ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ಮಹಲ್ ಐತಿಹಾಸಿಕ ಸ್ಮಾರಕ. ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಭಾರತದ ಈ ಕಟ್ಟಡವು ಪ್ರೇಮದ ಸಂಕೇತ ಎಂದು ಖ್ಯಾತಿ ಪಡೆದಿದೆ. ಆದರೆ ಇದೇ ಕಟ್ಟಡವನ್ನು ಹೋಲುವ ಮತ್ತೊಂದು ಪ್ರೇಮ ಸೌಧ ನಮ್ಮ ನೆರೆ ರಾಷ್ಟ್ರದಲ್ಲಿದೆ ಎಂದರೆ ನಂಬುತ್ತೀರಾ? ಹೌದು, ಬಾಂಗ್ಲಾದೇಶದಲ್ಲಿ ತಾಜ್ ಮಹಲನ್ನು ಹೋಲುವ ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ಈ ಕಟ್ಟಡವು ಭಾರತದ ಐತಿಹಾಸಿಕ ಸ್ಮಾರಕದ ನಕಲಿ ರೂಪದಂತಿದೆ.