Summer Tourist Spots: ಬೇಸಿಗೆ ರಜೆಗೆ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಭಾರತದ 7 ಅತ್ಯುತ್ತಮ ಪ್ರವಾಸಿ ತಾಣಗಳು ಇಲ್ಲಿವೆ ನೋಡಿ

Summer Tourist Spots | ಬೇಸಿಗೆ ರಜೆಗೆ ಪ್ರವಾಸವನ್ನು ಯೋಜಿಸುತ್ತಿರುವಿರಾ? ಭಾರತದಲ್ಲಿ ಅನೇಕ ಜನಪ್ರಿಯ ಬೇಸಿಗೆಯ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ 7 ಅತ್ಯುತ್ತಮ ಪ್ರವಾಸಿ ತಾಣಗಳ ಬಗ್ಗೆ ಇಲ್ಲಿ ತಿಳಿಯಿರಿ.

First published:

  • 19

    Summer Tourist Spots: ಬೇಸಿಗೆ ರಜೆಗೆ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಭಾರತದ 7 ಅತ್ಯುತ್ತಮ ಪ್ರವಾಸಿ ತಾಣಗಳು ಇಲ್ಲಿವೆ ನೋಡಿ

    ಬೇಸಿಗೆ ರಜೆಗಳು ಬರುತ್ತಿವೆ. ಪ್ರವಾಸಕ್ಕೆ ಹೋಗುವವರು ಹೋಗುತ್ತಿದ್ದಾರೆ. ಪ್ರವಾಸಗಳನ್ನು ಯೋಜಿಸುವವರೂ ಇದ್ದಾರೆ. ಭಾರತದಲ್ಲಿ ಅನೇಕ ಬೇಸಿಗೆ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಕೆಲವನ್ನು ಮಿಸ್​ ಮಾಡಿಕೊಳ್ಳಲೇಬಾರದು. (ಸಾಂಕೇತಿಕ ಚಿತ್ರ)

    MORE
    GALLERIES

  • 29

  • 39

    Summer Tourist Spots: ಬೇಸಿಗೆ ರಜೆಗೆ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಭಾರತದ 7 ಅತ್ಯುತ್ತಮ ಪ್ರವಾಸಿ ತಾಣಗಳು ಇಲ್ಲಿವೆ ನೋಡಿ

    The Flower Valley in Sikkim: ಸಿಕ್ಕಿಂನಲ್ಲಿರುವ ಫ್ಲವರ್​ ವ್ಯಾಲಿ ಜನಪ್ರಿಯ ಪ್ರವಾಸಿ ತಾಣವಾಗಿದೆ. ಮಕ್ಕಳು ಮಾತ್ರವಲ್ಲ, ದೊಡ್ಡವರು ಕೂಡ ಇಲ್ಲಿನ ಹಿಮದಲ್ಲಿ ಎಂಜಾಯ್ ಮಾಡಬಹುದು. ಮೇಲಾಗಿ ಅಲ್ಲಿನ ಕಾಡು ಹೂಗಳು ಮತ್ತು ಹುಲ್ಲುಗಾವಲುಗಳು ನಿಮ್ಮನ್ನು ಬೆರಗುಗೊಳಿಸುತ್ತವೆ. ಯುಮ್ತುಂಗ್ ಕಣಿವೆ ಪ್ರದೇಶದಲ್ಲಿ ಅನೇಕ ಹೋಟೆಲ್‌ಗಳು ಲಭ್ಯವಿವೆ. ನೀವು ಅಲ್ಲಿಯೇ ಉಳಿಯಬಹುದು. 40 ಕಿ.ಮೀ ಸಾಗಿದರೆ ಲಾಚುಂಗ್ ಕಣಿವೆ ನೋಡಬಹುದು. ಇದು ಅದ್ಭುತವಾಗಿರುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 49

    Summer Tourist Spots: ಬೇಸಿಗೆ ರಜೆಗೆ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಭಾರತದ 7 ಅತ್ಯುತ್ತಮ ಪ್ರವಾಸಿ ತಾಣಗಳು ಇಲ್ಲಿವೆ ನೋಡಿ

