ಅಲ್ಲಿ ಬಂದಿದ್ದ ಜನರೆಲ್ಲಾ ನೋಡನೋಡುತ್ತಿದ್ದಂತೆ ಸಾವಿರಾರು ಕೋತಿಗಳು ಬಂದು 2 ಟನ್ ಅಂದ್ರೆ ಬರೋಬ್ಬರಿ 2000 ಕೆಜಿ ಹಣ್ಣು-ತರಕಾರಿಗಳನ್ನು ತಿಂದು ತೇಗಿದವು. ಅಂದ್ಹಾಗೆ ಇದು ಥೈಲ್ಯಾಂಡಿನ ಲೋಬ್ಪುರಿಯಲ್ಲಿ ಕೊರೊನಾ ನಂತರ ನಡೆದ 'ಕೋತಿಗಳ ಹಬ್ಬ'ದಲ್ಲಿ ಕಂಡುಬಂದ ದೃಶ್ಯ.
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಕೋತಿಗಳ ಹಬ್ಬಕ್ಕೆ ಬ್ರೇಕ್ ಬಿದ್ದಿತ್ತು. ಈಗ ಎರಡೂವರೆ ವರ್ಷದ ನಂತರ ನಡೆದ ಈ ವಿಶಿಷ್ಟ ಹಬ್ಬವನ್ನು ನೋಡಲು ನಾನಾ ಪ್ರದೇಶದಿಂದ ಜನ ಆಗಮಿಸುತ್ತಾ ಇದ್ದಾರೆ. REUTERS/Jiraporn Kuhakan
2/ 6
ಮಕಾಕ್ ಅಥವಾ ಉದ್ದ ಬಾಲದ ಕೋತಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದವು. ಅಲ್ಲಿ ನೆರೆದಿದ್ದ ಜನರ ಮೈಮೇಲೆಲ್ಲಾ ಏರಿ ಕುಳಿತ ಅವು ನಂತರ ಹಣ್ಣುಗಳ ರಾಶಿಯೆಡೆಗೆ ತೆರಳಿದವು. ಬಾಳೆಹಣ್ಣು ಮತ್ತು ಪೈನಾಪಲ್ಗಳನ್ನು ಬಹಳ ಇಷ್ಟಪಟ್ಟು ತಿಂದವು. REUTERS/Jiraporn Kuhakan
3/ 6
ಈ ಹಬ್ಬದ ಭೂರಿ ಭೋಜನಕ್ಕಾಗಿ 100,000 baht (ಅಂದರೆ ಸುಮಾರು 3,000 ಅಮೇರಿಕನ್ ಡಾಲರ್) ಹಣ ಖರ್ಚು ಮಾಡಲಾಗುತ್ತದೆ. ಇಲ್ಲಿನ ಸ್ಥಳೀಯರು ತಮ್ಮ ಊರು ಲೋಪ್ಬುರಿಗೆ ಪ್ರವಾಸಿಗರು ಬರುವಂತೆ ಮಾಡಿದ್ದಕ್ಕಾಗಿ ಕೋತಿಗಳಿಗೆ ಈ ರೀತಿಯಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. REUTERS/Jiraporn Kuhakan
4/ 6
ಆಯೋಜನಕನ ಮೇಲೆ ಹತ್ತಿ ಕುಳಿತ ಕೋತಿಗಳು. ಈ ವರ್ಷದ ಥೀಂ ವೀಲ್ಚೇರ್ ಕೋತಿಗಳು ಎಂದಿತ್ತು. REUTERS/Jiraporn Kuhakan
5/ 6
ಕೆಲವು ಪ್ರವಾಸಿಗರು ತಮ್ಮ ಕ್ಯಾಮೆರಾ ಜೊತೆ ಕೋತಿಗಳೊಂದಿಗೆ ಆಟವಾಡುತ್ತಿರುವುದು ಕಂಡುಬಂದಿತು. ಇಷ್ಟು ವರ್ಷಗಳ ಆಚರಣೆ ಈಗ ಮತ್ತೆ ಪುನಾರಂಭಗೊಂಡಿರುವುದು ಸ್ಥಳೀಯರಿಗೂ ಸಂತಸ ತಂದಿದೆ. REUTERS/Chaiwat Subprasom - RC1E4B372080
6/ 6
ಥೈಲ್ಯಾಂಡ್ ಸರ್ಕಾರ ಕ್ವಾರಂಟೈನ್ ಇಲ್ಲದ ಪ್ರಯಾಣಕ್ಕೆ ಅನುಮತಿ ನೀಡಿದ ನಂತರ ಪ್ರವಾಸಿಗರು ಇಲ್ಲಿಗೆ ಮರಳುತ್ತಿದ್ದಾರೆ. ನವೆಂಬರ್ ತಿಂಗಳಲ್ಲಿ ಲಸಿಕೆ ಪಡೆದ ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಕೋತಿಗಳ ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದರು. REUTERS/Chaiwat Subprasom - RC1140F6CBF0