ಸತ್ತವರೊಂದಿಗೆ ಇವ್ರು ಇನ್ನೂ ಬದುಕ್ತಾರೆ, ಸೆಲ್ಫಿನೂ ತೆಗೆದುಕೊಳ್ತಾರೆ!
Living with the Dead: ಹೆಚ್ಚಿನ ಹಣಕ್ಕಾಗಿ ಹಾಗೂ ಸದಸ್ಯನ ಅಂತ್ಯ ಸಂಸ್ಕಾರವನ್ನು ಅದ್ಧೂರಿಯಾಗಿ ನಡೆಸಲು ಸಮಯ ಹಿಡಿಯುವುದರಿಂದ ಮೃತ ಕುಟುಂಬ ಸತ್ತ ವ್ಯಕ್ತಿಯನ್ನು ವಿಶೇಷ ಬಟ್ಟೆಯಲ್ಲಿ ಸುತ್ತಿ ಮನೆಯಲ್ಲಿಯೇ ಇಡುತ್ತಾರೆ.
ಕೆಲವು ಸಂಸ್ಕೃತಿಗಳು ವಿಭಿನ್ನ. ಭಾರತ ಸೇರಿದಂತೆ ಅನೇಕ ದೇಶಗಳು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿದೆ. ಅದರಂತೆ ಇಲ್ಲೊಂದು ದೇಶದ ಸಂಸ್ಕೃತಿ ಬಗ್ಗೆ ಕೇಳಿದಾಗಲೇ ಅಚ್ಚರಿಯಾಗುತ್ತದೆ. ಏಕೆಂದರೆ ಇಲ್ಲಿನ ಜನರು ಸತ್ತ ವ್ಯಕ್ತಿಗಳೊಂದಿಗೆ ಬದುಕುತ್ತಾರೆ!
2/ 10
ಭಾರತದಲ್ಲಿ ಸಂಸ್ಕೃತಿಯ ಜತೆಗೆ ಕೆಲವು ನಂಬಿಕೆಯೂ ಸೇರಿಕೊಂಡಿದೆ. ಉದಾಹರಣೆಗೆ ಮಳೆ ಬರಲು ಕಪ್ಪೆಗೆ ಮದುವೆ ಮಾಡಿರುವುದನ್ನ ಕೇಳಿರುತ್ತೇವೆ, ನೋಡಿರುತ್ತೇವೆ. ಅಷ್ಟೇ ಏಕೆ ಕತ್ತೆಗೂ ಮದುವೆ ಮಾಡುತ್ತಾರೆ. ಆದರೆ ಇವೆಲ್ಲವು ವಿಚಿತ್ರ ಎನಿಸಿದರು, ಕೆಲವೊಮ್ಮೆ ನಗು ತರಿಸುತ್ತದೆ
3/ 10
ಆದರೆ ಇಂಡೋನೇಷ್ಯಾದಲ್ಲಿ ದಕ್ಷಿಣ ಸುಲವೇಸಿಯಾದಲ್ಲಿ ಟೊರಾಜ ಎಂಬ ಜನಾಂಗೀಯ ಗುಂಪೊಂದಿದೆ. ಇವರು ಸತ್ತವರ ಜತೆಗೆ ಕೆಲ ಕಾಲ ಬದುಕುತ್ತಾರೆ. ಆದರೆ ನಿರ್ದಿಷ್ಟ ಕಾರಣದಿಂದಾಗಿ ಟೊರಾಕ ಜನರು ಈ ರೀತಿ ಮಾಡುತ್ತಾರೆ.
4/ 10
ಟೊರಾಜ ಜನಾಂಗೀಯ ಗುಂಪಿನ ಸದಸ್ಯ ಯಾರಾದರು ಸತ್ತರೆ. ಅವರ ಅಂತ್ಯಸಂಸ್ಕಾರಕ್ಕೆ ಕುಟುಂಬ ಸಾಕಷ್ಟು ಹಣವನ್ನು ಸಂಗ್ರಹಿಸಲು ಮುಂದಾಗುತ್ತದೆ. ಕೆಲಮೊಮ್ಮೆ ಹೆಚ್ಚಿನ ಹಣ ಸಂಗ್ರಹಿಸಲು ತಿಂಗಳುಗಳು ಹಿಡಿಯುತ್ತದೆ.
