Puducherry Santa Claus: ನೀರಿನೊಳಗೆ ಕ್ರಿಸ್ಮಸ್ ತಾತ! ಎಲ್ಲರಿಗೂ ವಿಶೇಷವಾಗಿ ವಿಷ್ ಮಾಡಿ, ಗಿಫ್ಟ್ ಕೊಟ್ಟೇ ಬಿಟ್ರು!
ನಿಮ್ಮ ಮನೆಗಳಿಗೆ ಕ್ರಿಸ್ಮಸ್ ತಾತಾ ಬಂದಿದ್ದಾರ? ಯಾವೆಲ್ಲಾ ಗಿಫ್ಟ್ಗಳು ಸಿಕ್ಕಿದೆ? ಇಲ್ಲೊಂದು ವಿಶೇಷ ಕ್ರಿಸ್ಮಸ್ ತಾತ ನೀರಿನೊಳಗೆ ಹೋಗಿ ವಿಷ್ ಮಾಡಿ, ಗಿಫ್ಟ್ ಕೊಟ್ಟಿದ್ದಾರೆ ಅಂತೆ.
ಕ್ರಿಸ್ಮಸ್ಗಾಗಿ ಯಾವ ಯಾವ ರೀತಿಯಾಗಿ ಎಲ್ಲ ವಿಷ್ಗಳನ್ನು ಮಾಡಬಹುದು ಅಂತ ನಿಮಗೆ ಗೊತ್ತಾ? ಅದ್ರಲ್ಲೂ ಕ್ರಿಸ್ಮಸ್ ತಾತ ಯಾವ ರೀತಿಯಾಗಿ ಸೀಕ್ರೇಟ್ ಆಗಿ ಗಿಫ್ಟ್ಗಳನ್ನು ಕೊಡುತ್ತಾರೆ ಎಂದು ಹೇಳಲು ಆಗೋಲ್ಲ. ಹೀಗಾಗಿ ಮನೆಮಂದಿಯೆಲ್ಲಾ ಕಾಯುತ್ತಾ ಇರುತ್ತಾರೆ. ಗಿಫ್ಟ್ ಅಂತೂ ಸಖತ್ ಸೃಜನಾತ್ಮಕವಾಗಿ ಇರುತ್ತದೆ ಬಿಡಿ.
2/ 8
ಸ್ಕೂಬಾ ಡೈವಿಂಗ್ ಮೂಲಕ ಇದೀಗ ಎಲ್ರಿಗೂ ವಿಷ್ ಮಾಡಿದ್ದಾರೆ ಇಲ್ಲೊಂದು ಕ್ರಿಸ್ಮಸ್ ತಾತ. ಅರವಿಂದ್ ಎಂಬುವವರು ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಆಳ ಸಮುದ್ರದ ಈಜು ತರಬೇತಿ ನೀಡುತ್ತಿದ್ದಾರೆ.
3/ 8
ಟೆಂಪಲ್ ಅಡ್ವೆಂಚರ್ಸ್ ಎಂಬ ಆಳವಾದ ಸಮುದ್ರ ಈಜು ತರಬೇತಿಯನ್ನು ಸುಮಾರು ವರ್ಷಗಳಿಂದ ಶಾಲೆಯನ್ನು ನಡೆಸುತ್ತಿದ್ದಾರೆ. ಆಳ ಸಮುದ್ರದಡಿಯಲ್ಲಿ ಆಗಾಗ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.
4/ 8
ಆಳ ಸಮುದ್ರದಡಿಯಲ್ಲಿ ಕಾಲಕಾಲಕ್ಕೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಈ ಬಾರಿ ಕ್ರಿಸ್ ಮಸ್ ಹಬ್ಬಕ್ಕೆ ಏನಾದ್ರೂ ವಿಭಿನ್ನವಾಗಿ ಇರಬೇಕು, ಇಲ್ಲಿಗೆ ಬರುವ ತರಬೇತುದಾರರನ್ನು ರಂಜಿಸಬೇಕು ಎಂಬ ನಿಟ್ಟಿನಲ್ಲಿ ಅವೃಎ ಕ್ರಿಸ್ಮಸ್ ತಾತನ ವೇಷವನ್ನು ಧರಿಸಿದ್ದಾರೆ.
5/ 8
ಈ ವೇಳೆ ಕ್ರಿಸ್ ಮಸ್ ಹಬ್ಬದಂದು ಅರವಿಂದ್ ಸೇರಿದಂತೆ 4 ಮಂದಿ ಆಳ ಸಮುದ್ರದ ಈಜು ಪಟುಗಳು ಸಾಂತಾಕ್ಲಾಸ್ ವೇಷ ಧರಿಸಿದ್ದರು. ನಂತರ ಪುದುಚೇರಿ ಗಾಂಧಿ ಪ್ರತಿಮೆಯಿಂದ ಸಮುದ್ರದಲ್ಲಿ 6 ಕಿ.ಮೀ ಸಾಗಿ 60 ಅಡಿ ಸಮುದ್ರದ ಕೆಳಗೆ ಹೋದರು.
6/ 8
ಕ್ರಿಸ್ಮಸ್ ತಾತನ ವೇಷವನ್ನು ಇವರು ಧರಿಸಿ ಆಳ ಸಮುದ್ರಕ್ಕೆ ಇಳಿದರು, ಅಲ್ಲಿಗೆ ಬಂದಂತಹ ಸ್ಕೂಬಾ ಡೈವಿಂಗ್ ರವರಿಗೆ ನೀರಿನೊಳಗೆ ವಿಷ್ ಮಾಡಿದ್ದಾರೆ. ಹಾಗೆಯೇ ಚಾಕಲೇಟ್ಸ್ಗಳನ್ನು ಹಂಚಿದ್ದಾರೆ.
7/ 8
ಬಂದವರಿಗೆಲ್ಲರಿಗೂ ಚಾಕಲೇಟ್ಗಳನ್ನು ಹಂಚುತ್ತಾ, ತನ್ನ ಸ್ಕೂಬಾ ಡೈವಿಂಗ್ಗೆ ಬರುವವರಿಗೆ ಕ್ರಿಸ್ಮಸ್ ಪರವಾಗಿ ಕಡಿಮೆ ರಿಯಾಯಿತಿಯಲ್ಲಿ ಸ್ಕೂಬಾ ಡೈವಿಂಗ್ಗೆ ಅವಕಾಶ ಮಾಡಿಕೊಟ್ರು.
8/ 8
ಪೋಟೋದಲ್ಲಿ ನೀವು ಕಾಣಬಹುದು. ಅರವಿಂದ್ರವರು ಎಷ್ಟು ಹುಮ್ಮಸ್ಸಿನಿಂದ ಎಲ್ಲರನ್ನೂ ರಂಜಿಸಿದ್ದಾರೆ ಎಂದು. ನಾನಾ ರೀತಿಯ ಶೈಲಿಯಲ್ಲಿ ಸ್ವಿಮ್ಮಿಂಗ್ಗಳನ್ನು ಮಾಡಿದ್ದಾರೆ ವಿಶೇಷ ಕ್ರಿಸ್ಮಸ್ ತಾತ.