ವಿಶ್ವದ ಅತ್ಯಂತ ಸುಂದರ ವ್ಯಕ್ತಿ ಯಾರು? ಆ ಪಟ್ಟಿಯಲ್ಲಿ ಒಬ್ಬರಾದರು ಭಾರತೀಯರು ಇರಬೇಕೆಂದು ಬಹುತೇಜರು ಆಶಿಸುತ್ತಾರೆ. ಅದರಂತೆ ಬಾಲಿವುಡ್ ನಟ ಹ್ಯಾಂಡ್ಸಮ್ ಸುಂದರ ಹೃತಿಕ್ ರೋಷನ್ ಹೆಸರು ಕೂಡ ಇದ್ದು, ಭಾರತೀಯರು ಹೆಮ್ಮೆಪಡುವ ವಿಚಾರ ಇದಾಗಿದೆ. ಅಂದಹಾಗೆಯೇ ಹೃತಿಕ್ ರೋಷನ್ ವಿಶ್ವದ ಎರಡನೇ ಸುಂದರ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕಳೆದ ತಿಂಗಳು ದಿ ಟೀಲ್ ಮ್ಯಾಂಗೋ ಬಿಡುಗಡೆ ಮಾಡಿದ ಪಟ್ಟಿ ಇದಾಗಿದೆ.