5/ 10
ಹೆಚ್ಚಿನ ಹಣಕ್ಕಾಗಿ ಹಾಗೂ ಸದಸ್ಯನ ಅಂತ್ಯ ಸಂಸ್ಕಾರವನ್ನು ಅದ್ಧೂರಿಯಾಗಿ ನಡೆಸಲು ಸಮಯ ಹಿಡಿಯುವುದರಿಂದ ಮೃತ ಕುಟುಂಬ ಸತ್ತ ವ್ಯಕ್ತಿಯನ್ನು ವಿಶೇಷ ಬಟ್ಟೆಯಲ್ಲಿ ಸುತ್ತಿ ಮನೆಯಲ್ಲಿಯೇ ಇಡುತ್ತಾರೆ.
6/ 10
ಹಾಗಾಗಿ ಟೊರಾಜ ಜನರಿಗೆ ಕೆಲವೊಮ್ಮೆ ಸತ್ತವರನ್ನು ಮನೆಯಲ್ಲಿಯೇ ಇಟ್ಟುಕೊಂಡು ಮಲಗಬೇಕಾದ ಅನಿವಾರ್ಯತೆ ಎದುರಾಗುತ್ತದೆ.
7/ 10
ಅಷ್ಟು ಮಾತ್ರವಲ್ಲ, ಸತ್ತವರಿಗೆ ಪ್ರತಿದಿನ ಊಟ ನೀಡುತ್ತಾರೆ. ಅಂತಿಮಾವಾಗಿ ಸಮಾಧಿ ಮಾಡುವ ಮೊದಲು ಮೃತ ದೇಹವನ್ನು ಸ್ವಚ್ಛಗೊಳಿಸುದರ ಜತೆಗೆ ಆರೈಕೆ ಮಾಡುತ್ತಾರೆ. ಶುಭ್ರ ಬಟ್ಟೆಯನ್ನು ಶವಗಳಿಗೆ ಧರಿಸುತ್ತಾರೆ.
8/ 10
ಶವ ಪೆಟ್ಟಿಗೆಯಲ್ಲಿ ಮೃತ ವ್ಯಕ್ತಿಯ ಇಷ್ಟದ ವಸ್ತುಗಳನ್ನು ಇಡುತ್ತಾರೆ. ಇನ್ನು ಕೆಲವರು ಬೆಲೆ ಬಾಳುವ ವಸ್ತುಗಳು ಮನೆಯಲ್ಲಿ ಇದ್ದರೆ ಕಳವಾಗುತ್ತದೆ ಎಂದು ಸತ್ತ ವ್ಯಕ್ತಿಯ ಪೆಟ್ಟಿಯಲ್ಲಿ ಇಟ್ಟಿರುತ್ತಾರೆ. ವರ್ಷಕ್ಕೊಮ್ಮೆ ಅಥವಾ ಬೇಕಾದಾಗ ತೆರೆಗುತ್ತಾರೆ.
9/ 10
106 ವಯಸ್ಸಿನ ವೃದ್ಧೆಯೊಬ್ಬಳು ಸಾವನ್ನಪ್ಪಿದ್ದು, ಆಕೆಯ ಮೃತ ದೇಹದೊಂದಿಗೆ ಕುಟುಂಬ ಸದಸ್ಯರು ಜೀವಿಸುವ ಚಿತ್ರ ಇದಾಗಿದೆ.
10/ 10
ಕೆಲವು ಕುಟುಂಬ ನೆನಪಿಗಾಗಿ ಸತ್ತಿರುವ ವ್ಯಕ್ತಿಯ ಜತೆ ಫೋಟೋ ಅಥವಾ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಅಂದಹಾಗೆಯೇ ಈ ಫೋಟೋದಲ್ಲಿರುವ ವ್ಯಕ್ತಿ ಎರಡು ವರ್ಷಗಳ ಹಿಂದೆ 90 ವರ್ಷದವನಾಗಿದ್ದಾಗ ನಿಧನರಾದರು. ಕುಟುಂಬವು ಸತ್ತ ವ್ಯಕ್ತಿಗೆ ಗೌರವಯುತವಾಗಿ ಮಿಲಿಟರಿ ಸಮವಸ್ತ್ರದರಿಸಿ ಫೋಟೋ ತೆಗೆಸಿಕೊಂಡು ಸಮಾಧಿ ಮಾಡಿದರು.