ನಿಮ್ಮ ತಲೆಯಲ್ಲಿ ಕೆಲವೊಮ್ಮೆ ಹಾಡು ಹಾಡುತ್ತಿರಬೇಕು ಎಂದೆನಿಸುತ್ತಿರುತ್ತದೆ. ಅದರಲ್ಲೂ ಎಷ್ಟೋ ಸಮಯ ಒಂದೇ ಹಾಡು ಹಾಡುತ್ತಿರುತ್ತೀರಿ. ಈ ಹಾಡು ನಿಮ್ಮ ಮನಸ್ಸಿನಲ್ಲಿ ಎಷ್ಟು ಅಂಟಿಕೊಂಡಿದೆ ಎಂದರೆ ನೀವು ಅದನ್ನು ಮತ್ತೆ ಮತ್ತೆ ಗುನುಗಬೇಕು ಎಂದೆನಿಸುತ್ತದೆ. ಅನೇಕ ಬಾರಿ ನೀವು ಬಯಸದೆಯೇ ಆ ಹಾಡನ್ನು ಗುನುಗಲು ಪ್ರಾರಂಭಿಸುತ್ತೀರಿ. ವಿಜ್ಞಾನಿಗಳು ಹೇಳುವಂತೆ ಜಗತ್ತಿನ 98 ಪ್ರತಿಶತ ಜನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಇದನ್ನು ಅನುಭವಿಸಿರುತ್ತಾರೆ. ಹಾಗಿದ್ರೆ ಇದಕ್ಕೆ ಕಾರಣಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಮೀಡಿಯಾದಲ್ಲಿ ಹಾಡನ್ನು ಮತ್ತೆ ಮತ್ತೆ ಗುನುಗುವ ಬಗ್ಗೆ ಅಧ್ಯಯನ ನಡೆಸಲಾಗಿದೆ. ಲೀಡ್ ಸ್ಟಡಿ ಪ್ರೊಫೆಸರ್ ಎಮೆರಿ ಶುಬರ್ಟ್ ಪ್ರಕಾರ, ಒಂದೇ ರಾಗವನ್ನು ಸಂಗೀತದಲ್ಲಿ ಹಲವು ಬಾರಿ ಪುನರಾವರ್ತಿಸಲಾಗುತ್ತದೆ. ಆದಾಗ್ಯೂ, ಒಂದು ಹಾಡು ಜನರ ಮನಸ್ಸಿನಲ್ಲಿ ಉಳಿಯಲು ಅದು ಆಕರ್ಷಕವಾಗಿರಬೇಕು ಎಂದು ಫಲಿತಾಂಶಗಳು ತೋರಿಸುತ್ತವೆ. ಇದಕ್ಕಾಗಿ ಹಲವಾರು ರೀತಿಯಲ್ಲಿ ಸಂಶೋಧನೆಯನ್ನೂ ಮಾಡಲಾಗಿದೆ.
ಸಂಶೋಧನಾ ವರದಿಯ ಪ್ರಕಾರ, ನೀವು ಅಂತಹ ಸೂಕ್ಷ್ಮ ಕೆಲಸವನ್ನು ಮಾಡುತ್ತಿದ್ದರೆ ಮತ್ತು ನಿಮ್ಮ ಸಂಪೂರ್ಣ ಗಮನವು ಅದರ ಮೇಲೆ ಇದ್ದರೆ, ನೀವು ಯಾವುದೇ ಹಾಡನ್ನು ಪದೇ ಪದೇ ಪುನರಾವರ್ತಿಸುವುದಿಲ್ಲ. ಜೊತೆಗೆ ನಿಮ್ಮ ಕೆಲಸವನ್ನು ಬಹಳ ಗಮನದಿಂದ ಮಾಡಲು ನೀವು ಬಯಸುತ್ತೀರಿ. ಆದರೆ ಅಂತಹ ಸಂದರ್ಭದಲ್ಲೂ ಕೆಲವೊಂದು ಹಾಡುಗಳು ನಿಮ್ಮ ಮನಸ್ಸಿಗೆ ಬಂದ್ರೆ ಮತ್ತೆ ಗುನುಗಳು ಆರಂಭಿಸುತ್ತೀರಿ.