ವಿಶ್ವದ ಮಹಾಯುದ್ದಗಳಲ್ಲಿ ಹೆಚ್ಚು ಕಳೆದುಕೊಂಡ ದೇಶವೆಂದರೆ ಜಪಾನ್. ಅಣುಬಾಂಬ್ನಿಂದ ಧ್ವಂಸವನ್ನು ಕಣ್ಣಾರೆ ಕಂಡ ದೇಶ ಅದು. ಆದರೆ ನಂತರ ಶಾಂತಿಯ ಗೀತೆ ಹಾಡಿತು. ಅಭಿವೃದ್ಧಿಯನ್ನೇ ಗುರಿಯಾಗಿಸಿ ದಿಟ್ಟ ಹೆಜ್ಜೆ ಹಾಕಿತು. ಪ್ರತಿಫಲವೇ ಈಗ ಜಪಾನ್ ವಿಶ್ವದ ಅಗ್ರ 10 ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಇದಕ್ಕೆ ಮುಖ್ಯ ಕಾರಣ ಆ ದೇಶದ ಜನರ ವರ್ತನೆ, ಅವರ ವ್ಯವಹಾರ ಶೈಲಿ ಮತ್ತು ಪರಿಶ್ರಮ. ಆ ದೇಶದ ಜನರ ಗುಣ, ವಿಶೇಷತೆಯ ಬಗ್ಗೆ ತಿಳಿಯೋಣ.