ಶಿಕ್ಷಕನೊಬ್ಬ ವಿದ್ಯಾರ್ಥಿಯ ತಾಯಿಗೆ ಬೆತ್ತಲೆ ಫೋಟೋ ಕಳುಹಿಸಿದ್ದಾನೆ. ಕ್ಲೈವ್ ಬೀಟ್ಟಿ ಎಂಬ ನಾರ್ತ್ ವೇಲ್ಸ್ ಶಾಲೆಯ ಶಿಕ್ಷಕ ಒಂದನೇ ತರಗತಿಯ ಮಗುವಿನ ತಾಯಿಗೆ ‘ಐ ಲವ್ ಯುವರ್ ಮಮ್ಮಿ‘ ಎಂದಿದ್ದಾನೆ.
News18 Kannada | September 12, 2020, 2:41 PM IST
1/ 9
ಶಿಕ್ಷಕನು ವಿದ್ಯಾರ್ಥಿಯನ್ನು ತಿದ್ದಿ, ತೀಡಿ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುವಂತಹ ಮಾರ್ಗದರ್ಶನ ತೋರುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕ ಏನು ಮಾಡಿದ್ದಾನೆ ಗೊತ್ತಾ? ಆತ ಮಾಡಿರುವ ಕೃತ್ಯ ಶಿಕ್ಷಕ ವೃಂದಕ್ಕೆ ನಾಚಿಕೆ ತರಿಸುವಂತೆ ಮಾಡಿದೆ. ಅಷ್ಟಕ್ಕೂ ಆ ಘಟನೆ ಏನು? ಇಲ್ಲಿದೆ ಮಾಹಿತಿ.
2/ 9
ಶಿಕ್ಷಕನೊಬ್ಬ ವಿದ್ಯಾರ್ಥಿಯ ತಾಯಿಗೆ ಬೆತ್ತಲೆ ಫೋಟೋ ಕಳುಹಿಸಿದ್ದಾನೆ. ಕ್ಲೈವ್ ಬೀಟ್ಟಿ ಎಂಬ ನಾರ್ತ್ ವೇಲ್ಸ್ ಶಾಲೆಯ ಶಿಕ್ಷಕ ಒಂದನೇ ತರಗತಿಯ ಮಗುವಿನ ತಾಯಿಗೆ ‘ಐ ಲವ್ ಯುವರ್ ಮಮ್ಮಿ‘ ಎಂದಿದ್ದಾನೆ.
3/ 9
ಅಷ್ಟು ಮಾತ್ರವಲ್ಲದೆ, ವಿದ್ಯಾರ್ಥಿಯ ಬಳಿ ನಿನ್ನ ತಾಯಿ ಮದುವೆ ಬಟ್ಟೆಯನ್ನು ಧರಿಸಿದಂತೆ ಚಿತ್ರ ಬಿಡಿಸಿಕೊಡು ಎಂದಿದ್ದಾನೆ. ಅಷ್ಟು ಸಾಲದಕ್ಕೆ ಶಿಕ್ಷಕ ಬೆತ್ತಲೆಯಾಗಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಕಳುಹಿಸಿದ್ದಾನೆ.
4/ 9
ಈ ವಿಚಾರ ಶಾಲೆಯ ಆಡಳಿತ ಮಂಡಳಿಗೆ ತಿಳಿದು ಕೊನೆಗೆ ಶಿಕ್ಷಕನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶಿಕ್ಷಕ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ.
5/ 9
ಒಂದನೇ ತರಗತಿ ಬಾಲಕನ ತಂದೆ ಶಿಕ್ಷಕ ಕಳುಹಿಸಿರುವ ಸೆಲ್ಫಿಯನ್ನು ಶಾಲೆಯ ಆಡಳಿತ ಮಂಡಳಿ ಬಳಿ ಬಂದು ತೋರಿಸಿದ್ದಾನೆ. ಈ ವಿಚಾರ ತಿಳಿದ ಶಾಲಾ ಮಂಡಳಿ ಬೆಚ್ಚಿಬಿದ್ದಿದ್ದು, ಕೂಡಲೇ ಶಿಕ್ಷಕಕನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ
6/ 9
ಶಿಕ್ಷಕ ಕ್ಲೈವ್ ಬೀಟ್ಟಿ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿದ್ಯಾರ್ಥಿಯ ತಾಯಿಯೊಂದಿಗೆ ಸಂಪರ್ಕದಲ್ಲಿದ್ದನು. ಹಾಗಾಗಿ ಅದರ ಮೂಲಕ ಮೂರು ಬೆತ್ತಲೆ ಸೆಲ್ಫಿಗಳನ್ನು ಕ್ಲಿಕ್ಕಿಸಿ ಆಕೆಗೆ ಕಳುಹಿಸಿದ್ದಾನೆ.
7/ 9
ಆದನ್ನು ವೀಕ್ಷಿಸಿದ ನೋಡಿ ಆಕೆ ತನ್ನ ಪತಿಯ ಬಳಿ ಹೇಳಿಕೊಂಡಿದ್ದಾಳೆ. ಇದರಿಂದ ಸಿಟ್ಟುಗೊಂಡ ಪತಿ ಶಾಲೆಗೆ ಬಂದು ಅಲ್ಲಿನ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ.
8/ 9
ಸದ್ಯ ಶಿಕ್ಷಕ ಕ್ಲೈವ್ ಬೀಟ್ಟಿ ಮಾಡಿರುವ ತಪ್ಪಿಗೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಯ ಪೋಷಕರ ಬಳಿ ಕ್ಷಮಾಪಣೆ ಕೇಳಿದೆ.
9/ 9
ಶಿಕ್ಷಕ ಕ್ಲೈವ್ ಬೀಟ್ಟಿ ಮೇಲೆ ಕೇಸು ದಾಖಲಾಗಿದೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ವರ್ತನೆ ಮಾಡಿರುವ ಕಾರಣ ಕ್ಲೈವ್ ಬೀಟ್ಟಿಗೆ ಶಿಕ್ಷೆ ವಿಧಿಸಲಾಗಿದೆ