ಇಲ್ಲೊಂದು ಹಳ್ಳಿಯಲ್ಲಿ ಪುರುಷರೇ ಇಲ್ಲ ಎಂದರೆ ನಂಬುತ್ತೀರಾ?. ಹೌದು. ಅಚ್ಚರಿಯಾದ್ರು ಸತ್ಯ!. ಮಹಿಳೆಯರೇ ವಾಸಿಸುವ ಹಳ್ಳಿಯೊಂದಿದೆ. ಆದರೆ ಅದು ಯಾವ ದೇಶದಲ್ಲಿದೆ? ಎಂಬ ಬಗ್ಗೆ ತಿಳಿಯ ಬೇಕಾದರೆ ಈ ಸ್ಟೋರಿ ಪೂರ್ತಿ ಓದಿ.
ಪ್ರತಿ ತಾಲೂಕಿನಲ್ಲಿ, ಹಳ್ಳಿಯಲ್ಲಿ, ಪುರುಷರು ಹಾಗೂ ಮಹಿಳೆಯರು ಸಮಾನವಾಗಿ ಇರುತ್ತಾರೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಪುರುಷರೇ ಇಲ್ಲ ಎಂದರೆ ನಂಬುತ್ತೀರಾ?. ಹೌದು. ಅಚ್ಚರಿಯಾದ್ರು ಸತ್ಯ!. ಮಹಿಳೆಯರೇ ವಾಸಿಸುವ ಹಳ್ಳಿಯೊಂದಿದೆ. ಆದರೆ ಅದು ಯಾವ ದೇಶದಲ್ಲಿದೆ? ಎಂಬ ಬಗ್ಗೆ ತಿಳಿಯ ಬೇಕಾದರೆ ಈ ಸ್ಟೋರಿ ಪೂರ್ತಿ ಓದಿ.
2/ 10
ಉತ್ತರ ಕೀನ್ಯಾದಲ್ಲಿ ಉಮೊಜಾ ಎಂಬ ಹಳ್ಳಿ ಇದೆ. ಈ ಹಳ್ಳಿಯನ್ನು ಮಹಿಳೆಯರು ಸೇರಿ ನಿರ್ಮಿಸಿದ್ದಾರೆ. ಮೊದಲೇ ಹೇಳಿದಂತೆ ಈ ಹಳ್ಳಿಯಲ್ಲಿ ಪುರುಷರೇ ಇಲ್ಲ. ಮಾತ್ರವಲ್ಲ, ಪುರುಷರಿಗೆ ಈ ಹಳ್ಳಿಯ ಒಳಗೆ ಬರಲು ಅನುಮತಿ ಇಲ್ಲ.
3/ 10
1990ರಲ್ಲಿ 14 ಮಹಿಳೆಯರು ಸೇರಿ ಈ ಹಳ್ಳಿಯ ನಿರ್ಮಿಸಿದರು. ಅಂದಿನ ಬ್ರಿಟಿಷ್ ಸೈನಿಕರು ನಡೆಸಿದ ಲೈಗಿಂಕ ದೌರ್ಜನ್ಯ ಮತ್ತು ಅತ್ಯಾಚಾರದಿಂದ ಬದುಕುಳಿದ 14 ಮಹಿಳೆಯರು ಇಲ್ಲಿ ಮನೆಯನ್ನು ನಿರ್ಮಿಸಿದರು.
