್ವಿಟರ್ - @MetroUK)

    MORE
    GALLERIES

  • 67

    Japan Mermaid: 300 ವರ್ಷಗಳ ಹಿಂದಿನ ಮತ್ಸ್ಯಕನ್ಯೆ ಜಪಾನ್​ನಲ್ಲಿ ಪತ್ತೆ, ಇದರ ಹಿಂದಿದೆ ಬಿಗ್​ ಸಸ್ಪೆನ್ಸ್!

    ಅದರ ಸೊಂಟದಲ್ಲಿ ಬಾಲದಂತಹ ಭಾಗವು ಮೀನಿನ ಬಾಲವನ್ನು ತೆಗೆದುಕೊಂಡು ಮಾಡಲ್ಪಟ್ಟಿದೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ ಮತ್ತು ಮುಖದ ದವಡೆ ಮತ್ತು ಹಲ್ಲುಗಳನ್ನು ಮೀನಿನಿಂದ ಸಂಗ್ರಹಿಸಲಾಗಿದೆ .  ಲೆಕ್ಕವಿಲ್ಲದಷ್ಟು ಪ್ರಚಾರಕ್ಕೆ ಕಾರಣವಾಗಿರುವ ಈ ಮತ್ಸ್ಯಕನ್ಯೆ ನಿಜವಾಗಿ ಮತ್ಸ್ಯಕನ್ಯೆಯಲ್ಲ ಎಂಬುದು ಬಹಿರಂಗವಾಗಿದೆ.

    MORE
    GALLERIES

  • 77

    Japan Mermaid: 300 ವರ್ಷಗಳ ಹಿಂದಿನ ಮತ್ಸ್ಯಕನ್ಯೆ ಜಪಾನ್​ನಲ್ಲಿ ಪತ್ತೆ, ಇದರ ಹಿಂದಿದೆ ಬಿಗ್​ ಸಸ್ಪೆನ್ಸ್!

    ಒಟ್ಟಿನಲ್ಲಿ ಜಪಾನ್​ನಲ್ಲಿ ಕಾಣಬಹುದಾದ ಹಲವಾರು ಸ್ಥಳಗಳಿವೆ. ಅದರಲ್ಲಿ ಈ ವಿಶೇಷ ಸಂಗತಿಯು ಕೂಡ ಒಂದು ಅಂತಲೇ ಹೇಳಬಹುದು. ಈ ಮಮ್ಮಿಯನ್ನು ಸದ್ಯಕ್ಕೆ ಯಾರಿಗೂ ನೋಡಲು ಅವಕಾಶಗಳು ಇಲ್ವಂತೆ. ಕಾರಣಗಳು ಹೊರಬಂದಿಲ್ಲ.

    MORE
    GALLERIES