    Pahalgam: ಕಾಶ್ಮೀರದಲ್ಲಿನ ಮತ್ತೊಂದು ಅತ್ಯುತ್ತಮ ಪ್ರವಾಸಿ ತಾಣವೆಂದರೆ ಪಹಲ್ಗಾಮ್. ಸಮುದ್ರ ಮಟ್ಟದಿಂದ 7,000 ಮೀಟರ್​ ಎತ್ತರದಲ್ಲಿದೆ. ಪಹಲ್ಗಾಮ್​ನಲ್ಲಿ ಭವ್ಯವಾದ ಕಾಡುಗಳನ್ನು ಸಹ ಹೊಂದಿದೆ. ಪಹಲ್ಗಾಮ್ ನ ರಮಣೀಯ ದೃಶ್ಯಗಳು ಉಸಿರುಗಟ್ಟುತ್ತವೆ. ಎತ್ತರದ ಹಿಮಾಲಯದಲ್ಲಿ ಸುಂದರವಾದ ಲಿಡ್ಡಾರ್ ಕಣಿವೆಯನ್ನು ನೀವು ನೋಡಬಹುದು. ಇಲ್ಲಿ ಹೈಕಿಂಗ್, ಟ್ರೆಕ್ಕಿಂಗ್ ಮತ್ತು ಮೀನುಗಾರಿಕೆ ಮಾಡಬಹುದು. (ಸಾಂಕೇತಿಕ ಚಿತ್ರ)

    MORE
    GALLERIES

  • 59

    Summer Tourist Spots: ಬೇಸಿಗೆ ರಜೆಗೆ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಭಾರತದ 7 ಅತ್ಯುತ್ತಮ ಪ್ರವಾಸಿ ತಾಣಗಳು ಇಲ್ಲಿವೆ ನೋಡಿ

    Leh and Ladakh: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ನೈಸರ್ಗಿಕ ಸೌಂದರ್ಯವನ್ನು ನೋಡಲು ಇದು ಅತ್ಯುತ್ತಮ ಸಮಯ. ಇಲ್ಲಿ ಸುಮಾರು 10 ನಂಬಲಾಗದ ಸರೋವರಗಳಿವೆ. ಪಾಂಗಾಂಗ್ ಸರೋವರವು ತುಂಬಾ ಸುಂದರವಾಗಿದೆ. ಲಡಾಖ್‌ನಲ್ಲಿ ನೀವು ಪೃಕೃತಿ ದೃಶ್ಯಾವಳಿ ಮತ್ತು ಎತ್ತರದ ಪರ್ವತ ಹಾದಿಗಳನ್ನು ನೋಡಬಹುದು. ರೋಮಾಂಚಕ ಸಾಹಸ ಚಟುವಟಿಕೆಗಳನ್ನು ಎಂಜಾಯ್ ಮಾಡಬಹುದು. (ಸಾಂಕೇತಿಕ ಚಿತ್ರ)

    MORE
    GALLERIES

  • 69

    Summer Tourist Spots: ಬೇಸಿಗೆ ರಜೆಗೆ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಭಾರತದ 7 ಅತ್ಯುತ್ತಮ ಪ್ರವಾಸಿ ತಾಣಗಳು ಇಲ್ಲಿವೆ ನೋಡಿ

    Mana: ಉತ್ತರಾಖಂಡದಲ್ಲಿ ಕೇಳಿಬರುವ ಪ್ರವಾಸಿ ತಾಣ ಮನ. ಇದು ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಈ ಮನ ಗ್ರಾಮಕ್ಕೂ ಮಹಾಭಾರತಕ್ಕೆ ಸಂಬಂಧಿವಿದೆ ಎನ್ನುತ್ತಾರೆ. ಪಾಂಡವರು ಸ್ವರ್ಗಕ್ಕೆ ಅಂತಿಮ ಯಾತ್ರೆ ಕೈಗೊಂಡಾಗ ಮನ ಗ್ರಾಮವನ್ನು ಹೋಗಿದ್ದರು ಎಂದು ನಂಬಲಾಗಿದೆ. ನೀಲಕಂಠ ಶಿಖರ, ತಪ್ಟ್ ಕುಂಡ್, ಮಾತಾ ಮೂರ್ತಿ ದೇವಸ್ಥಾನ, ವಸುಧಾರ ಜಲಪಾತ, ವ್ಯಾಸ ಗುಫಾ, ಗಣೇಶ ಗುಫಾ, ಭೀಮ್ ಪುಲ್ ಮುಂತಾದ ಪ್ರವಾಸಿ ಸ್ಥಳಗಳನ್ನು ಇಲ್ಲಿ ನೋಡಬಹುದು. (ಸಾಂಕೇತಿಕ ಚಿತ್ರ)

    MORE
    GALLERIES

  • 79

    Summer Tourist Spots: ಬೇಸಿಗೆ ರಜೆಗೆ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಭಾರತದ 7 ಅತ್ಯುತ್ತಮ ಪ್ರವಾಸಿ ತಾಣಗಳು ಇಲ್ಲಿವೆ ನೋಡಿ

