ಕಳೆದು ಹೋಗಿದ್ದ 8 ಕೋಟಿ ಮೌಲ್ಯದ ಅಲಸ್ಕನ್ ಮಲಾಮೂಟ್ ನಾಯಿ ಕೊನೆಗೂ ಮಾಲೀಕನ ಕೈಸೇರಿದೆ. ಬೆಂಗಳೂರಿನ ಸೆಲೆಬ್ರಿಟಿ ಬ್ರೀಡರ್ ಎಂದೇ ಖ್ಯಾತರಾಗಿರುವ ಸತೀಶ್ ಎಂಬುವವರಿಗೆ ಸೇರಿದ ಅಲಸ್ಕನ್ ಮಲಾಮೂಟ್ ಎಂಬ ಜಾತಿಯ ನಾಯಿ ಕಳ್ಳತನವಾಗಿತ್ತು.
2/ 14
ಸತೀಶ್ ಅವರ ಮನೆಯೇ ಮುಂದೆಯೇ ಅಲಸ್ಕನ್ ಮಲಾಮೂಟ್ ನಾಯಿ ಪತ್ತೆಯಾಗಿದೆ. ಮಾಹಿತಿಯ ಪ್ರಕಾರ ಪರಿಚಯಸ್ತರೇ ಈ ನಾಯಿಯನ್ನು ಕದ್ದಿರಬೇಕೆಂಬ ಶಂಕೆ ವ್ಯಕ್ತವಾಗಿದೆ.
3/ 14
ಸತೀಶ್ ಅವರಿಗೆ ಸೇರಿದ ಈ ಅಲಸ್ಕನ್ ತಳಿಯ ನಾಯಿ ಭಾರತದಲ್ಲಿ ಕೇವಲ ಮೂರೇ ಇವೆ. ಆ ಮೂರು ನಾಯಿಗಳಲ್ಲಿ ಬೆಂಗಳೂರಿನಲ್ಲಿದ್ದ ನಾಯಿಯೂ ಒಂದು.
4/ 14
ಜಗತ್ತಿನಲ್ಲಿ ಟಾಪ್ 10 ನಾಯಿಗಳು ಇಲ್ಲಿವೆ...
5/ 14
ಸಮೋಯ್ದ್: ಅತ್ಯಂತ ದುಬಾರಿ ನಾಯಿಗಳಲ್ಲಿ ಸಮೋಯ್ಡ್ ನಾಯಿ ಕೂಡ ಒಂದು. ಇದು ಸೈಬೀರಿಯನ್ ತಳಿಯಾಗಿದ್ದು, ಹೆಚ್ಚೆಂದರೆ 12 ರಿಂದ 13 ವರ್ಷ ಬದುಕುತ್ತವೆ. ಇನ್ನು ಗಂಡು ಸಮೋಯ್ಡ್ ನಾಯಿಗಳು 45-65 ತೂಕವಿರುತ್ತವೆ. ಹೆಣ್ಣು ನಾಯಿಗಳು 35 ರಿಂದ 50 ತೂಕವಿರುತ್ತವೆ .ಈ ನಾಯಿ ಬೆಲೆ 10 ಲಕ್ಷ ರೂ.
6/ 14
ಲೌಚೆನ್: ಜಗತ್ತಿನ ಅಪರೂಪದ ನಾಯಿಗಳಲ್ಲಿ ಲೌಚೆನ್ ಕೂಡ ಒಂದು. 1973ರಲ್ಲಿ ಲೌಚೆನ್ ತಳಿಗಳು 65 ಮಾತ್ರ ಇದ್ದವು. ಆದರೀಗ ತಳಿಗಳು ವೃದ್ಧಿಯಾಗಿವೆ.
7/ 14
ಚೌ ಚೌ: ಜಗತ್ತಿನ ದುಬಾರಿ ನಾಯಿಗಳಲ್ಲಿ ಚೌ ಚೌ ನಾಯಿ ಕೂಡ ಒಂದು. ಇದು ಚೀನಾದ ತಳಿಯಾಗಿದ್ದು, ನೋಡಲು ಸಿಂಹದ ಮರಿಯಂತೆ ಕಾಣುತ್ತದೆ
8/ 14
ಟಿಬೆಟಿಯನ್ ಮಾಸ್ಟಿಫ್: ಹೆಸರೇ ಸೂಚಿಸಿದಂತೆ ಟಿಬೆಟ್ನಲ್ಲಿ ಈ ನಾಯಿಯನ್ನು ಹೆಚ್ಚಾಗಿ ಕಾಣಬಹುದಾಗಿದೆ. ಮಾಸ್ಟಿಫ್ ಜಾತಿಗೆ ಸೇರಿದ ಗಂಟು ನಾಯಿ 33ಮೀಟರ್ ಉದ್ದವಾಗಿ ಬೆಳೆಯುತ್ತದೆ. 50-90 ಕೆ.ಜಿಯಷ್ಟು ತೂಕವನ್ನು ಹೊಂದಿರುತ್ತದೆ.