4/ 10
ಹೀಗೆ ನಿರ್ಮಾಣವಾದ ಉಮೊಜಾ ಹಳ್ಳಿ ನಂತರದ ದಿನಗಳಲ್ಲಿ ಅತ್ಯಾಚಾರ, ದೌರ್ಜನ್ಯ, ಕೌಟುಂಬಿಕ ಹಿಂಸೆ, ವಿಚ್ಚೇದನ, ಬಾಲ್ಯ ವಿವಾಹದಿಂದ ನೊಂದ ಮಹಿಳೆಯರಿಗೆ ಆಶ್ರಯ ನೀಡುವ ಹಳ್ಳಿಯಾಗಿ ಬೆಳೆಯಿತು. ಹಾಗಾಗಿ ಇಲ್ಲಿಯವರೆಗೆ ಅಲ್ಲಿನ ಮಹಿಳೆಯರು ಪುರುಷರನ್ನು ಉಮೊಜಾ ಹಳ್ಳಿಯೊಳಕ್ಕೆ ಸೇರಿಸಿಲ್ಲ.
5/ 10
ಪಿತೃಪ್ರಭುತ್ವ ಕೀನ್ಯಾದಲ್ಲಿ ಆಳವಾಗಿ ಬೇರೂರಿದೆ. ಮತ್ತೊಂದೆಡೆ ಅಲ್ಲಿನ ಜನರು ಅಲೆಮಾರು ಜೀವನ ನಡೆಸುತ್ತಾರೆ. ಮಸಾಯಿ ಬುಡುಕಟ್ಟು ಜನಾಂಗಕ್ಕೆ ನಿಕಟವಾಗಿರುವ ಇಲ್ಲಿನ ಜನರು ಬಹುಪತ್ನಿತ್ವವಾದಿಗಳು ಕೂಡ ಹೌದು.
6/ 10
ಸದ್ಯ ಉಮೊಜಾ ಹಳ್ಳಿಯಲ್ಲಿ ಸುಮಾರು 50 ಮಹಿಳೆಯರು ವಾಸಿಸುತ್ತಿದ್ದಾರೆ. 200 ಮಕ್ಕಳು ಆ ಹಳ್ಳಿಯಲ್ಲಿದ್ದಾರೆ. ಮಾತ್ರವಲ್ಲದೆ ಬದುಕಲು ಬೇಕಾದ ಎಲ್ಲಾ ಸೌಲಭ್ಯಗಳು ಉಮೊಜಾದಲ್ಲಿದೆ.
7/ 10
ಉಮೊಜಾ ಮಹಿಳೆಯರು ಸಫಾರಿ ಪ್ರವಾಸಿಗರಿಗಾಗಿ ಕ್ಯಾಂಪ್ಸೈಟ್ ನಡೆಸುತ್ತಾರೆ. ಪ್ರವಾಸಿಗರು ಗ್ರಾಮಕ್ಕೆ ಭೇಟಿ ನೀಡಿದಾಗ ಅವರಿಂದ ಶುಲ್ಕ ಪಡೆಯುತ್ತಾರೆ.
8/ 10
ಅಷ್ಟೇ ಏಕೆ ಸೌಂದರ್ಯ ಉತ್ಪನ್ನಗಳು, ಬಳೆ, ಮಣಿಸರ, ಆಭರಣಗಳನ್ನು ಕೈಯಲ್ಲಿ ಪೋಣಿಸಿ ಮಾರಾಟ ಮಾಡುತ್ತಾರೆ. ಸಿಕ್ಕ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ ಇಲ್ಲಿನ ಹೆಣ್ಣು ಮಕ್ಕಳು.
9/ 10
ಮತ್ತೊಂದು ಅಚ್ಚರಿಯ ವಿಚಾರವೆಂದರೆ, ಗಂಡು ಮಕ್ಕಳು 18 ವರ್ಷ ತಲುಪಿದಾಗ ಅವರು ಗ್ರಾಮವನ್ನು ತೊರೆಯಬೇಕಾಗುತ್ತದೆ.
10/ 10
ಇನ್ನು ಅಲ್ಲಿನ ಮಹಿಳೆರಯರಿಗಾಗಿ ಶಾಲೆಯನ್ನು ತೆರೆಯಲಾಗಿದೆ. ವಿದ್ಯಾಭ್ಯಾಸವನ್ನು ಪಡೆಯುವ ಮೂಲಕ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.