ಅಸಲಿಗೆ ನಡೆದದ್ದು ಹೀಗೆ: ಚೀನಾದ ಯೀ ಎಂಬ ಮಹಿಳೆಗೆ ಕಿವಿಯೊಳಗೆ ಅದೇನೋ ಕಿರಿಕಿರಿ ಆಗುತ್ತಿತ್ತು ಮತ್ತು ಜೊತೆ ವಿಚಿತ್ರವಾದ ಶಬ್ಧವು ಕೂಡ ಬರತೊಡಗಿತ್ತು. ವೈದ್ಯರ ಬಳಿ ಹೋಗುವ ಮೊದಲಿನ ಸಂಜೆ, ಹೊರಾಂಗಣದಲ್ಲಿ ಇದ್ದಾಗಲೇ ಆಕೆ ಮೊದಲ ಬಾರಿ ಆ ಸಮಸ್ಯೆ ಅನುಭವಕ್ಕೆ ಬಂದಿತ್ತು. ಕಿವಿಯೊಳಗಿನ ತುರಿಕೆಯನ್ನು ಇನ್ನು ಸಹಿಸಲು ಸಾಧ್ಯವೇ ಇಲ್ಲ ಎಂದೆನಿಸತೊಡಗಿದಾಗ, ಆಕೆ ತನ್ನ ಕಿವಿಗೆ ಏನೋ ಸೋಂಕು ತಗುಲಿರಬೇಕೆಂದು ವೈದ್ಯರನ್ನು ಭೇಟಿ ಮಾಡಲು ನಿರ್ಧರಿಸಿದಳು.
ಆತನಿಗೆ ದೀರ್ಘ ಕಾಲದಿಂದ ತನ್ನ ಕಿವಿಯೊಳಗೆ ನಿರಂತರ ತೀವ್ರ ತುರಿಕೆ ಉಂಟಾಗುತ್ತಿತ್ತು. ವೈದ್ಯರು ಮೈಕ್ರೋಸ್ಕೋಪ್ ಬಳಸಿ, ಆತನ ಕಿವಿಯ ಒಳ ಭಾಗ ನೋಡಿದಾಗ, ಕಿವಿಯ ಕಾಲುವೆಯಲ್ಲಿ ಒಂದು ಬೂದು ಬಣ್ಣದ ಜೇಡ ತೆವಳುತ್ತಿರುವುದು ಗಮನಕ್ಕೆ ಬಂತು. ಕೆಲವು ಸಮಯದಿಂದ ಆತನ ಕಿವಿಯೊಳಗೆ ವಾಸವಿದ್ದ ಆ ಜೇಡವನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದರು. ಅದೃಷ್ಟವಶಾತ್, ಆತನಿಗೆ ಈ ಸಮಸ್ಯೆಯ ಕಾರಣದಿಂದ ಯಾವುದೇ ಗಾಯಗಳಾಗಿಲ್ಲ.