9/ 14
ಅಜವಾಖ್: ಪಶ್ಚಿಮ ಆಫ್ರಿಕಾ ಮತ್ತು ಇಂಗ್ಲೆಂಡ್ನಲ್ಲಿ ಅಜವಾಖ್ ನಾಯಿಗಳು ಹೆಚ್ಚಾಗಿ ಕಂಡುಬರುತ್ತವೆ. ಈ ನಾಯಿ ಹೆಚ್ಚೆಂದರೆ10 ರಿಂದ 12 ವರ್ಷ ಬದುಕುತ್ತವೆ. 15 ರಿಂದ 25 ಕೆ.ಜಿ ತೂಕ ಮತ್ತು 25 ರಿಂದ 29 ಮೀಟರ್ ಎತ್ತರವಾಗುತ್ತದೆ.
10/ 14
ರಾಟ್ವೀಲರ್; ಜರ್ಮನ್ ಬ್ರೀಡ್ ರಾಟ್ವೀಲರ್ ನಾಯಿಗಳನ್ನು ಬಂಡಿಗಳನ್ನು ಎಳೆಯಲು ಬಳಸುತ್ತಿದ್ದರಂತೆ. ಈ ನಾಯಿಗಳು ಹೆಚ್ಚೆಂದರೆ 8 ರಿಂದ 10 ವರ್ಷ ಬದುಕುತ್ತವೆ. 50 ರಿಂದ 60 ಕೆ.ಜಿ ತೂಕ ಮತ್ತು 24 -27 ಮೀಟರ್ ಎತ್ತರವಾಗಿ ಬೆಳೆಯುತ್ತವೆ.
11/ 14
ಕೆನಡಿಯನ್ ಎಸ್ಕಿಮೊ: ಎಸ್ಕಿಮೊ ನಾಯಿಗಳು ಕೆನಡಿಯನ್ ಮೂಲದವುಗಳು. ಇವು ಅತಿ ಹಳೆಯ ಮತ್ತು ಅಪರೂಪದ ತಳಿಗಳಾಗಿವೆ.
12/ 14
ಡೊಗೊ ಅರ್ಜೆಂಟಿನೋ: ದುಬಾರಿ ನಾಯಿಗಳಲ್ಲಿ ಡೊಗೊ ಅರ್ಜೆಂಟಿನೋ ಕೂಡ ಒಂದು. ಈ ನಾಯಿಗಳನ್ನು ಶಿಕಾರಿಗಳಿಗೆ ಹೆಚ್ಚು ಬಳಸಲಾಗುತ್ತದೆ.
13/ 14
ಫೇರೋ ಹೌಂಡ್: ಯುರೋಪಿನ ಮಾಲ್ಟಾದ ರಾಷ್ಟ್ರೀಯ ನಾಯಿ ಫೇರೋ ಹೌಂಡ್. ಈ ನಾಯಿಯನ್ನು ‘ಮೊಲ ಹಿಡಿಯುವ ನಾಯಿ‘ ಎಂದು ಕರೆಯಲಾಗುತ್ತದೆ. ಫೇರೋ ಹೌಂಡ್ ಅನ್ನು ಹೆಚ್ಚಾಗಿ ಶಿಕಾರಿಗಳಿಗೆ ಬಳಸುತ್ತಾರೆ.
14/ 14
ಅಫ್ಘಾನ್ ಹೌಂಡ್: ಹೆಸರೇ ಸೂಚಿಸುವಂತೆ ಅಪ್ಘಾನ್ನಲ್ಲಿ ಹೌಂಡು ನಾಯಿಯನ್ನು ಹೆಚ್ಚಾಗಿ ಕಾಣಬಹುದಾಗಿದೆ. ಉದ್ದ ಕೂದಲಿನ ಈ ನಾಯಿ 64 ರಿಂದ 69 ಮೀಟರ್ ಎತ್ತರವಾಗಿ ಬೆಳೆಯುತ್ತವೆ. 23ರಿಂದ 27 ಕಿ.ಗ್ರಾಂ ತೂಕವನ್ನು ಹೊಂದಿರುತ್ತದೆ.