Luxurious Hotel: ಚಿನ್ನದ ತಟ್ಟೆಯಲ್ಲಿ ಆಹಾರ ಸೇವನೆ, ಮಲಗಲು ಬೆಳ್ಳಿಯ ಹಾಸಿಗೆ.. ಭಾರತದ ಈ ಐಷಾರಾಮಿ ಹೋಟೆಲ್ ಬಗ್ಗೆ ಕೇಳಿದ್ದೀರಾ?
The Raj Palace: ಈ ಹೋಟೆಲ್ನಲ್ಲಿ 78 ಐಷಾರಾಮಿ ಕೊಠಡಿಗಳಿವೆ. ಈ ಕೊಠಡಿಗಳಲ್ಲಿ ಸುಂದರವಾಗಿ ಕೆತ್ತಿದ ಅಮೃತಶಿಲೆಯನ್ನು ಮಾಡಲಾಗಿದೆ. ರಾಜ್ ಪ್ಯಾಲೇಸ್ ಹೋಟೆಲ್ 2007 ರಲ್ಲಿ 'ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿ' ವಿಭಾಗದಲ್ಲಿ ಅತ್ಯುತ್ತಮ ಹೆರಿಟೇಜ್ ಹೋಟೆಲ್ ಪ್ರಶಸ್ತಿಯನ್ನು ಪಡೆದಿದೆ.
ಭಾರತದಲ್ಲಿನ ಹೋಟೆಲ್ ಒಂದರಲ್ಲಿರುವ ಸ್ನಾನ ಗೃಹದ ಟ್ಯಾಪ್ ಅನ್ನು ಚಿನ್ನದಿಂದ ಮಾಡಲಾಗಿದೆ. ಅಂದಹಾಗೆಯೇ ಆ ಹೋಟೆಲ್ ಯಾವುದು ಗೊತ್ತಾ?. ಹೋಟೆಲ್ನ ಹೆಸರು 'ದಿ ರಾಜ್ ಪ್ಯಾಲೇಸ್'. ಇದು ರಾಜಸ್ಥಾನದ ಜೈಪುರದಲ್ಲಿದೆ. ಏಷ್ಯಾದ ಅತ್ಯಂತ ದುಬಾರಿ ಹೋಟೆಲ್ ಎಂದು ಪರಿಗಣಿಸಲಾಗಿದೆ.
2/ 5
ಈ ಹೋಟೆಲ್ನ ವಿಶೇಷವೆಂದರೆ ಇಲ್ಲಿ ಅತಿಥಿಗಳನ್ನು ಬೆಳ್ಳಿಯ ಹಾಸಿಗೆಗಳಲ್ಲಿ ಮಲಗುವ ಅವಕಾಶ ಕಲ್ಪಿಸಲಾಗಿದೆ. ಹೋಟೆಲ್ನ ಎಲ್ಲಾ ಕೊಠಡಿಗಳು ಒಂದಕ್ಕಿಂತ ಒಂದು ದುಬಾರಿಯಾಗಿ ನಿರ್ಮಿಸಲಾಗಿದೆ.
3/ 5
ಈ ಹೋಟೆಲ್ನ ವಿಶೇಷ ದರ್ಬಾರ್ ಸೂಟ್ನಲ್ಲಿ ರಾತ್ರಿ ತಂಗಲು ಕೊಠಡಿಯ ಬಾಡಿಗೆ 18 ಲಕ್ಷ ರೂಪಾಯಿ ಪಾವತಿಸಬೇಕು. ಅತಿಥಿಗಳಿಗೆ ವಿಶೇಷ ಭಕ್ಷ್ಯಗಳಿಂದ ಅಲಂಕರಿಸಲ್ಪಟ್ಟ ಚಿನ್ನದ ತಟ್ಟೆಯನ್ನು ನೀಡಲಾಗುತ್ತದೆ.
4/ 5
ಈ ಹೋಟೆಲ್ನಲ್ಲಿ 78 ಐಷಾರಾಮಿ ಕೊಠಡಿಗಳಿವೆ. ಈ ಕೊಠಡಿಗಳಲ್ಲಿ ಸುಂದರವಾಗಿ ಕೆತ್ತಿದ ಅಮೃತಶಿಲೆಯನ್ನು ಮಾಡಲಾಗಿದೆ. ರಾಜ್ ಪ್ಯಾಲೇಸ್ ಹೋಟೆಲ್ 2007 ರಲ್ಲಿ 'ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿ' ವಿಭಾಗದಲ್ಲಿ ಅತ್ಯುತ್ತಮ ಹೆರಿಟೇಜ್ ಹೋಟೆಲ್ ಪ್ರಶಸ್ತಿಯನ್ನು ಪಡೆದಿದೆ.
5/ 5
ಅಮಿತಾಭ್ ಬಚ್ಚನ್ ಅವರು ತಮ್ಮ ಬೋಲ್ ಬಚ್ಚನ್ ಚಿತ್ರವನ್ನು ಈ ಹೋಟೆಲ್ನಲ್ಲಿ ಚಿತ್ರೀಕರಿಸಿದ್ದಾರೆ. ಇದಲ್ಲದೇ ಈ ಹೋಟೆಲ್ ನಲ್ಲಿ ಅಕ್ಷಯ್ ಕುಮಾರ್ ಮೇಜ್ ಚಿತ್ರೀಕರಣ ಮಾಡಿದ್ದಾರೆ. ಟಿವಿ ಧಾರಾವಾಹಿ ರತನ್ ಕಾ ಸ್ವಯಂವರ್ ಮತ್ತು ಝಾನ್ಸಿ ಕಿ ರಾಣಿ ಶೂಟಿಂಗ್ ಕೂಡ ಇದೇ ಹೋಟೆಲ್ನಲ್ಲಿ ನಡೆದಿದೆ.