Valentines Day Gifts: ಪ್ರೇಮಿಗಳ ದಿನಕ್ಕೆ ನಿಮ್ಮ ಸಂಗಾತಿಗೆ ಈ ಉಡುಗೊರೆಯೇ ಬೆಸ್ಟ್
ಪ್ರೇಮಿಗಳ ದಿನಕ್ಕೆ ಇನ್ನೇನು ಒಂದು ದಿನ ಬಾಕಿ ಇದ್ದು, ಸಂಗಾತಿಗೆ ಏನು ಉಡುಗೊರೆ ನೀಡುವುದು ಎಂಬ ಗೊಂದಲಕ್ಕೆ ಒಳಗಾಗುವುದು ಸಹಜ. ಆಕೆ/ಆತನಿಗೆ ಏನು ಇಷ್ಟ ಆಗಬಹುದು ಎಂಬ ಚಿಂತೆ ಕಾಡುತ್ತಿದ್ದಾರೆ. ಇದಕ್ಕೆ ಇಲ್ಲಿದೆ ಪರಿಹಾರ, ಪ್ರೇಮಿಗಳ ದಿನಕ್ಕೆ ಅತ್ಯಂತ ಬೇಡಿಕೆ ಹೊಂದಿರುವ ಈ ವಸ್ತುಗಳು ನಿಮ್ಮ ಸಂಗಾತಿಗೆ ಬೆಸ್ಟ್ ಉಡುಗೊರೆಯಾಗಲಿದೆ.
ಗ್ರೀಟಿಂಗ್ ಕಾರ್ಡ್: ಗ್ರೀಟಿಂಗ್ ಕಾರ್ಡ್ ಸರ್ವಕಾಲಕ್ಕೂ ಅತ್ಯಂತ ಬೇಡಿಕೆ ಹಾಗೂ ಸೂಕ್ತ ಉಡುಗೊರೆ ಎಂದರೆ ತಪ್ಪಲ್ಲ. ನಿಮ್ಮದೇ ಹಸ್ತಾಕ್ಷರದಲ್ಲಿ ಅದರಲ್ಲಿ ಎರಡು ಸಾಲುಗಳನ್ನು ಪ್ರೀತಿಯಿಂದ ಬರೆದರೆ ಅದಕ್ಕಿಂತ ದೊಡ್ಡ ಉಡುಗೊರೆ ಮತ್ತೊಂದಿಲ್ಲ.
2/ 10
ಟಿ ಶರ್ಟ್: ಬಟ್ಟೆ ಎಂದರೆ ಬಹುತೇಕರಿಗೆ ಬಲು ಇಷ್ಟ. ನಿಮ್ಮ ಪ್ರೀತಿ ಪಾತ್ರರೂ ಫ್ಯಾಷನ್ ಪ್ರಿಯರಾಗಿದ್ದಾರೆ. ವಿಶೇಷ ದಿನಕ್ಕೆಂದೆ ತಯಾರಾಗುವ ಕಸ್ಟಮ್ ಟಿ ಶರ್ಟ್ ನೀಡುವುದು ಒಳಿತು
3/ 10
ಬ್ರೆಸ್ಲೆಟ್: ಹುಡುಗಿಯರ ಕೈ ಅಂದ ಹೆಚ್ಚಿಸುವ ಬ್ರೆಸ್ಲೆಟ್ ಕೂಡ ಅತ್ಯುತ್ತಮ ಉಡುಗೊರೆಯಾಗಬಲ್ಲದು. ಹುಡುಗರಿಗೂ ಕೂಡ ಇದು ಒಳ್ಳೆಯ ಉಡುಗೊರೆ. ಅದರ ಮೇಲೆ ನಿಮ್ಮ ಹೆಸರು ದಾಖಲಿಸಲು ಬಹುದು.
4/ 10
ಚಾಕಲೇಟ್: ಪ್ರೀತಿಯನ್ನು ವ್ಯಕ್ತಪಡಿಸಲು ಚಾಕಲೇಟ್ಗಿಂತ ಒಳ್ಳೆ ಗಿಫ್ಟ್ ಇಲ್ಲ. ನಿಮ್ಮ ಹುಡುಗಿಗೆ ಇಷ್ಟವಾದ ಚಾಕಲೇಟ್ ನೀಡಿ
5/ 10
ವೈಯಕ್ತಿಕ ಉಡುಗೊರೆ: ಪುಸ್ತಕ, ಡೈರಿ, ಕಪ್, ಪೆನ್, ಸನ್ಗ್ಲಾಸ್, ವಾಚ್ಗಳಂತಹ ಉಡುಗೊರೆ ನೀಡಿ
6/ 10
ಸುಗಂಧ ದ್ರವ್ಯ: ನಿಮ್ಮ ಪ್ರೀತಿಪಾತ್ರರಿಗೆ ಇಷ್ಟವಾಗುವ ಸುಗಂಧ ದ್ರವ್ಯ ನೀಡಿ
7/ 10
ಕೇಕ್: ಈ ವಿಶೇಷ ದಿನದಂದು ಕೇಕ್ ಕಟ್ ಮಾಡುವ ಮೂಲಕ ಈ ದಿನ ವಿಶೇಷವಾಗಿ ಆಚರಿಸಿ
8/ 10
ಆಭರಣ: ಹುಡುಗಿಯರಿಗೆ ಆಭರಣ ಎಂದರೆ ಅಚ್ಚಮೆಚ್ಚು. ಈ ದಿನ ಅವರಿಗೆ ಇಷ್ಟವಾಗುವ ಆಭರಣ ನೀಡಿ. ಹುಡುಗರಿಗಾದರೆ, ಉಂಗುರ ಸೂಕ್ತ
9/ 10
ಗುಲಾಬಿ: ಹತ್ತು ವಸ್ತುಗಳು ವ್ಯಕ್ತಪಡಿಸಲಾಗದ ನಿಮ್ಮ ಮನದ ಭಾವನೆಯನ್ನು ಗುಲಾಬಿಯೊಂದೆ ಹೇಳಲು ಸಾಧ್ಯ. ಅದರಲ್ಲಿಯೂ ಕೆಂಪು ಗುಲಾಬಿ ನೀಡುವುದು ಸೂಕ್ತ
10/ 10
ಫೋಟೋ: ನಿಮ್ಮ ಸಂಗಾತಿಯೊಡನೆ ಕಳೆದ ಮಧುರ ನೆನಪುಗಳನ್ನು ಫೋಟೊ ಮೂಲಕ ಹಂಚಿಕೊಳ್ಳಿ