ಸತ್ಯ ಒಂದಲ್ಲಾ ಒಂದು ದಿನ ಹೊರಗೆ ಬರುತ್ತದೆ. ಕೆಲವೊಮ್ಮೆ ಅಘಾತಕಾರಿ ಘಟನೆ ನಡೆದಾಗ ಅದರ ಹಿಂದೆ ರಾಜಕಾರಣಿ, ಶ್ರೀಮಂತ ಉದ್ಯಮಿ ಅಥವಾ ಸೆಲೆಬ್ರಿಟಿ ಕೈವಾಡವಿದ್ದರು ಸಹ ಕೆಲವೊಮ್ಮೆ ಅದು ಶ್ರೀಸಾಮಾನ್ಯರ ಗಮನಕ್ಕೆ ಬಾರದೆ ಅಲ್ಲೇ ಮರೆಮಾಚಲು ಯತ್ನಿಸುತ್ತಾರೆ. ಆದರೆ ಕೆಲವೊಂದು ವಿಚಾರ ಅಥವಾ ರಹಸ್ಯಗಳು ಧೀರ್ಘಕಾಲದವರೆಗೆ ಉಳಿಯಲು ಸಾಧ್ಯವಿಲ್ಲ ಅದು ಹೊರಗೆ ಬಂದೇ ಬರುತ್ತದೆ. ಅದರಂತೆ ದೇಶವೊಂದರ ಮುನ್ನಡೆಸುವ ಜವಬ್ದಾರಿ ಹೊತ್ತಿದ್ದ ರಾಜನ ರಹಸ್ಯ ಸಂಗತಿಗಳು ಈಗ ಹೊರಗೆ ಬಂದಿದೆ.
ಪ್ರಪಂಚದ ವಿವಿಧ ದೇಶಗಳ ರಾಜರು ಮತ್ತು ಚಕ್ರವರ್ತಿಗಳಿಗೆ ಸಂಬಂಧಿಸಿದ ಅನೇಕ ಕಥೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಕೆಲವೊಂದು ವಿಚಾರ ಇಂದಿಗೂ ಚರ್ಚೆಯ ವಿಷಯವಾಗಿ ಉಳಿದಿದೆ. ಇನ್ನು ಕೆಲವು ರಾಜರುಗಳ ಕುರಿತಾದ ಕೆಟ್ಟ ರಹಸ್ಯಗಳು ಹೊರಗೆ ಬರುವುದೇ ಇಲ್ಲ. ಆದರೆ ಸ್ಟೇನ್ ಮಾಜಿ ರಾಜನ ಕುರಿತಾದ ಕೆಲವು ಸಂಗತಿ ಈಗ ವೈರಲ್ ಆಗಿದೆ. ಅದರ ಕುರಿತಾದ ತಿಳಿಯಬೇಕಾದರೆ ಈ ಸ್ಟೋರಿ ಓದಿ….
ಜೋಸ್ ಮ್ಯಾನುಯೆಲ್ ವಿಲ್ಲಾರೆಜೊ ಹೇಳಿದಂತೆ ಜುವಾನ್ ಕಾರ್ಲೋಸ್ ಅವರು 5000 ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು. ಅವರ ಚಟ ರಾಜ್ಯದ ಸಮಸ್ಯೆಯಾಗಿ ಪರಿಣಮಿಸಿದೆ ಎಂದರು. ಈ ಸಮಸ್ಯೆಯನ್ನು ಹೋಗಲಾಡಿಸಲು, ಅವರ ದೇಹದಲ್ಲಿ ಪುರುಷ ಹಾರ್ಮೋನುಗಳನ್ನು ಕಡಿಮೆ ಮಾಡಲು ಕೊನೆಗೆ ಸ್ತ್ರೀ ಹಾರ್ಮೋನುಗಳನ್ನು ಹಾಕಬೇಕಾಗಿತ್ತು ಎಂಬ ರಹಸ್ಯವಾಗಿದ್ದ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಡೈಲಿ ಮೇಲ್ನಲ್ಲಿನ ವರದಿಯು ಜುವಾನ್ ರಾಜಕುಮಾರಿ ಡಯಾನಾಳನ್ನು ತನ್ನ ಗೆಳತಿಯಾಗಲು ಸಹ ಸಂಪರ್ಕಿಸಿದ್ದಾನೆ ಎಂದು ಹೇಳಿಕೊಂಡಿದೆ, ಆದರೆ ನಾವು ಈ ವರದಿಯನ್ನು ನಿಜವೆಂದು ಹೇಳುವುದಿಲ್ಲ. ಸ್ಪ್ಯಾನಿಷ್ ಇತಿಹಾಸಕಾರ ಅಮೆಡಿಯೊ ಮಾರ್ಟಿನೆಜ್ ಇಂಗಲ್ಸ್ ಜುವಾನ್ ಬಗ್ಗೆ ‘‘ಜುವಾನ್ ಕಾರ್ಲೋಸ್: ದಿ ಕಿಂಗ್ ಆಫ್ 5,000 ಲವರ್ಸ್’’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸ್ಪ್ಯಾನಿಷ್ ಗಾಯಕಿ, ಬೆಲ್ಜಿಯನ್ ಗವರ್ನೆಸ್ ಮತ್ತು ಇಟಾಲಿಯನ್ ರಾಜಕುಮಾರಿಯೊಂದಿಗಿನ ಅವರ ಸಂಬಂಧದ ವರದಿಗಳೂ ಇವೆ. ಜುವಾನ್ ಕೇವಲ 6 ತಿಂಗಳಲ್ಲಿ 62 ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಪುಸ್ತಕ ಹೇಳುತ್ತದೆ ವರದಿಯಲ್ಲಿ ತಿಳಿಸಿದೆ.