Suicide Forest: ಇದು ‘‘ಆತ್ಮಹತ್ಯೆಯ ಅರಣ್ಯ’’! ಈ ಕಾಡಿನೊಳಕ್ಕೆ ಎಂಟ್ರಿ ಕೊಟ್ರೆ ವಾಪಾಸ್ಸು ಬರೋದೆ ಇಲ್ಲ!
Aokigahara Forest: ಒಂದು ವೇಳೆ ಯಾರಾದರೂ ಇಲ್ಲಿ ಕಳೆದುಹೋದರೆ, ಆ ವ್ಯಕ್ತಿ ಇತರ ಜನರನ್ನು ಸಂಪರ್ಕಿಸಲು ಸಾಧ್ಯವಿಲ್ಲ. 2003ರಲ್ಲಿ 105 ಶವಗಳನ್ನು ಅರಣ್ಯದಿಂದ ಹೊರತೆಗೆಯಲಾಗಿತ್ತು. ಇವುಗಳಲ್ಲಿ ಹಲವು ಶವಗಳು ಕೊಳೆತವಾಗಿದ್ದರೆ, ಹಲವು ಕಾಡು ಪ್ರಾಣಿಗಳು ತಿಂದು ಹೋಗಿದ್ದವು.
ಹಚ್ಚ ಹಸುರಿನ ಕಾಡು ನೋಡುವುದೇ ಚೆಂದ. ಇನ್ನು ಕೆಲವೊಂದು ಕಾಡಿನಲ್ಲಿ ರಹಸ್ಯಗಳು ಅಡಗಿರುತ್ತವೆ. ಅದರಂತೆ ನೋಡಲು ಸುಂದರವಾಗಿರುವ ಅಕಿಗಹರಾ ಅರಣ್ಯದಲ್ಲೂ ರಸಹ್ಯವೊಂದು ಅಡಗಿದೆ. ಜಪಾನ್ ರಾಜಧಾನಿ ಟೋಕಿಯೊದಿಂದ ಎರಡು ಗಂಟೆಗಳ ಪ್ರಯಾನಿಸಿದರೆ ಅಕಿಗಹರಾ ಅರಣ್ಯ ಸಿಗುತ್ತದೆ. ಇಲ್ಲಿ ವಿವಿಧ ರೀತಿಯ ಮರಗಳಿವೆ.
2/ 6
ಅಕಿಗಹರಾ ಕಾಡಿಗೆ ಬರುವ ಬಹುತೇಕ ಮಂದಿ ಇಲ್ಲಿ ಅಲೆದಾಡುತ್ತಾ ಪ್ರಾಣ ಕಳೆದುಕೊಳ್ಳುತ್ತಾರೆ (ಸುಸೈಡ್ ಫಾರೆಸ್ಟ್). ಈ ಕಾಡನ್ನು 'ಆತ್ಮಹತ್ಯೆ ಅರಣ್ಯ ಎಂದು ಕರೆಯಲಾಗುತ್ತದೆ. ಇಲ್ಲಿಯವರೆಗೆ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವಾರು ಆತ್ಮಹತ್ಯೆಯ ಘಟನೆಗಳನ್ನು ಕೇಳಿದ ಮತ್ತು ನೋಡಿದ ನಂತರ, ಇಲ್ಲಿನ ಜನರು ಈ ಸ್ಥಳವನ್ನು ಭಯಾನಕವೆಂದು ಹೇಳಲು ಪ್ರಾರಂಭಿಸಿದರು.
3/ 6
ಯಾರೇ ಆಗಲಿ ಈ ಅರಣ್ಯವನ್ನು ಪ್ರವೇಶಿಸುವ ಮೊದಲು, ಖಂಡಿತವಾಗಿಯೂ ಕುಟುಂಬ ಮತ್ತು ಮಕ್ಕಳ ಬಗ್ಗೆ ಯೋಚಿಸಬೇಕು. ನೀವು ಜೀವನವು ನಿಮ್ಮ ಪೋಷಕರು ನೀಡಿದ ಅಮೂಲ್ಯ ಕೊಡುಗೆ ಎಂದು ಈ ಕಾಎಇಗೆ ಹೋಗುವ ಪ್ರವೇಶ ದ್ವಾರದಲ್ಲಿ ಬೋರ್ಡ್ ಹಾಕಲಾಗಿದೆ.
4/ 6
ಜಪಾನ್ನ ಟೋಕಿಯೊದಿಂದ 2 ಗಂಟೆಗಳ ದೂರದಲ್ಲಿರುವ ಈ ಅರಣ್ಯವು 35 ಚದರ ಕಿಲೋಮೀಟರ್ಗಳಷ್ಟು ವ್ಯಾಪಿಸಿದೆ. ಈ ಕಾಡಿಗೆ ಹೋದವರು ಮತ್ತೆ ಬರುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಅಂದಹಾಗೆಯೇ ಈ ಕಾಡಿನಲ್ಲಿರುವ ಮಣ್ಣು ಜ್ವಾಲಾಮುಖಿ ಲಾವಾದಿಂದ ಕೂಡಿದೆ. ಅದೇ ಕಾರಣಕ್ಕಾಗಿ, ದಿಕ್ಸೂಚಿ ಇಲ್ಲಿ ಕಾರ್ಯನಿರ್ವಹಿಸುವುದಿಲ್ಲ.
5/ 6
ಒಂದು ವೇಳೆ ಯಾರಾದರೂ ಇಲ್ಲಿ ಕಳೆದುಹೋದರೆ, ಆ ವ್ಯಕ್ತಿ ಇತರ ಜನರನ್ನು ಸಂಪರ್ಕಿಸಲು ಸಾಧ್ಯವಿಲ್ಲ. 2003ರಲ್ಲಿ 105 ಶವಗಳನ್ನು ಅರಣ್ಯದಿಂದ ಹೊರತೆಗೆಯಲಾಗಿತ್ತು. ಇವುಗಳಲ್ಲಿ ಹಲವು ಶವಗಳು ಕೊಳೆತವಾಗಿದ್ದರೆ, ಹಲವು ಕಾಡು ಪ್ರಾಣಿಗಳು ತಿಂದು ಹೋಗಿದ್ದವು.
6/ 6
ಇಲ್ಲಿ ಮೊಬೈಲ್ ನೆಟ್ವರ್ಕ್ ಮತ್ತು ಕಂಪಾಸ್ ಕೆಲಸ ಮಾಡದ ಕಾರಣ ಜನರು ಭಯದಿಂದ ಸಾನ್ನಪ್ಪುತ್ತಾರೆ ಎನ್ನಲಾಗಿದೆ. ಕೆಲವು ಜಪಾನಿಯರು ಇಲ್ಲಿ ಸತ್ತವರ ಆತ್ಮಗಳಿವೆ ಎಂದು ಹೇಳುತ್ತಾರೆ. ಈ ಕಾಡು ತನ್ನ ಭಯಾನಕತೆಯಿಂದ ಹೆಸರುವಾಸಿಯಾಗಿದೆ.