ಕೊರ್ಚೆವೆಲ್ ಅಲ್ಟಿಪೋರ್ಟ್, ಫ್ರಾನ್ಸ್; ಈ ವಿಮಾನದ ನಿಲ್ದಾಣವು 500 ಮೀಟರ್ ಉದ್ದದ ರನ್ವೇಯನ್ನು ಹೊಂದಿದೆ. ಕೊರ್ಚೆವೆಲ್ ಪ್ರದೇಶದ ಸುತ್ತಮುತ್ತಲು ಪರ್ವತಗಳಿಂದ ಆವೃತವಾಗಿದೆ. ಹಾಗಾಗಿ ಪೈಲಟ್ಗಳು ಹೆಚ್ಚಾಗಿ ಮಂಜು, ಹಿಮಾ ಇಂತಹ ಅಪಾಯಕಾರಿ ಹವಾಮಾನವನ್ನು ಎದುರಿಸುತ್ತಿರುತ್ತಾರೆ.
2/ 9
ವೆಲ್ಲಿಂಗ್ಟನ್ ವಿಮಾನ ನಿಲ್ದಾಣ, ನ್ಯೂಜಿಲೆಂಡ್: ಸಣ್ಣ ವಿಮಾನಗಳನ್ನು ಮಾತ್ರ ಇಲ್ಲಿ ಲ್ಯಾಂಡ್ ಮಾಡಲಾಗುತ್ತದೆ. ಈ ಸ್ಥಳವು ಅತಿಯಾದ ಗಾಳಿಯ ಉತ್ತಡದಿಂದ ಕೂಡಿದೆ.
3/ 9
ಕನ್ಸೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಜಪಾನ್: ದ್ವೀಪದಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಈ ನಿಲ್ದಾಣ ಪ್ರದೇಶದಲ್ಲಿ ಆಗಾಗ ಭೂಕಂಪ, ಚಂಡ ಮಾರುತ ಆಗುತ್ತಿರುತ್ತದೆ. ರಾತ್ರಿ ವೇಳೆ ವಿಮಾನ ಟೇಕ್ಅಫ್ ಮತ್ತು ಇಳಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
4/ 9
ಗುಸ್ತಾಫ್ ||| ವಿಮಾನ ನಿಲ್ದಾಣ, ಸೇಂಟ್-ಬಾರ್ತಲೆಮಿ: ಕೆಲವು ಸೀಮಿತ ವ್ಯಕ್ತಿಗಳಿಗೆ ವಿಮಾನ ನಿಲುಗಡೆ ಮಾಡಲು ಈ ನಿಲ್ದಾಣವನ್ನು ನಿರ್ಮಿಸಲಾಗಿದೆ. 20 ಖಾಸಗಿ ವಿಮಾನ ಮಾತ್ರ ಇಲ್ಲಿ ಇಳಿಯಬಹುದು.
5/ 9
ಜ್ಯೂಲಿಯಾನ ಏರ್ಪೋರ್ಟ್, ಸೇಂಟ್ ಮಾರ್ಟನ್; ಈ ಪ್ರದೇಶದಲ್ಲಿ ವಿಮಾನ ಹಾರಟವನ್ನು ಹತ್ತಿರದಿಂದ ವೀಕ್ಷಿಸಬಹುದಾಗಿದೆ. ಹಾಗಾಗಿ ಈ ಏರ್ಪೋರ್ಟ್ ಪ್ರದೇಶವು ಒಂದೆಡೆ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಮತ್ತೊಂದೆಡೆ ವಿಶ್ವದ ಅಪಾಯಕಾರಿ ಏರ್ಪೋರ್ಟ್ಗಳಲ್ಲಿ ಇದು ಕೂಡ ಒಂದು.
6/ 9
ನಸರ್ವಾಕ್ ಏರ್ಪೋರ್ಟ್, ಗ್ರೀನ್ಲ್ಯಾಂಡ್ : ಪೈಲಟ್ಗಳು ಪರ್ವತಗಳನ್ನು ದಾಟಿ ವಿಮಾನವನ್ನು ಲ್ಯಾಂಡ್ ಮಾಡಬೇಕಾಗಿದೆ. ಹಾಗಾಗಿ ಪೈಲಟ್ಗಳಿಗೆ ಈ ಪ್ರದೇಶದಲ್ಲಿ ವಿಮಾನವನ್ನು ಇಳಿಸುವುದು ಸವಾಲಿನ ಕೆಲಸವಾಗಿದೆ.
7/ 9
ಬಾರ್ರಾ, ಸ್ಕಾಟ್ಲ್ಯಾಂಡ್ : ಈ ವಿಮಾನ ನಿಲ್ದಾಣವು ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.
8/ 9
ಟೆನ್ಜಿಂಗ್-ಹಿಲರಿ: ನೇಪಾಳದ ಟೆನ್ಜಿಂಗ್ –ಹಿಲರಿ ಏರ್ಪೋರ್ಟ್ 1,500 ಫೀಟ್ ರನ್ವೇಯನ್ನು ಹೊಂದಿದೆ. ಹಾಗಾಗಿ ಅಪಾಯಕಾರಿ ಏರ್ಪೋರ್ಟ್ಗಳಲ್ಲಿ ಈ ವಿಮಾನ ನಿಲ್ದಾಣ ಕೂಡ ಒಂದು.
9/ 9
ಜುವಾಂಚೊ ಇ ಯ್ರಾಸ್ಕಿನ್ ಏರ್ಪೋರ್ಟ್, ಡಚ್ ಕೆರಿಬಿಯನ್ ಸಬಾ: 400 ಮೀಟರ್ ಉದ್ದದ ರನ್ವೇ ಹೊಂದಿದೆ ಈ ಏರ್ಪೋರ್ಟ್. ಈ ಪ್ರದೇಶದಲ್ಲಿ ಪೈಲಟ್ಗೆ ವಿಮಾನ ಲ್ಯಾಂಡ್ ಮಾಡುವ ಕೆಲಸ ಅತ್ಯಂತ ಸವಾಲಿನದ್ದಾಗಿದೆ.