ವೃತ್ತಿಯಲ್ಲಿ ಈತ ಪೊಲೀಸ್…ಮಧ್ಯಾಹ್ನ ಊಟದ ವೇಳೆ ಮಾತ್ರ ದರೋಡೆಕೋರ!

ಇಲ್ಲೊಂದು ವಿಚಿತ್ರ ಸುದ್ದಿ ಇದೆ. ಪೊಲೀಸ್ ಕಳ್ಳನಾದ ಸುದ್ದಿ. ಹೌದು. ಪೊಲೀಸ್ ವೃತ್ತಿಯನ್ನು ಮಾಡುತ್ತಿದ್ದ ವ್ಯಕ್ತಿಯೊಬ್ಬ ಮಧ್ಯಾಹ್ನದ ಊಟದ ವೇಳೆಗೆ ದರೋಡೆ ಮಾಡುತ್ತಿದ್ದ!. ಹಾಗಿದ್ದರೆ ಆತ ಯಾರು? ಆತನ ಹಿನ್ನಲೆಯ ಬಗ್ಗೆ ಇಲ್ಲಿದೆ ಮಾಹಿತಿ.

First published:

 • 110

  ವೃತ್ತಿಯಲ್ಲಿ ಈತ ಪೊಲೀಸ್…ಮಧ್ಯಾಹ್ನ ಊಟದ ವೇಳೆ ಮಾತ್ರ ದರೋಡೆಕೋರ!

  ಪೊಲೀಸ್ ಎಂದರೆ ಜನಸೇವಕ ಮತ್ತು ರಕ್ಷಕ. ಸಮಾಜದಲ್ಲಿನ ತಪ್ಫಿತಸ್ಥರನ್ನು ಹಿಡಿದು ಅವರಿಗೆ ಸರಿಯಾದ ಶಿಕ್ಷೆ ನೀತಿ ಅಂತಹ ತಪ್ಪನ್ನು ಇನ್ಯಾವತ್ತು ಮಾಡದಂತೆ ಬುದ್ಧಿ ಹೇಳುವ ಆರಕ್ಷಕ. ಆದರೆ ಅಂತಹ ಪೊಲೀಸ್ ಕಳ್ಳನಾಗಿದ್ದರೆ ಹೇಗಿರುತ್ತದೆ? ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ.

  MORE
  GALLERIES

 • 210

  ವೃತ್ತಿಯಲ್ಲಿ ಈತ ಪೊಲೀಸ್…ಮಧ್ಯಾಹ್ನ ಊಟದ ವೇಳೆ ಮಾತ್ರ ದರೋಡೆಕೋರ!

  ಇಲ್ಲೊಂದು ವಿಚಿತ್ರ ಸುದ್ದಿ ಇದೆ. ಪೊಲೀಸ್ ಕಳ್ಳನಾದ ಸುದ್ದಿ. ಹೌದು. ಪೊಲೀಸ್ ವೃತ್ತಿಯನ್ನು ಮಾಡುತ್ತಿದ್ದ ವ್ಯಕ್ತಿಯೊಬ್ಬ ಮಧ್ಯಾಹ್ನದ ಊಟದ ವೇಳೆಗೆ ದರೋಡೆ ಮಾಡುತ್ತಿದ್ದ!. ಹಾಗಿದ್ದರೆ ಆತ ಯಾರು? ಆತನ ಹಿನ್ನಲೆಯ ಬಗ್ಗೆ ಇಲ್ಲಿದೆ ಮಾಹಿತಿ.

  MORE
  GALLERIES

 • 310

  ವೃತ್ತಿಯಲ್ಲಿ ಈತ ಪೊಲೀಸ್…ಮಧ್ಯಾಹ್ನ ಊಟದ ವೇಳೆ ಮಾತ್ರ ದರೋಡೆಕೋರ!

  ಪ್ರಪಂಚದಲ್ಲಿ ಚಿತ್ರ-ವಿಚಿತ್ರ ಸುದ್ದಿಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಕೆಲವೊಂದನ್ನು ನೋಡಿ ಸುಮ್ಮನಾಗುತ್ತೇವೆ. ಇನ್ನು ಕೆಲವೊಂದನ್ನು ಅಚ್ಚರಿಯ ಕಣ್ಣಿನಿಂದ ನೋಡುತ್ತೇವೆ. ಅದರಂತೆ ಈ ವ್ಯಕ್ತಿಕೂಡ ಸಾರ್ವಜನಿಕರನ್ನು ಅಚ್ಚರಿ ಪಡುವಂತೆ ಮಾಡಿದ ನೈಜ ಘಟನೆಯಿದು.

  MORE
  GALLERIES

 • 410

  ವೃತ್ತಿಯಲ್ಲಿ ಈತ ಪೊಲೀಸ್…ಮಧ್ಯಾಹ್ನ ಊಟದ ವೇಳೆ ಮಾತ್ರ ದರೋಡೆಕೋರ!

  ಹೆಸರು ಆ್ಯಂಡ್ರೆ ಸ್ಟ್ಯಾಂಡರ್. ಮೂಲತಃ ಸೌತ್ ಆಫ್ರಿಕಾದವನು. ಬೆಳಗ್ಗೆ ಪೊಲೀಸ್ ವೃತ್ತಿಯನ್ನು ನಿರ್ವಹಿಸಿದರೆ ಮಧ್ಯಾಹ್ನ ಊಟದ ಸಮಯಕ್ಕೆ ಬ್ಯಾಂಕ್ ದರೋಡೆ ಮಾಡುತ್ತಿದ್ದ.

  MORE
  GALLERIES

 • 510

  ವೃತ್ತಿಯಲ್ಲಿ ಈತ ಪೊಲೀಸ್…ಮಧ್ಯಾಹ್ನ ಊಟದ ವೇಳೆ ಮಾತ್ರ ದರೋಡೆಕೋರ!

  ಆ್ಯಂಡ್ರೆ ತಂದೆ ಮೇಜರ್ ಜನರಲ್ ಫ್ರಾನ್ಸ್​  ಸ್ಟ್ಯಾಂಡರ್. ದಕ್ಷಿಣ ಆಫ್ರಿಕಾದ ಜೈಲಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಸೇವೆಗೆ ಅನೇಕರು ಗೌರವ ಸೂಚಿಸಿದ್ದರು. ಹಾಗಾಗಿ ಫ್ರಾನ್ಸ್​​ಗೆ  ತನ್ನ ಮಗನು  ತನ್ನಂತೆಯೇ ಆಗಬೇಕು ಎಂಬ ಮಹದಾಸೆಯಿತ್ತು.

  MORE
  GALLERIES

 • 610

  ವೃತ್ತಿಯಲ್ಲಿ ಈತ ಪೊಲೀಸ್…ಮಧ್ಯಾಹ್ನ ಊಟದ ವೇಳೆ ಮಾತ್ರ ದರೋಡೆಕೋರ!

  ಆದರೆ ಆ್ಯಂಡ್ರೆಗೆ ತಂದೆಯ ಹೇಳಿದ ವೃತ್ತಿ ಇಷ್ಟವಿರಲಿಲ್ಲ. ಕೊನೆಗೆ ತಂದೆಯ ಒತ್ತಾಯಕ್ಕೆ ಮಣಿದು ಪೊಲೀಸ್​ ವೃತ್ತಿ ಸೇರುತ್ತಾನೆ. ಆ ವೇಳೆಗೆ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇಧನೀತಿ ಜೋರಾಗಿತ್ತು. ಆ್ಯಂಡ್ರೆ ಬಿಳಿಯ ವ್ಯಕ್ತಿಯಾಗಿದ್ದ.

  MORE
  GALLERIES

 • 710

  ವೃತ್ತಿಯಲ್ಲಿ ಈತ ಪೊಲೀಸ್…ಮಧ್ಯಾಹ್ನ ಊಟದ ವೇಳೆ ಮಾತ್ರ ದರೋಡೆಕೋರ!

  ಆ್ಯಂಡ್ರೆ ಮನಸಿಲ್ಲದ ಮನಸಿನಲ್ಲಿ ಪೊಲೀಸ್ ವೃತ್ತಿಯನ್ನು ನಿರ್ವಹಿಸುತ್ತಿದ್ದ. ಈ ಸಮಯದಲ್ಲಿ ಮೊದಲ ಪತ್ನಿಗೆ ವಿಚ್ಛೇಧನ ನೀಡಿ ಒಬ್ಬನೇ ಜೀವಿಸುತ್ತಿದ್ದನು. ಆದರೆ ಆತನ ಬದುಕು ಸುಖಕರವಾಗಿರಲಿಲ್ಲ. 70 ದಶಕದಲ್ಲಿ ಆತನ ಮನಸ್ಸು ಬೇರೆಕಡೆ ತಿರುಗುತ್ತದೆ.