    Chandrabhaga Beach: ಒಡಿಶಾದ ಚಂದ್ರಭಾಗ ಬೀಚ್ ಈ ಋತುವಿನಲ್ಲಿ ಅದ್ಭುತವಾಗಿದೆ. ಬೇಸಿಗೆಯಲ್ಲಿ ಗೋವಾ ಬದಲು ಚಂದ್ರಭಾಗ ಬೀಚ್‌ಗೆ ಹೋಗುವುದು ಉತ್ತಮ ಆಯ್ಕೆಯಾಗಿದೆ ಎಂದು ಹೇಳಲಾಗುತ್ತದೆ. ಚಂದ್ರಭಾಗ ಕಡಲತೀರವು ಕೋನಾರ್ಕ್ ಸಮೀಪದಲ್ಲಿದ್ದು, ಇಲ್ಲಿ ಸೂರ್ಯ ದೇವಾಲಯವಿದೆ. ಇಲ್ಲಿ ನೀವು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಆನಂದಿಸಬಹುದು. ನೀವು ರಜೆಯನ್ನು ಬೀಚ್​ನಲ್ಲಿ ಕಳೆಯಲು ಇಷ್ಟಪಟ್ಟರೆ ಈ ಚಂದ್ರಭಾಗ ಬೀಚ್‌ಗೆ ಟ್ರಿಪ್​ ಪ್ಲಾನ್ ಮಾಡಿಕೊಳ್ಳಬಹುದು. (ಸಾಂಕೇತಿಕ ಚಿತ್ರ)

    MORE
    GALLERIES

  • 89

    Summer Tourist Spots: ಬೇಸಿಗೆ ರಜೆಗೆ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಭಾರತದ 7 ಅತ್ಯುತ್ತಮ ಪ್ರವಾಸಿ ತಾಣಗಳು ಇಲ್ಲಿವೆ ನೋಡಿ

    Kumarakom: ಕೇರಳದ ಕುಮರಕೊಂ ಒಂದು ಸುಂದರ ಗ್ರಾಮ. ಇದು ಕೇರಳದ ಹಿನ್ನೀರಿನ ವೆಂಬನಾಡ್ ಸರೋವರದ ಮೇಲಿರುವ ಗ್ರಾಮ. ಹೌಸ್‌ಬೋಟಿಂಗ್ ಇಲ್ಲಿ ಬಹಳ ಪ್ರಸಿದ್ಧವಾಗಿವೆ. ಕುಮಾರಕೋಮ್ ಪಕ್ಷಿಧಾಮವು ಕೋಗಿಲೆಗಳು ಮತ್ತು ಸೈಬೀರಿಯನ್ ಕೊಕ್ಕರೆಗಳು ಸೇರಿದಂತೆ ಹಲವು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಹತ್ತಿರದಲ್ಲಿ, ಬೇ ಐಲ್ಯಾಂಡ್ ಡ್ರಿಫ್ಟ್​ವುಡ್​ ಮ್ಯೂಸಿಯಂನಲ್ಲಿರುವ ಮರದ ಕೆತ್ತನೆಗಳು ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 99

    Summer Tourist Spots: ಬೇಸಿಗೆ ರಜೆಗೆ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಭಾರತದ 7 ಅತ್ಯುತ್ತಮ ಪ್ರವಾಸಿ ತಾಣಗಳು ಇಲ್ಲಿವೆ ನೋಡಿ

    Bhitarkanika Beach: ಒಡಿಶಾದ ಭಿತರ್ಕಾನಿಕಾ ಬೀಚ್ ಮತ್ತೊಂದು ಅದ್ಭುತವಾಗಿದೆ. ಇಲ್ಲಿ ನೀವು ಜೀವಕಾಂತಿ ಯನ್ನು(ಬಯೋಲ್ಯೂಮಿನೆಸೆನ್ಸ್) ನೋಡಬಹುದು. ರಾತ್ರಿಯಲ್ಲಿ ಸಮುದ್ರದ ಅಲೆಗಳಿಂದ ಬೀಚ್ ಬೆಳಗುತ್ತದೆ. ಸಾಮಾನ್ಯವಾಗಿ, ಅಂತಹ ದೃಶ್ಯಗಳು ಬಹಳ ಅಪರೂಪ. ಜೀವಂತ ಜೀವಿಗಳಿಂದ ಉತ್ಪತ್ತಿಯಾಗುವ ಬೆಳಕನ್ನು ಬಯೋಲುಮಿನೆಸೆನ್ಸ್ ಎಂದು ಕರೆಯಲಾಗುತ್ತದೆ. ಈ ಕಡಲತೀರದ ಕೆಲವು ಜೀವಿಗಳು ನೀಲಿ ಬೆಳಕನ್ನು ಉತ್ಪಾದಿಸುತ್ತವೆ. ಕಪ್ಪು ಬಣ್ಣದ ಅಲೆಗಳ ಮೇಲಿನ ನೀಲಿ ಬೆಳಕು ಅದ್ಭುತವಾಗಿರುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES