Bald Men: ತಿಂಗಳಿಗೆ ನಮಗೆ 6 ಸಾವಿರ ಪೆನ್ಷನ್ ಬೇಕು, ಬೋಳು ತಲೆ ಪುರುಷರ ಸಂಘದಿಂದ ಡಿಮ್ಯಾಂಡ್!
ಇತ್ತೀಚಿಗಿನ ದಿನಗಳಲ್ಲಿ ಬದಲಾಗುತ್ತಿರುವ ವಾತಾವರಣಗಳಿಂದ ಜೀವನ ಶೈಲಿಯು ಬದಲಾಗ್ತಾ ಇದೆ. ಹೀಗಾಗಿ ತಲೆಗೂದಲು ಉದುರುವುದು ಕೂಡ ಹೆಚ್ಚಾಗ್ತಾ ಇದೆ. ಇದಕ್ಕಾಗಿ ಪಿಂಚಣಿ ಬೇಕು ಎಂದು ಒಂದು ಸಂಘ ಹಠ ಮಾಡಿದೆ. ಏನು ಎಂದು ತಿಳಿಯೋಣ ಬನ್ನಿ.
ಈಗಿನ ಜೀವನ ಶೈಲಿ, ವಾತಾವರಣ, ನೀರಿನಿಂದ ತಲಗೂದಲನ್ನು ಕಳೆದುಕೊಳ್ಳುತ್ತಾ ಇದ್ದಾರೆ. ಇದರಿಂದ ಇನ್ನೊಬ್ಬರ ನಗುವಿಗೆ ಕಾರಣವಾಗಿದ್ದೇವೆ ಎಂಬುದು ಅನೇಕ ಜನರ ಗೋಳಾಗಿದೆ. ಇದರಿಂದ ಬೋಳು ತಲೆಯ ಪುರುಷರ ಸಂಘ ಸರ್ಕಾರಕ್ಕೆ ಒಂದು ಮನವಿಯನ್ನು ಕೋರಿದ್ದಾರೆ.
2/ 9
ಹೌದು, ಬೇಸತ್ತ ಬೋಳು ತಲೆಯ ಪುರುಷರು ಸರ್ಕಾರವು ನಮ್ಮ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇದರಿಂದ ರಾಜ್ಯ ಸರ್ಕಾರವು ಎಲ್ಲಾ ಬೋಳು ತಲೆಯ ಪರುಷರಿಗೆ ಸಂಕ್ರಾಂತಿ ಉಡುಗೊರೆಯಾಗಿ ಪಿಂಚಣಿಯನ್ನು ಘೋಷಿಸಬೇಕು ಎಂದು ಮನವಿ ಮಾಡಿದೆ.
3/ 9
ನಾನಾರೀತಿಯ ಅವಮಾನವನ್ನು ಎದುರಿಸುತ್ತಿರುವ ಪುರುಷರು, 6000ರೂ. ಪಿಂಚಣಿ ನೀಡುವಂತೆ ತೆಲಂಗಾಣದ ಸಿದ್ದಪೇಟೆ ಜಿಲ್ಲೆಯ ತಂಗಲ್ಲಪಲ್ಲಿ ಗ್ರಾಮದ ಬೋಳು ತಲೆಯ ಪುರುಷರ ಗುಂಪು ಮನವಿ ಮಾಡಿದೆ.
4/ 9
41 ವರ್ಷದ ಪಿ ಅಂಜಿ ಮಾತನಾಡಿ, ಜನರು ನಮ್ಮ ಮೇಲೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಾರೆ. ಇದರಿಂದ ಟೀಕೆಗೆ ಒಳಗಾಗುತ್ತಿದ್ದೇವೆ. ನಮ್ಮನ್ನು ನೋಡಿ ನಗುತ್ತಾರೆ, ಇದು ನಮಗೆ ಮಾನಸಿಕವಾಗಿ ಒತ್ತಡವನ್ನು ನೀಡುತ್ತಾ ಇದೆ. ಬದುಕಲೇ ಸಂಕಟ ಆಗ್ತಾ ಇದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
5/ 9
41 ವರ್ಷದ ಪಿ ಅಂಜಿ ಮಾತನಾಡಿ, ಜನರು ನಮ್ಮ ಮೇಲೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಾರೆ. ಇದರಿಂದ ಟೀಕೆಗೆ ಒಳಗಾಗುತ್ತಿದ್ದೇವೆ. ನಮ್ಮನ್ನು ನೋಡಿ ನಗುತ್ತಾರೆ, ಇದು ನಮಗೆ ಮಾನಸಿಕವಾಗಿ ಒತ್ತಡವನ್ನು ನೀಡುತ್ತಾ ಇದೆ. ಬದುಕಲೇ ಸಂಕಟ ಆಗ್ತಾ ಇದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
6/ 9
50ರ ಹರೆಯದ ವೆಲ್ಡಿ ಬಾಲಯ್ಯ ಎಂಬುವವರು ಬೋಳು ತಲೆಯನ್ನು ಹೊಂದಿಲ್ಲ ಅಂದ್ರೂ ಕೂಡ ಈ ಸಂಘದ ಅಧ್ಯಕ್ಷರಾಗಿದ್ದಾರೆ. ಈ ಸಂಘಕ್ಕೆ ಸಾಕಷ್ಟು ಬೆಂಬಲವನ್ನು ನೀಡಿದ್ದಾರೆ. ಈ ಸಂಘಕ್ಕೆ ಅನೇಕ ಪದಾಧಿಕಾರಿಗಳು ಕೂಡ ಇದ್ದಾರೆ.
7/ 9
ವಿಧವೆಯರು, ವೃದ್ಧರು, ದೈಹಿಕ ವಿಕಲಚೇತನರು ಮತ್ತು ಇತರರಿಗೆ ಸರ್ಕಾರವು ಪಿಂಚಣಿ ನೀಡುತ್ತಿರುವುದರಿಂದ ಪೆನ್ಷನ್ಗಾಗಿ ತಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬೋಳು ತಲೆಯ ಪುರುಷರ ಸಂಘ ಒತ್ತಾಯಿಸಿದೆ.
8/ 9
ಜನವರಿ 5 ರಂದು ಈ ಗ್ರಾಮದಲ್ಲಿ ಬೋಳು ತಲೆ ಪುರುಷರ ಸಂಘ ಅನೌಪಚಾರಿಕ ಸಭೆಯನ್ನು ಮಾಡಲಾಗಿದೆ. ಹಾಗೆಯೇ ಸಂಕ್ರಾಂತಿ ಹಬ್ಬದ ನಂತರ ಮತ್ತೊಂದು ಸಭೆ ನಡೆಸಲು ನಿರ್ಧಾರ ಮಾಡಿದೆ.
9/ 9
ಈ ಸಂಘದಲ್ಲಿ ಕೂದಲು ಕಳೆದುಕೊಂಡಿರುವ 30ಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಬೋಳು ತಲೆಗಾಗಿ 6ಸಾವಿರ ಪಿಂಚಣಿ ಬೇಕು ಎಂದು ಸರ್ಕಾರಕ್ಕೆ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಪಿಂಚಣಿಯಲ್ಲಿ ನಾವು ನಮ್ಮ ಕೂದಲಿಗೆ ಚಿಕಿತ್ಸೆಯನ್ನು ಮಾಡಿಕೊಳ್ಳುತ್ತೇವೆ ಎಂದು ಜನರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.