  MORE
  GALLERIES

 • 810

  ವೃತ್ತಿಯಲ್ಲಿ ಈತ ಪೊಲೀಸ್…ಮಧ್ಯಾಹ್ನ ಊಟದ ವೇಳೆ ಮಾತ್ರ ದರೋಡೆಕೋರ!

  ಬ್ಯಾಂಕ್ ದರೋಡೆ ಮಾಡಬೇಕು, ಹಣ ಸಂಪಾದಿಸಬೇಕು ಎಂದುಕೊಳ್ಳುತ್ತಾನೆ. ಪೊಲೀಸ್ ವೃತ್ತಿಯಲ್ಲಿದ್ದಾಲೇ ಆ್ಯಂಡ್ರೆ ಬ್ಯಾಂಕ್​ವೊಂದರ ಮೇಲೆ ಕಣ್ಣು ಹಾಯಿಸುತ್ತಾನೆ. ಒಂದು ದಿನ ಮಧ್ಯಾಹ್ನದ ಊಟದ ಸಮಯದಲ್ಲಿ ಬ್ಯಾಂಕ್ ಮೇಲೆ ದಾಳಿ  ಮಾಡುತ್ತಾನೆ.

  MORE
  GALLERIES

 • 910

  ವೃತ್ತಿಯಲ್ಲಿ ಈತ ಪೊಲೀಸ್…ಮಧ್ಯಾಹ್ನ ಊಟದ ವೇಳೆ ಮಾತ್ರ ದರೋಡೆಕೋರ!

  ತನ್ನ ವೇಷ ಬದಲಾಯಿಸಿಕೊಂಡು ಬ್ಯಾಂಕ್ ಒಳಕ್ಕೆ ನುಗ್ಗಿದ ಆ್ಯಂಡ್ರೆ ಕ್ಯಾಷಿಯರ್ ಮೇಲೆ ಗನ್ ಪಾಯಿಂಟ್ ಇಡುತ್ತಾನೆ. ತನ್ನಲ್ಲಿದ್ದ ಚೀಲವನ್ನು ನೀಡಿ ಅದಕ್ಕೆ ಹಣ ತುಂಬಿಸಲು ಹೇಳುತ್ತಾನೆ. ನಂತರ  ಅಲ್ಲಿಂದ ತಲೆಮರೆಸಿಕೊಳ್ಳುತ್ತಾನೆ.

  MORE
  GALLERIES

 • 1010

  ವೃತ್ತಿಯಲ್ಲಿ ಈತ ಪೊಲೀಸ್…ಮಧ್ಯಾಹ್ನ ಊಟದ ವೇಳೆ ಮಾತ್ರ ದರೋಡೆಕೋರ!

  1980ರ ಜನವರಿಯಲ್ಲಿ ಡರ್ಬನ್​ನಲ್ಲಿ ಬ್ಯಾಂಕ್ ದರೋಡೆ ಮಾಡುತ್ತಾನೆ. ಈ ಸಮಯದಲ್ಲಿ ಪೊಲೀಸರು ಆತನನ್ನು ಬಂಧಿಸಿ ಯಶಸ್ವಿಯಾಗುತ್ತಾರೆ. ಅಲ್ಲಿಯವರೆಗೆ ಆ್ಯಂಡ್ರೆ 15 ಬಾರಿ ಬ್ಯಾಂಕ್ ದರೋಡೆ ಮಾಡಿದ್ದನು. ಆತ ಮಾಡಿದ ಕೃತ್ಯಕ್ಕಾಗಿ 75 ವರ್ಷಗಳ ಕಾಲ ಜೈಲು ಶಿಕ್ಷೆಯಾಗುತ್ತದೆ. ನಂತರ ಆತನ ಶಿಕ್ಷೆಯ ಅವಧಿ 17 ವರ್ಷಕ್ಕೆ ಇಳಿಯುತ್ತದೆ.

  MORE
  GALLERIES