ನಮ್ಮ ದೇಶದ ಜನಸಂಖ್ಯೆ 142 ಕೋಟಿ ದಾಟಿದೆ. ಭಾರತ ಇತ್ತೀಚೆಗೆ ಚೀನಾವನ್ನು ಹಿಂದಿಕ್ಕಿ ಜನಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಆದರೆ ಹೆಚ್ಚು ಮಕ್ಕಳನ್ನು ಹೊಂದಿದರೆ ಹಣದುಬ್ಬರದಿಂದ ಸಮಸ್ಯೆಗಳಾಗುತ್ತವೆ. ಇದೇ ಕಾರಣದಿಂದ ಇತ್ತೀಚೆಗೆ ಅನೇಕರು ಒಂದೇ ಮಗುವನ್ನು ಮಾತ್ರ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ರಾಷ್ಟ್ರಗಳಲ್ಲಿ ಸರ್ಕಾರಗಳೇ ಹೆಚ್ಚು ಮಕ್ಕಳನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸುತ್ತಿವೆ. ಅದಕ್ಕಾಗಿ ಹಣ ಸೇರಿದಂತೆ ಸಾಕಷ್ಟು ಸೌಲಭ್ಯವನ್ನು ನೀಡುತ್ತಿದ್ದಾರೆ.
ಜಪಾನ್ನಲ್ಲಿ ವಯೋವೃದ್ಧರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನಸಂಖ್ಯೆ ಹೆಚ್ಚಿಸಲು ಅಲ್ಲಿನ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಜಪಾನ್ ಟೈಮ್ಸ್ ನ ಲೇಖನದ ಪ್ರಕಾರ, ಜಪಾನಿನ ಜನರು ಮದುವೆ ಮತ್ತು ಮಕ್ಕಳ ಬಗ್ಗೆ ಆಸಕ್ತಿ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಜಪಾನ್ ಸರ್ಕಾರ ಮಕ್ಕಳನ್ನು ಪ್ರೋತ್ಸಾಹಿಸಲು ನಗದು ಬಹುಮಾನ ನೀಡುತ್ತಿದೆ. ಮಗು ಜನಿಸಿದಾಗ ಪೋಷಕರಿಗೆ 6 ಲಕ್ಷ ರೂಪಾಯಿ ನೀಡಲಾಗುತ್ತದೆ. (ಸಾಂದರ್ಭಿಕ ಚಿತ್ರ)
ರಷ್ಯಾ ಕೂಡ ಇದೇ ರೀತಿಯ ಯೋಜನೆಯನ್ನು ಹೊಂದಿದೆ. ಇಲ್ಲಿ ಸೆಪ್ಟಂಬರ್ 12 ರಂದು ಮಕ್ಕಳನ್ನು ಮಾಡಿಕೊಳ್ಳುವುದಕ್ಕಾಗಿಯೇ ಸಾರ್ವಜನಿಕ ರಜೆ ನೀಡಲಾಗುತ್ತದೆ. ಆ ದಿನಾಂಕಕ್ಕೆ ಸರಿಯಾಗಿ 9 ತಿಂಗಳ ನಂತರ ಮಗು ಜನಿಸಿದರೆ. ಪೋಷಕರಿಗೆ ಮನೆ, ಕಾರು, ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಅಲ್ಲಿ ಎರಡನೇ ಅಥವಾ ಮೂರನೇ ಮಗುವಿಗೆ ಜನ್ಮ ನೀಡಿದರೆ, ಸುಮಾರು 7 ಲಕ್ಷ ಬಹುಮಾನ ಸಿಗುತ್ತದೆ. (ಸಾಂಕೇತಿಕ ಚಿತ್ರ)
ರೊಮೇನಿಯಾದಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಹೆಚ್ಚು ತೆರಿಗೆ ವಿಧಿಸಲಾಗುತ್ತದೆ. ಮಕ್ಕಳಿರುವವರಿಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಮಕ್ಕಳು ಬೇಡ ಎನ್ನುವವರಿಗೆ ಶೇ.20ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ. ಮತ್ತೊಂದೆಡೆ, ಹಾಂಗ್ ಕಾಂಗ್‌ನಲ್ಲಿ 2013 ರ ನಂತರ ವಿವಾಹವಾದ ದಂಪತಿಗಳು ಮಗುವನ್ನು ಹೊಂದಿದ್ದರೆ ಅವರಿಗೆ ಬಹುಮಾನ ನೀಡಲಾಗುತ್ತಿದೆ. (ಸಾಂಕೇತಿಕ ಚಿತ್ರ)
ಬೆಲಾರಸ್‌ನಲ್ಲಿ, ಮಕ್ಕಳು ಜನಿಸಿದ ನಂತರ ಮೂರು ವರ್ಷಗಳವರೆಗೆ ಸರ್ಕಾರವೇ ಹಣಕಾಸಿನ ನೆರವು ನೀಡುತ್ತದೆ. ಮಗು ಹುಟ್ಟಿದ ತಕ್ಷಣ 1 ಲಕ್ಷ 28 ಸಾವಿರ ನೀಡಲಾಗುತ್ತದೆ. ಆ ನಂತರ ಪ್ರತಿ ತಿಂಗಳು 18 ಸಾವಿರ ರೂಪಾಯಿಯಂತೆ ಮೂರು ವರ್ಷಗಳ ಕಾಲ ಪೋಷಕರ ಖಾತೆಗೆ ಹಣ ಜಮೆ ಆಗಲಿದೆ. ಆ ಹಣದಲ್ಲಿ ಮಕ್ಕಳಿಗೆ ಬೇಕಾದ ಹಾಲು, ಡೈಪರ್, ಬಟ್ಟೆ ಮತ್ತಿತರ ವಸ್ತುಗಳನ್ನು ಖರೀದಿಸಲು ಬಳಸುತ್ತಾರೆ.(ಸಾಂಕೇತಿಕ ಚಿತ್ರ)
ಫಿನ್‌ಲ್ಯಾಂಡ್‌ನಲ್ಲಿ, 2013 ರಿಂದ, ಲೆಸ್ಟಿಜಾರ್ವಿ ಪುರಸಭೆಯಲ್ಲಿ ಬೇಬಿ ಬೋನಸ್ ಅನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಮಗು ಜನಿಸಿದ ತಕ್ಷಣ ಸುಮಾರು 7 ಲಕ್ಷ 86 ಸಾವಿರ ರೂಪಾಯಿ ನೀಡುತ್ತಾರೆ. ಭೂ ವಿಸ್ತೀರ್ಣಕ್ಕೆ ಹೋಲಿಸಿದರೆ ಈ ದೇಶಗಳಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ಜನಸಂಖ್ಯೆ ಹೆಚ್ಚಳಕ್ಕೆ ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. (ಸಾಂಕೇತಿಕ ಚಿತ್ರ)